ಹುಡ್ಗೀರು ಮೆಚ್ಚುವ ಪ್ರೊಫೈಲ್‌

ಭಾಷೆಯ ಬಳಕೆ ಮತ್ತು ವ್ಯಾಕರಣದ ಬಗ್ಗೆ ಎಚ್ಚರ: ಪ್ರೊಫೈಲ್‌ ಬರೆಯುವಾಗ ಅಕ್ಷರಗಳ ಬಗ್ಗೆ ಗಮನವಿರಲಿ. ಯಾವುದೇ ವಿಷಯವನ್ನು ತಿಳಿಸುವಾಗ ಒಮ್ಮೆ ಪರಿಶೀಲಿಸಿ, ಪರಿಷ್ಕರಿಸಿ ಖಚಿತ ಪಡಿಸಿಕೊಳ್ಳಿ, ತಪ್ಪುಗಳು ಇಲ್ಲದ ರೀತಿಯಲ್ಲಿ ಪ್ರೊಫೈಲ್‌ ಬರೆಯಿರಿ. ಭಾಷೆಯ ಬಗ್ಗೆ ಅರಿವಿಲ್ಲದ ರೀತಿ ಪದಗಳನ್ನು ಸೇರಿಸಬೇಡಿ, ಭಾಷೆ ಮತ್ತು ವ್ಯಾಕರಣ ದೋಷವುಳ್ಳ ಪ್ರೊಫೈಲ್‌ಗಳನ್ನು ಹುಡುಗಿಯರು ಇಷ್ಟಪಡುವುದಿಲ್ಲ.

ಹುಡ್ಗೀರು ಮೆಚ್ಚುವ ಪ್ರೊಫೈಲ್‌

ಆನ್‌ಲೈನ್‌ ಟೂಲ್‌ಗಳನ್ನು ಬಳಸಿ ಸಂಗಾತಿಯನ್ನು ಹುಡುಕಲು ಯತ್ನಿಸುತ್ತಿದ್ದೀರಾ? ಡೇಟಿಂಗ್ ಸೈಟ್‍ಗಳಲ್ಲಿ ನೀವು ನಿಮ್ಮ ಪ್ರೊಫೈಲ್‌ ಬರೆಯುವ ಮುನ್ನ ಕೆಲ ಅಂಶಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಆನ್‍ಲೈನ್ ಡೇಟಿಂಗ್‍ನಲ್ಲಿ ನಿಮ್ಮ ಬಗೆ ವಿವರಿಸೋದು ಎರಡು ನದಿಗಳ ನಡುವೆ ಸೇತುವೆ ನಿರ್ಮಿಸಿದ ಹಾಗೆ.

ಡೇಟಿಂಗ್ ಅಂದ್ರೆ ನಿಮ್ಮ ಬಾಸ್‍ನ ಮೆಚ್ಚಿಸುವ ರೀತಿಯದ್ದು. ನಿಮ್ಮ ಒಳ್ಳೆತನವನ್ನು ಮಾರ್ಕೆಟಿಂಗ್ ಮಾಡಿಕೊಳ್ಳುವ ಒಂದು ಬೆಸುಗೆಯ ಕಲೆ.

ಪ್ರೊಫೈಲ್‌ ನಿರೂಪಣೆಗೆ ಮೊದಲು ಕೆಲವು ಸಿದ್ಧ ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೇಧಾವಿಗಳ ಮಾತುಗಳು, ಇತರರ ನುಡಿಗಳು ನಿಮ್ಮ ಪ್ರೊಫೈಲ್‌ನ ತೂಕ ಹೆಚ್ಚಿಸುವುದಿಲ್ಲ. ಸಂಕ್ಷಿಪ್ತ ಮತ್ತು ನೈಜ ಮಾಹಿತಿ ಮಾತ್ರ ಇತರರನ್ನು ಆಕರ್ಷಿಸಲು ಸಾಧ್ಯ. ಹಾಗೆಂದು ಬೇಕಾಬಿಟ್ಟಿಯಾಗಿ ಪ್ರೊಫೈಲ್ ಬರೆದುಕೊಳ್ಳಬೇಡಿ. ಆಕರ್ಷಕ ಪ್ರೊಫೈಲ್‌ನಿಂದ ಮಾತ್ರ ಹುಡುಗಿಯರನ್ನು ಸೆಳೆಯಲು, ಪ್ರೀತಿ ಸಮುದ್ರದಲ್ಲಿ ಈಜಲು ಸಾಧ್ಯ.

ಡೇಟಿಂಗ್‌ ಆಸೆಯಿರುವವರು ಪ್ರೊಫೈಲ್ ಬರೆದುಕೊಳ್ಳುವಾಗ ಅನುಸರಿಸಬೇಕಾದ ಸೂತ್ರಗಳು

ಭಾಷೆಯ ಬಳಕೆ ಮತ್ತು ವ್ಯಾಕರಣದ ಬಗ್ಗೆ ಎಚ್ಚರ: ಪ್ರೊಫೈಲ್‌ ಬರೆಯುವಾಗ ಅಕ್ಷರಗಳ ಬಗ್ಗೆ ಗಮನವಿರಲಿ. ಯಾವುದೇ ವಿಷಯವನ್ನು ತಿಳಿಸುವಾಗ ಒಮ್ಮೆ ಪರಿಶೀಲಿಸಿ, ಪರಿಷ್ಕರಿಸಿ ಖಚಿತ ಪಡಿಸಿಕೊಳ್ಳಿ, ತಪ್ಪುಗಳು ಇಲ್ಲದ ರೀತಿಯಲ್ಲಿ ಪ್ರೊಫೈಲ್‌ ಬರೆಯಿರಿ. ಭಾಷೆಯ ಬಗ್ಗೆ ಅರಿವಿಲ್ಲದ ರೀತಿ ಪದಗಳನ್ನು ಸೇರಿಸಬೇಡಿ, ಭಾಷೆ ಮತ್ತು ವ್ಯಾಕರಣ ದೋಷವುಳ್ಳ ಪ್ರೊಫೈಲ್‌ಗಳನ್ನು ಹುಡುಗಿಯರು ಇಷ್ಟಪಡುವುದಿಲ್ಲ.

ನಗಬೇಕು, ನಗಿಸಬೇಕು: ನಗಿಸುವವರನ್ನು ಎಲ್ಲರೂ ಇಷ್ಟಪಡುತ್ತಾರೆ. ಹಾಸ್ಯಪ್ರಜ್ಞೆ ಇದ್ದರೆ ನೀವು ಆನ್‌ಲೈನ್‌ನಲ್ಲಿ ಮಾತ್ರವಲ್ಲ, ಆಫ್‌ಲೈನ್‌ನಲ್ಲಿಯೂ ಹುಡುಗಿಯರ ಮನಗೆಲ್ಲಬಲ್ಲಿರಿ. ಪ್ರೊಫೈಲ್‌ನಲ್ಲಿಯೂ ಇಂಥ ವಿಚಾರಗಳನ್ನು ಪ್ರಸ್ತಾಪಿಸಿ. ಹಾಸ್ಯಪ್ರಜ್ಞೆ ಮತ್ತು ಬುದ್ಧಿವಂತಿಯ ಹದಪಾಕ ನಿಮ್ಮ ಪ್ರೊಫೈಲ್‌ನಲ್ಲಿದ್ದರೆ ಇತರ ನೀರಸ ಪ್ರೊಫೈಲ್‌ಗಳನ್ನು ಅದು ಸಹಜವಾಗಿಯೇ ಮೀರಿ ನಿಲ್ಲುತ್ತವೆ.

ವಿನಯವಿರಲಿ: ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳಿಕೊಳ್ಳುವಾಗ ಗರ್ವ ಸಲ್ಲದು. ವಿನಮ್ರ ಮತ್ತು ಸರಳ ವ್ಯಕ್ತಿತ್ವವನ್ನು ಈ ಕಾಲದ ಹುಡುಗರಿಯರು ಹೆಚ್ಚು ಇಷ್ಟಪಡುತ್ತಾರೆ. ನೀವು ಉಪಯೋಗಿಸುವ ದುಬಾರಿ ಬ್ರ್ಯಾಂಡ್‍ ವಸ್ತುಗಳು, ಹೊಂದಿರುವ ಆಸ್ತಿಯ ಪ್ರಸ್ತಾಪ ಬೇಡವೇ ಬೇಡ. ‘ನಾನು ಹಾಗೇ–ಹೀಗೆ’ ಎಂದು ಕೊಚ್ಚಿಕೊಂಡ್ರೆ ನಿಮ್ಮ ಡೇಟಿಂಗ್ ಆಸೆಯೂ ಕೊಚ್ಚಿಕೊಂಡು ಹೋಗುತ್ತೆ ಹುಷಾರ್.

ಪ್ರಾಮಾಣಿಕತೆ ಫಲ ಕೊಡುತ್ತೆ: ಹುಡುಗಿಯರು ಸುಳ್ಳು ಹೇಳುವ ಹುಡುಗರನ್ನು ನೋಡಿ ನಗಬಲ್ಲರು, ಅದರೆ ಅವರ ಜೊತೆಗೆ ತಿರುಗಾಡಲು ಇಷ್ಟಪಡುವುದಿಲ್ಲ. ನೀವು ಯಾರು ಎಂಬುದನ್ನು ಸ್ಪಷ್ಟವಾಗಿ ತಿಳಿಸಿ. ನಿಮ್ಮ ಸ್ವಂತ ಆಲೋಚನೆ, ನಿಜದ ಮಾತುಗಳು ಮಾತ್ರವೇ ಸಂಬಂಧದ ಬುನಾದಿಯನ್ನು ಭದ್ರವಾಗಿ ಹಾಕಬಲ್ಲವು. ಪ್ರಾಮಾಣಿಕತೆಯಿಂದ ಮಾತ್ರವೇ ನೈಜ, ಗಟ್ಟಿ ಸಂಬಂಧ ನೆಲೆಗೊಳ್ಳಲು ಸಾಧ್ಯ.

ಆಸೆಗೆ ಕಡಿವಾಣ: ಲೈಂಗಿಕತೆ ಸಂಬಂಧಿಸಿದ ವಿಚಾರಗಳನ್ನು ಪ್ರಸ್ತಾಪಿಸುವಾಗ ಎರಡು ಸಲ ಯೋಚಿಸಿ. ಹುಡುಗರಿಗೆ ಹೋಲಿಸಿದರೆ ಹುಡುಗಿಯರು ಇಂಥ ವಿಚಾರಗಳಲ್ಲಿ ಹೆಚ್ಚು ಸೂಕ್ಷ್ಮಮತಿಗಳು. ನಿಮ್ಮ ಬಯಕೆಗಳು ಅವರ ಭಾವನೆಗೆ ಧಕ್ಕೆ ತರಬಾರದು. ಆತುರವಂತೂ ಸರ್ವದಾ ಸಲ್ಲದು. ತಾಳಿದವನು ಬಾಳಿಯಾನು ಎಂಬ ಮಾತು ನೆನಪಿದೆ ತಾನೆ.

ಬೆಸುಗೆಯ ಮುನ್ನುಡಿ: ಹಲವು ವರ್ಷಗಳು ಉಳಿಯಬೇಕಾದ ಮಧುರ ಸಂಬಂಧಗಳ ಬೆಸುಗೆಗೆ ನಿಮ್ಮ ಪ್ರೊಫೈಲ್ ಮುನ್ನುಡಿಯಾಗಬೇಕು. ಪ್ರೊಫೈಲ್ ಬರೆಯುವಾಗ ಅಪರಿಚಿತರನ್ನು ಚಿರಪರಿಚಿತರನ್ನಾಗಿಸುವ ಬರಹ ಇದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

Comments
ಈ ವಿಭಾಗದಿಂದ ಇನ್ನಷ್ಟು
ಸಪ್ತಪದಿ

ಪಿಕ್ಚರ್‌ ನೋಡಿ
ಸಪ್ತಪದಿ

18 Jan, 2018
ಆಭರಣಕ್ಕೂ ಬಂತು 3ಡಿ

ಫ್ಯಾಷನ್
ಆಭರಣಕ್ಕೂ ಬಂತು 3ಡಿ

18 Jan, 2018
‘ಮಗುವಿಗೆ ಸಮಯ ಇಲ್ಲ’

ಬಾಲಿವುಡ್
‘ಮಗುವಿಗೆ ಸಮಯ ಇಲ್ಲ’

17 Jan, 2018
72ರ ಮಾಂತ್ರಿಕ

ಈ ದಿನ ಜನ್ಮದಿನ
72ರ ಮಾಂತ್ರಿಕ

17 Jan, 2018
ಹಿರೀಕರ ಆರೋಗ್ಯಕ್ಕಾಗಿ...

ಕೈತೋಟದ ಕೆಲಸ
ಹಿರೀಕರ ಆರೋಗ್ಯಕ್ಕಾಗಿ...

17 Jan, 2018