ತಟಸ್ಥವಾದ ಶುದ್ಧ ಕುಡಿಯುವ ನೀರಿನ ಘಟಕ

‘ಶುದ್ಧ ನೀರು ಘಟಕ ನಿರ್ಮಿಸಿದ ದಿನದಿಂದ ಒಂದು ದಿನವೂ ನೀರು ಬಂದಿಲ್ಲ’ ಎಂದು ಗ್ರಾಮಸ್ಥ ಶಿವಲಿಂಗಯ್ಯ ಆರೋಪಿಸುತ್ತಾರೆ. ‘ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’

ನಾಗಮಂಗಲ ತಾಲ್ಲೂಕು ತೊಳಲಿ ಗ್ರಾಮದಲ್ಲಿರುವ ಕಾರ್ಯನಿರ್ವಹಿಸದ ಶುದ್ಧ ಕುಡಿಯುವ ನೀರಿನ ಘಟಕ

ಬಿ.ಸಿ. ಮೋಹನ್ ಕುಮಾರ್

ನಾಗಮಂಗಲ: ಕಳೆದ 8 ತಿಂಗಳ ಹಿಂದಷ್ಟೇ ಶಾಸಕ ಎನ್. ಚಲುವರಾಯಸ್ವಾಮಿ ಚಾಲನೆ ನೀಡಿದ್ದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ. ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಶುದ್ಧ ನೀರು ಕೊಡಬೇಕಾಗಿದ್ದ ಘಟಕ ತಟಸ್ಥವಾಗಿ ನಿಂತಿದೆ.

ತಾಲ್ಲೂಕು ಕೇಂದ್ರಕ್ಕೆ ಕೇವಲ 2 ಕಿ.ಮೀ ದೂರಲ್ಲಿರುವ, ಬೀದರ್– ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ, ಅಂಚೆ ಚಿಟ್ಟನಹಳ್ಳಿ ಗ್ರಾಮ ಪಂಚಾಯಿತಿ ಸೇರಿದ ತೊಳಲಿ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಪರಿಸ್ಥಿತಿ ಇದು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಹೇಗೆ ಹಳ್ಳ ಹಿಡಿದಿದೆ ಎಂಬುದಕ್ಕೆ ಇದು ಸೂಕ್ತ ಉದಾಹರಣೆ.

ಕೆಆರ್ ಡಿಎಲ್ ನಿರ್ಮಿಸಿ ಅಂಚೆಚಿಟ್ಟಣಹಳ್ಳಿ ಗ್ರಾಮ ಪಂಚಾಯಿತಿಗೆ ಘಟಕವನ್ನು ಹಸ್ತಾಂತರಿಸಲಾಗಿತ್ತು. ಆದರೆ ಗ್ರಾಮ ಪಂಚಾಯಿತಿ ಮತ್ತು ಘಟಕದ ನಿರ್ವಹಣೆ ಮಾಡಬೇಕಾದ ಏಜೆನ್ಸಿ ಮತ್ತು ಅದರ ಮೇಲುಸ್ತುವಾರಿ ಮಾಡಬೇಕಾದ ಕೆಆರ್ ಡಿಎಲ್ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡ ಪರಿಣಾಮ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕಾದ ಘಟಕ ದನ, ಎಮ್ಮೆಗಳನ್ನು ಕಟ್ಟಲು ಮತ್ತು ಬಟ್ಟೆಗಳನ್ನು ಒಣಗಿಹಾಕಲು ಅವಕಾಶ ಮಾಡಿಕೊಟ್ಟಿದೆ.

ಸುಮಾರು 120 ಮನೆಗಳಿರುವ 530 ಜನಸಂಖ್ಯೆಯಿರುವ ತೊಳಲಿ ಗ್ರಾಮದಲ್ಲಿ ಕುಡಿಯುವ ನೀರಿನ ಮಿನಿ ಟ್ಯಾಂಕ್ ಗಳಿವೆ, ಘಟಕದ ಪಕ್ಕದಲ್ಲಿಯೇ ಇರುವ ಟ್ಯಾಂಕ್ ನಿಂದಲೇ ನೀರು ಪೂರೈಕೆಯಾಗುತ್ತದೆ. ಅದರ ಪಕ್ಕದಲ್ಲಿಯೇ ಇರುವ ಶುದ್ಧ ನೀರಿನ ಘಟಕ ಕೇವಲ ಪ್ರಾತ್ಯಕ್ಷಿಕೆಗೆ ಇಟ್ಟಿರುವಂತೆ ಕಾಣುತ್ತಿದೆ.

‘ಶುದ್ಧ ನೀರು ಘಟಕ ನಿರ್ಮಿಸಿದ ದಿನದಿಂದ ಒಂದು ದಿನವೂ ನೀರು ಬಂದಿಲ್ಲ’ ಎಂದು ಗ್ರಾಮಸ್ಥ ಶಿವಲಿಂಗಯ್ಯ ಆರೋಪಿಸುತ್ತಾರೆ. ‘ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಕೆಆರ್ ಡಿ ಎಲ್ ಸಹಾಯಕ ಎಂಜಿನಿಯರ್ ಸೋಮಶೇಖರ್ ಹೇಳುತ್ತಾರೆ. ‘ನನಗೆ ಇದೂವರೆಗೆ ಯಾವುದೇ ಮಾಹಿತಿ ಇರಲಿಲ್ಲ. ಪಿಡಿಒ ಅವರನ್ನು ಸಂಪರ್ಕಿಸಿ ಅದರ ಸ್ಥಿತಿಯನ್ನು ತಿಳಿಯುತ್ತೇನೆ’ ಎಂದು ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಶಾಂತಾ ಹೇಳಿದರು.
 

Comments
ಈ ವಿಭಾಗದಿಂದ ಇನ್ನಷ್ಟು
ಪಿಎಸ್‌ಎಸ್‌ಕೆ ಮೌನ, ಅಕ್ರಮ ಕಲ್ಲು ಗಣಿಗಳ ಆರ್ಭಟ

ಮಂಡ್ಯ
ಪಿಎಸ್‌ಎಸ್‌ಕೆ ಮೌನ, ಅಕ್ರಮ ಕಲ್ಲು ಗಣಿಗಳ ಆರ್ಭಟ

20 Apr, 2018

ಮಂಡ್ಯ
24 ದಿನಗಳಲ್ಲಿ ದಾಖಲೆ ಇಲ್ಲದ ₹ 22 ಲಕ್ಷ ವಶ

‘ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಜಿಲ್ಲೆಯ ವಿವಿಧೆಡೆ ದಾಖಲೆ ಇಲ್ಲದ ಒಟ್ಟು ₹ 22 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ...

20 Apr, 2018

ಮಂಡ್ಯ
ಮಂಡ್ಯ: ಅಂಬರೀಷ್‌ ನಿರ್ಧಾರವೇ ಪ್ರಧಾನ

ಶಾಸಕ ಅಂಬರೀಷ್‌ಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾಗಿ ನಾಲ್ಕು ದಿನ ಕಳೆದರೂ ಅವರು ಮಂಡ್ಯ ಕ್ಷೇತ್ರಕ್ಕೆ ಬಂದು ನಾಮಪತ್ರ ಸಲ್ಲಿಸುವ, ಪ್ರಚಾರ ಆರಂಭಿಸುವ ಕುರಿತು ಯಾವುದೇ...

20 Apr, 2018

ಮಂಡ್ಯ
9 ಅಭ್ಯರ್ಥಿಗಳು 14 ನಾಮಪತ್ರ ಸಲ್ಲಿಕೆ

ನಾಮಪತ್ರ ಸಲ್ಲಿಸಲು ಎರಡನೇ ದಿನವಾದ ಗುರುವಾರ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ 9 ಅಭ್ಯರ್ಥಿಗಳು 14 ನಾಮಪತ್ರಗಳನ್ನು ಸಲ್ಲಿಸಿದರು.

20 Apr, 2018

ಪಾಂಡವಪುರ
ದಲಿತರ ಹಿತ ಕಾಯುವ ಜೆಡಿಎಸ್‌: ಸಂಸದ

ದಲಿತ ಸಮುದಾಯದ ಹಿತಕಾಯುತ್ತಿರುವ ಜೆಡಿಎಸ್‌ ಅನ್ನು ದಲಿತರು ಬೆಂಬಲಿಸುವ ಮೂಲಕ ಜೆಡಿಎಸ್‌–ಬಿಎಸ್‌ಪಿ ಮೈತ್ರಿ ಸರ್ಕಾರ ರಚಿಸಲು ಶ್ರಮಿಸಬೇಕು ಎಂದು ಜೆಡಿಎಸ್‌ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು...

18 Apr, 2018