ನರಗುಂದ

‘ರೈತರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿ’

‘ರೈತರ ವಿವಿಧ ಬೇಡಿಕೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಪಂದಿಸಬೇಕು. ಬಿಜೆಪಿ ಪಕ್ಷವು ರೈತ ವಿರೋಧಿಯಾಗಿದ್ದು, ಕೊಟ್ಟ ಮಾತಿಗೆ ತಪ್ಪಿದೆ.

ನರಗುಂದ: ‘ಮಹದಾಯಿ ಯೋಜನೆ ಅನುಷ್ಠಾನಕ್ಕೆ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಪಕ್ಷಭೇದ ಮರೆತು ರೈತರ ಹಿತ ಕಾಯಬೇಕು. ರೈತರ ಆಶೋತ್ತರಗಳಿಗೆ ಸ್ಪಂದಿಸದ ಸರ್ಕಾರಗಳು ಆಡಳಿತ ನಡೆಸಲು ಅಯೋಗ್ಯವಾಗಿವೆ’ ಎಂದು ರೈತ ಸೇನೆ ಮುಖಂಡ ಶಂಕ್ರಗೌಡ ಪಾಟೀಲ ಹೇಳಿದರು ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಧರಣಿಯ 886ನೇ ದಿನವಾದ ಭಾನುವಾರ ಅವರು ಮಾತನಾಡಿದರು.

‘ರೈತರ ವಿವಿಧ ಬೇಡಿಕೆಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಪಂದಿಸಬೇಕು. ಬಿಜೆಪಿ ಪಕ್ಷವು ರೈತ ವಿರೋಧಿಯಾಗಿದ್ದು, ಕೊಟ್ಟ ಮಾತಿಗೆ ತಪ್ಪಿದೆ. ಕಾಂಗ್ರೆಸ್‌ ಸಹಿತ ಸರಿಯಾಗಿ ಚಿಂತನೆ ಮಾಡದೇ ಕೇಂದ್ರದ ಮೇಲೆ ಕೈ ಚೆಲ್ಲಿ ಕುಳಿತಿದೆ. ಇದು ಸರಿಯಲ್ಲ, ಚುನಾವಣೆ ಬಂದಾಗ ಮಾತ್ರ ಪಕ್ಷಗಳು ರೈತರಿಗೆ ಭರವಸೆಗಳನ್ನು ಮೋಸ ಮಾಡುತ್ತಿವೆ. ಇನ್ನು ಮುಂದೆ ಈ ರೀತಿ ನಡೆಯದು. ಕಾಂಗ್ರೆಸ್‌ ಹಾಗೂ ಬಿಜೆಪಿ ಯಾತ್ರೆಗಳ ಹೆಸರಲ್ಲಿ ಪ್ರಜೆಗಳ ಹಣ ಪೋಲು ಮಾಡುತ್ತಾ ಹೊರಟಿವೆ.

ರಾಜಕೀಯ ಪಕ್ಷಗಳು ನಮ್ಮ ಮತ ಪಡೆಯಲು ಪರಿವರ್ತನೆ ಯಾತ್ರೆ ಮಾಡುತ್ತಿವೆ. ಆದರೆ, ರೈತರು ಒಗ್ಗಟ್ಟಾಗಿ ನಡೆಸುತ್ತಿರುವ ಹೋರಾಟಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಡಿ.23ರಂದು ಬೆಂಗಳೂರಿನಲ್ಲಿ ಬಿಜೆಪಿ ಕಚೇರಿ ಎದುರು ನಡೆಯಲಿರುವ ಪ್ರತಿಭಟನೆಯಲ್ಲಿ ರೈತರು ಶಕ್ತಿ ಪ್ರದರ್ಶಿಸಲಿದ್ದಾರೆ. ಮಹದಾಯಿ ಹೋರಾಟದ ಶಕ್ತಿಯನ್ನು ರಾಜಧಾನಿಯಲ್ಲಿ ಸರ್ಕಾರ ನೋಡಬೇಕು. ಕೇಂದ್ರಕ್ಕೆ ಹೊಸ ಸಂದೇಶ ರವಾನಿಸಬೇಕು’ ಎಂದರು.

‘ಬಿ.ಎಸ್‌.ಯಡಿಯೂರಪ್ಪನವರು ಹುಸಿ ಭರವಸೆ ನೀಡಿ ರೈತರಿಗೆ ಮೋಸ ಮಾಡಿದ್ದಾರೆ. ರೈತರ ಹಿತ ಕಾಯದ ನಾಯಕರು ರಾಜಕೀಯ ಮಾಡಲು ಯೋಗ್ಯರಲ್ಲ’ ಎಂದು ಮಹದಾಯಿ ಹೋರಾಟ ಸಮಿತಿ ಉಪಾಧ್ಯಕ್ಷ ರಮೇಶ ನಾಯ್ಕರ ಕಿಡಿಕಾರಿದರು. ಧರಣಿಯಲ್ಲಿ ಎ.ಪಿ.ಪಾಟೀಲ, ವೆಂಕಪ್ಪ ಹುಜರತ್ತಿ, ಚನ್ನಪ್ಪಗೌಡ ಪಾಟೀಲ, ವಿರುಪಾಕ್ಷಿ ಹುಲಜೋಗಿ, ವೀರಣ್ಣ ಸೊಪ್ಪಿನ, ಹನಮಂತ ಪಡೆಸೂರ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
‘ಸಮಾಜ ಕಲ್ಯಾಣಕ್ಕಾಗಿ ಶ್ರಮಿಸಿದ ವೇಮನ’

ಗದಗ
‘ಸಮಾಜ ಕಲ್ಯಾಣಕ್ಕಾಗಿ ಶ್ರಮಿಸಿದ ವೇಮನ’

20 Jan, 2018

ಮುಂಡರಗಿ
ಪಾಲ್ಯೇಕರ್ ವಿರುದ್ಧ ಮುಂಡರಗಿಯಲ್ಲಿ ಆಕ್ರೋಶ

ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತಕುಮಾರ ಗಡಾದ ಮಾತನಾಡಿ ಪ್ರಧಾನ ಮಂತ್ರಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆಯನ್ನು ಬಗೆಹರಿಸಬೇಕು

20 Jan, 2018

ಗಜೇಂದ್ರಗಡ
ವಿವಿಧ ಸಂಘಟನೆಗಳಿಂದ ಪ್ರತಿಭಟನೆ: ಎಚ್ಚರಿಕೆ

‘ಈ ಕಚೇರಿ ಜಿಲ್ಲಾಧಿಕಾರಿ ಅಥವಾ ಉಪ ವಿಭಾಗಾಧಿಕಾರಿಗಳಿಗಾಗಿ ಅಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ. ಯಾರಿಗೂ ತಿಳಿಸದೇ ತಾಲ್ಲೂಕಿನ ಜನಪ್ರತಿನಿಧಿಗಳು ತಮ್ಮ ಸ್ವಹಿತಕ್ಕಾಗಿ ಜನರಿಗೆ ತೊಂದರೆ ನೀಡುತ್ತಿದ್ದಾರೆ

20 Jan, 2018
ಹೆಚ್ಚಿದ ತೊಗರಿ ಬಿತ್ತನೆ ಪ್ರದೇಶ: ಅಧಿಕ ಇಳುವರಿ

ಲಕ್ಷ್ಮೇಶ್ವರ
ಹೆಚ್ಚಿದ ತೊಗರಿ ಬಿತ್ತನೆ ಪ್ರದೇಶ: ಅಧಿಕ ಇಳುವರಿ

19 Jan, 2018

ಗದಗ
ಕಡಲೆ ಖರೀದಿ ಕೇಂದ್ರ ತೆರೆಯಲು ಆಗ್ರಹ

‘ಜಿಲ್ಲೆಯಲ್ಲಿ ಸತತ ಮೂರು ವರ್ಷಗಳ ಕಾಲ ಭೀಕರ ಬರಗಾಲ ಎದುರಾಗಿತ್ತು. ಇದರಿಂದ ರೈತರು ಆರ್ಥಿಕವಾಗಿ ತೀವ್ರ ಸಂಕಷ್ಟ ಎದುರಿಸಿದರು.

19 Jan, 2018