ಮಂಡ್ಯ

ಸಮಗ್ರ ಶಿಕ್ಷಣ ನೀತಿ ಜಾರಿಗೆ ಆಗ್ರಹ

ಆರ್‌ಟಿಇ ಕಾಯ್ದೆಯನ್ನು ಖಾಸಗಿ ಶಾಲೆಗಳ ಸಾಮಾಜಿಕ ಹೊಣೆಗಾರಿಕೆ ಕಾಯ್ದೆ ಎಂದು ತಿದ್ದುಪಡಿ ಮಾಡಿ ಖಾಸಗಿ ಶಾಲೆಗಳಲ್ಲಿ ಹಿಂದುಳಿದ ಬಡವರ್ಗದ ಮಕ್ಕಳಿಗೆ ಅವರ ವಾರ್ಷಿಕ ಪ್ರವೇಶಾವಕಾಶಗಳ ಶೇ 25 ರಷ್ಟನ್ನು ಮೀಸಲಿಡಬೇಕು.

ಮಂಡ್ಯ: ಸಮಗ್ರ ಸಮಾನ ಶಿಕ್ಷಣ ನೀತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಮಾನ ಶಿಕ್ಷಣಕ್ಕಾಗಿ ಸಮನ್ವಯ ವೇದಿಕೆ ಕಾರ್ಯಕರ್ತರು ನಗರದ ಮಹಾವೀರ ವೃತ್ತದ ಬಳಿ ಸೋಮವಾರ ಜಾಗೃತಿ ಜಾಥಾ ನಡೆಸಿದರು.

ಮೂರು ವರ್ಷದ ಮಕ್ಕಳ ಪೋಷಣೆ ಹಾಗೂ ಆರೈಕೆಗೆ ಪೂರಕವಾದ ವ್ಯವಸ್ಥೆ, ನಾಲ್ಕು ವರ್ಷದಿಂದ ಆರು ವರ್ಷಗಳಿಗೆ ಶಾಲಾ ಪೂರ್ವ ಶಿಕ್ಷಣ ಹಾಗೂ ಒಂದರಿಂದ ನಾಲ್ಕನೇ ತರಗತಿಯ ಎಲ್ಲಾ ಮಕ್ಕಳಿಗೆ ಉಚಿತ, ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಗುಣಾತ್ಮಕವಾಗಿ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.

ಐದರಿಂದ ಪಿಯುಸಿ ವರೆಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಸಲುವಾಗಿ ಗ್ರಾಮ ಪಂಚಾಯಿತಿ, ವಾರ್ಡ್‌ ಮಟ್ಟದಲ್ಲಿ ಕೇಂದ್ರೀಯ ವಿದ್ಯಾಶಾಲೆಗಳ ಗುಣಮಟ್ಟಕ್ಕೆ ಅನುಸಾರವಾಗಿರುವಂತೆ ಸುಸಜ್ಜಿತ ಸಾರ್ವಜನಿಕ ಸರ್ಕಾರಿ ಶಾಲೆಗಳನ್ನು ಸ್ಥಾಪಿಸಬೇಕು. ಪ್ರೌಢಶಾಲಾ ಹಂತದಲ್ಲಿ ಮೊದಲ ಅಥವಾ ಎರಡನೆಯ ಭಾಷೆಯಾಗಿ ಕನ್ನಡ ಕಲಿಕೆ ಕಡ್ಡಾಯವಾಗಬೇಕು. ನರ್ಸರಿಯಿಂದಲೇ ಇಂಗ್ಲಿಷ್‌ಅನ್ನು ಒಂದು ಭಾಷೆಯಾಗಿ ಶಿಶುಸ್ನೇಹಿ ಪದ್ಧತಿಯಲ್ಲಿ ಕಲಿಸಬೇಕು ಎಂದು ಆಗ್ರಹಿಸಿದರು.

ಆರ್‌ಟಿಇ ಕಾಯ್ದೆಯನ್ನು ಖಾಸಗಿ ಶಾಲೆಗಳ ಸಾಮಾಜಿಕ ಹೊಣೆಗಾರಿಕೆ ಕಾಯ್ದೆ ಎಂದು ತಿದ್ದುಪಡಿ ಮಾಡಿ ಖಾಸಗಿ ಶಾಲೆಗಳಲ್ಲಿ ಹಿಂದುಳಿದ ಬಡವರ್ಗದ ಮಕ್ಕಳಿಗೆ ಅವರ ವಾರ್ಷಿಕ ಪ್ರವೇಶಾವಕಾಶಗಳ ಶೇ 25 ರಷ್ಟನ್ನು ಮೀಸಲಿಡಬೇಕು. ಜೊತೆಗೆ ಆರ್‌ಟಿಇ ಗೆ ಮೀಸಲಿರಿಸಿದ ನಿಧಿಯನ್ನು ಗ್ರಾಮೀಣ ಶಾಲಾ ಮಕ್ಕಳ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಕೋರಿದರು. ವೇದಿಕೆ ಸಂಚಾಲಕರಾದ ನಾಗರತ್ನ ಬಂಜಗೆರೆ, ಶೋಭಾ, ಮಮತಾ, ಶಕುಂತಲಾ, ರಜನಿ, ಮಂಗಳಾ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಪಾಂಡವಪುರ
ದಲಿತರ ಹಿತ ಕಾಯುವ ಜೆಡಿಎಸ್‌: ಸಂಸದ

ದಲಿತ ಸಮುದಾಯದ ಹಿತಕಾಯುತ್ತಿರುವ ಜೆಡಿಎಸ್‌ ಅನ್ನು ದಲಿತರು ಬೆಂಬಲಿಸುವ ಮೂಲಕ ಜೆಡಿಎಸ್‌–ಬಿಎಸ್‌ಪಿ ಮೈತ್ರಿ ಸರ್ಕಾರ ರಚಿಸಲು ಶ್ರಮಿಸಬೇಕು ಎಂದು ಜೆಡಿಎಸ್‌ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು...

18 Apr, 2018

‌ಮದ್ದೂರು
ಬಂಡಾಯ ನಾಯಕರ ಗೆಲುವು ನಿಶ್ಚಿತ: ಬಾಲಕೃಷ್ಣ ವಿಶ್ವಾಸ

‘ಎಲ್ಲ ಏಳು ಬಂಡಾಯ ಜೆಡಿಎಸ್‌ ನಾಯಕರು ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ನಿಶ್ಚಿತ’ ಎಂದು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಬಾಲಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು. ...

18 Apr, 2018
ಮದ್ದೂರು: ಶಿಂಷಾ ನದಿ ನೀರು ಸದ್ಬಳಕೆಯಲ್ಲಿ ವೈಫಲ್ಯ

ಮಂಡ್ಯ
ಮದ್ದೂರು: ಶಿಂಷಾ ನದಿ ನೀರು ಸದ್ಬಳಕೆಯಲ್ಲಿ ವೈಫಲ್ಯ

18 Apr, 2018

ಮಂಡ್ಯ
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಎಚ್ಚರಿಕೆ

‘ಚುನಾವಣಾ ಯುದ್ಧಭೂಮಿಯಲ್ಲಿ ನಾನು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ, ಯುದ್ಧ ಶತ ಸಿದ್ಧ. ಕಾಂಗ್ರೆಸ್‌ ಪಕ್ಷ ಮಂಡ್ಯ ಕ್ಷೇತ್ರದಿಂದ ಟಿಕೆಟ್‌ ನೀಡಿದರೆ ಸಂಧಾನಕ್ಕೆ ಬರುತ್ತೇನೆ. ಇಲ್ಲದಿದ್ದರೆ ಪಕ್ಷೇತರ...

18 Apr, 2018
ಅತ್ಯಾಚಾರ: ಗಲ್ಲು ಶಿಕ್ಷೆ ವಿಧಿಸಲು ಒತ್ತಾಯ

ಮಂಡ್ಯ
ಅತ್ಯಾಚಾರ: ಗಲ್ಲು ಶಿಕ್ಷೆ ವಿಧಿಸಲು ಒತ್ತಾಯ

18 Apr, 2018