ಬಳ್ಳಾರಿ

ಸಂಘಟನೆ ಬಲವರ್ಧನೆಗೆ ಹೋರಾಟ ಅಗತ್ಯ

‘2011ರ ಜನಗಣತಿ ಅನುಸಾರ ಮೀಸಲಾತಿ ನಿಗದಿಪಡಿಸುವುದು. ಖಾಸಗಿ ಉದ್ಯೋಗ ಕ್ಷೇತ್ರ ಹಾಗೂ ನ್ಯಾಯಾಧೀಶರ ನೇಮಕದಲ್ಲಿ ಮೀಸಲಾತಿ ನೀಡಬೇಕು.

ಬಳ್ಳಾರಿ:‘ ಸಂಘಟನೆ ಬಲವನ್ನು ಮತ್ತಷ್ಟು ಹೆಚ್ಚಿಸಿ, ಹೋರಾಟ ರೂಪಿಸುವ ಅಗತ್ಯವಿದೆ’ ಎಂದು ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ರಾಜ್ಯ ಸಮಿತಿಅಧ್ಯಕ್ಷ ಶಿವಶಂಕರಪ್ಪ ಅಭಿಪ್ರಾಯಪಟ್ಟರು.

ನಗರದ ಕೆ.ಇ.ಬಿ.ಫಂಕ್ಷನ್ ಹಾಲ್‌ನಲ್ಲಿ ಭಾನುವಾರ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಜಿಲ್ಲಾ ಸಮಿತಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪರಿಶಿಷ್ಟ ಜಾತಿ, ಪಂಗಡ ನೌಕರರ ಮುಂಬಡ್ತಿಯನ್ನು ಜಾರಿಗೊಳಿಸಲು ರಾಷ್ಟ್ರಪತಿ ಅನುಮೋದನೆ ಪಡೆಯಲು ಸಂಸದರು ಒಗ್ಗಟ್ಟು ಪ್ರದರ್ಶಿಸಬೇಕು. ರಾಜ್ಯಸಭೆಯಲ್ಲಿ ಸಂವಿಧಾನದ 117 ನೇ ತಿದ್ದುಪಡಿ ಕಾಯ್ದೆ 2012ರಲ್ಲಿ ಅನುಮೋದನೆಗೊಂಡಿದೆ. ಆದರೆ, ಅದನ್ನು ಲೋಕಸಭೆಯಲ್ಲಿ ಮಂಡಿಸದೆ ವಿಳಂಬ ಮಾಡಲಾಗುತ್ತಿದೆ. ಇದನ್ನು ಆದಷ್ಟು ಬೇಗ ಅನುಮೋದನೆ ಮಾಡಬೇಕು’ ಎಂದು ಒತ್ತಾಯಿಸಿದರು.

‘2011ರ ಜನಗಣತಿ ಅನುಸಾರ ಮೀಸಲಾತಿ ನಿಗದಿಪಡಿಸುವುದು. ಖಾಸಗಿ ಉದ್ಯೋಗ ಕ್ಷೇತ್ರ ಹಾಗೂ ನ್ಯಾಯಾಧೀಶರ ನೇಮಕದಲ್ಲಿ ಮೀಸಲಾತಿ ನೀಡಬೇಕು. ಶಿಕ್ಷಣ,ಉದ್ಯೋಗ, ಮತ್ತು ಮುಂಬಡ್ತಿಯಲ್ಲಿನ ಮೀಸಲಾತಿ ನಿಯಮಗಳನ್ನು ಸಂವಿಧಾನದ ಅನುಚ್ಛೇದ–9ರಲ್ಲಿ ಸೇರಿಸಬೇಕು’ ಎಂದು ಆಗ್ರಹಿಸಿದರು.

ಇದೇ ವೇಳೆಯಲ್ಲಿ ಗಣ್ಯರು ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. ‘ಪ್ರಸ್ತುತ ಸಂದರ್ಭದಲ್ಲಿ ಮೀಸಲಾತಿ ಅಗತ್ಯತೆ’ ಕುರಿತ ಕಿರುಹೊತ್ತಿಗೆಯನ್ನು ಬಿ.ಆರ್.ಅಂಬೇಡ್ಕರ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಚಿದಾನಂದಪ್ಪ ಬಿಡುಗಡೆಗೊಳಿಸಿದರು.

ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷೆ ಪಿ.ದೀನಾ, ಉಪಮೇಯರ್ ಉಮಾದೇವಿ, ಮುಖಂಡರಾದ ಸೋಮಶೇಖರರೆಡ್ಡಿ, ಎಸ್.ವಿಜಯಕುಮಾರ್, ಆರ್.ಮೋಹನ್, ಕೆ.ಹನುಮಂತಪ್ಪ, ವಿ.ಗಂಗಾಧರನಾಯ್ಕ್, ಡಾ.ವಿ.ಟಿ.ದಕ್ಷಿಣಾಮೂರ್ತಿ, ಸಿ.ನಿಂಗಪ್ಪ, ಆರ್.ವಿಜಯಕುಮಾರ್ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ತಾಯಣ್ಣ ಮಗನಿಗೆ ಜೆಡಿಎಸ್‌ ಟಿಕೆಟ್‌!

ಬಳ್ಳಾರಿ
ತಾಯಣ್ಣ ಮಗನಿಗೆ ಜೆಡಿಎಸ್‌ ಟಿಕೆಟ್‌!

25 Apr, 2018

ಹೂವಿನಹಡಗಲಿ
ಓದೋ ಗಂಗಪ್ಪ ಹೊತ್ತು ಬಂದ ಬೆಂಬಲಿಗರು

ಹಡಗಲಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಓದೋ ಗಂಗಪ್ಪ ಮಂಗಳವಾರ ನಾಮಪತ್ರ ಸಲ್ಲಿಸಿದರು.

25 Apr, 2018

ಕಂಪ್ಲಿ
ಮೀನುಗಾರರಿಂದ ಕಠಿಣ ಹರಕೆ ಸಮರ್ಪಣೆ

ಕಂಪ್ಲಿ ಕೋಟೆ ತುಂಗಭದ್ರಾದೇವಿ ಮೀನುಗಾರರ ಕಾಲೊನಿ ಕಾಳಮ್ಮದೇವಿ ಗಂಗಾಸ್ಥಳ ಪೂಜಾ ಮಹೋತ್ಸವದ ಅಂಗವಾಗಿ ಮಂಗಳವಾರ ಮೀನುಗಾರರು ವಿಶಿಷ್ಟ ಹರಕೆಗಳನ್ನು ಭಕ್ತಿ ಭಾವದಿಂದ ತೀರಿಸಿದರು.

25 Apr, 2018
ರಾಜಕಾರಣದಿಂದ ದೂರವಾಗಿದ್ದ ರಾಜಕುಮಾರ

ಬಳ್ಳಾರಿ
ರಾಜಕಾರಣದಿಂದ ದೂರವಾಗಿದ್ದ ರಾಜಕುಮಾರ

25 Apr, 2018

ಬಳ್ಳಾರಿ
‘ಪ್ಲಾಸ್ಟಿಕ್‌ ಹಾವಳಿ: ಶೀಘ್ರ ಕ್ರಮ’

ಬಳ್ಳಾರಿಯಲ್ಲಿ ಮಿತಿ ಮೀರಿದ ಪ್ಲಾಸ್ಟಿಕ್‌ ಕಸ ಕಂಡುಬರುತ್ತಿದ್ದು,ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಉಪ ಅರಣ್ಯಸಂರಕ್ಷಣಾಧಿಕಾರಿ ಡಾ.ಪಿ.ರಮೇಶಕುಮಾರ...

24 Apr, 2018