ಚಿಟಗುಪ್ಪ

ಚಿಟಗುಪ್ಪ: ವಿವಿಧೆಡೆ ಎಳ್ಳಮಾವಾಸ್ಯೆ ಆಚರಣೆ

ಸೂರ್ಯ ನೆತ್ತಿಗೇರುತ್ತಿದ್ದಂತೆ ಹೆಂಗಳೆಯರು, ಯುವಕರು, ವೃದ್ಧರು ಹಾಗೂ ಮಕ್ಕಳು ಹೊಸ ಬಟ್ಟೆ ಧರಿಸಿ ಸಂಭ್ರಮಪಟ್ಟರು

ಚಿಟಗುಪ್ಪ: ಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ಸೋಮವಾರ ರೈತರು ಸಡಗರ, ಸಂಭ್ರಮದಿಂದ ಎಳ್ಳ ಅಮಾವಾಸ್ಯೆ ಆಚರಿಸಿದರು. ರೈತ ಮಹಿಳೆಯರು ನಸುಕಿನ ಜಾವದಿಂದಲೇ ವಿವಿಧ ಬಗೆಯ ಅಡುಗೆ ಸಿದ್ಧಪಡಿಸಿಕೊಂಡು ಹೊಲಗಳಿಗೆ ಕುಟುಂಬ ಸದಸ್ಯರ ಜತೆ ಹೋಗಿ ಪೂಜೆ ಸಲ್ಲಿಸಿದ ನಂತರ ಮನೆಯಿಂದ ತಂದಿದ್ದ ಊಟ ಸವಿದರು.

ಸೂರ್ಯ ನೆತ್ತಿಗೇರುತ್ತಿದ್ದಂತೆ ಹೆಂಗಳೆಯರು, ಯುವಕರು, ವೃದ್ಧರು ಹಾಗೂ ಮಕ್ಕಳು ಹೊಸ ಬಟ್ಟೆ ಧರಿಸಿ ಸಂಭ್ರಮಪಟ್ಟರು. ಹಬ್ಬದ ಅಂಗವಾಗಿ ಅಲ್ಲಲ್ಲಿ ಗ್ರಾಮಸ್ಥರು ಬಂಡಿ, ಆಟೊ, ಜೀಪ್‌ಗಳಲ್ಲಿ ಅಂಬಲಿ ಗಡಿಗೆ, ಭಜ್ಜಿ, ಕಡುಬು, ಹೋಳಿಗೆ ಇತರ ಪದಾರ್ಥಗಳನ್ನು ತುಂಬಿಕೊಂಡು ಹೊಲಗದ್ದೆಗಳಿಗೆ ಹೋಗುವುದು ಕಂಡುಬಂತು.

ಹೊಲಗಳಲ್ಲಿ ಜೋಳದ ಬೆಳೆ ಇರುವ ಭೂಮಿಯಲ್ಲಿ ಪಾಂಡವರ ಮೂರ್ತಿ ಪ್ರತಿಷ್ಠಾಪಿಸಿ ಹೊಲದ ಮಾಲೀಕರಿಬ್ಬರೂ ಸೇರಿಕೊಂಡು ‘ಒಲಗ್ಯಾ ಒಲಗ್ಯಾ ಚಾಲೋಂ ಪಲಿಗ್ಯಾ ’ ಎಂಬ ಜಯ ಘೋಷಗಳೊಂದಿಗೆ ಹೊಲದ ಸುತ್ತಲೂ ಓಡಾಡಿ, ತೀರ್ಥ, ನೈವೇದ್ಯ, ಪ್ರಸಾದ, ಚೆಲ್ಲಿ ನಂತರ ಪ್ರತಿಷ್ಠಾಪಿಸಿದ ಪಾಂಡವರ ಮೂರ್ತಿ ಮುಂದೆ ಬಂದು ದಂಡ ನಮಸ್ಕಾರ ಮಾಡಿ ಭೂಮಿ ತಾಯಿಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಬಾವಿ ಪೂಜೆ ನಡೆಸಿ, ನೈವೇದ್ಯ ಸಮರ್ಪಿಸಿ, ತೆಪ್ಪ ಮಾಡಿ ದೀಪ ಹಚ್ಚಿ ಬಾವಿ ನೀರಿನಲ್ಲಿ ಬಿಟ್ಟು ಭಕ್ತಿಯಿಂದ ಗಂಗಾ ಮಾತೆಗೆ ಕೈ ಮುಗಿದು ಪ್ರಾರ್ಥಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಶಾಸಕನಾಗುವ ಕನಸು ಕಂಡಿರಲಿಲ್ಲ

ಬೀದರ್
ಶಾಸಕನಾಗುವ ಕನಸು ಕಂಡಿರಲಿಲ್ಲ

24 Mar, 2018

ಬೀದರ್
‘ಬರವಣಿಗೆ ಕೌಶಲ ರೂಢಿಸಿಕೊಳ್ಳಿ’

‘ಕವಿಗಳು ಉತ್ತಮ ಬರವಣಿಗೆ ಕೌಶಲ ರೂಢಿಸಿಕೊಳ್ಳಬೇಕು’ ಎಂದು ಹಿರಿಯ ಸಾಹಿತಿ ಪ್ರೊ. ದೇವೇಂದ್ರ ಕಮಲ್‌ ತಿಳಿಸಿದರು.

24 Mar, 2018

ಬೀದರ್
ಮತ ಖಾತರಿಗೆ ವಿವಿ ಪ್ಯಾಟ್

‘ಮತದಾರ ತಾನು ಚಲಾಯಿಸಿದ ಮತ ಯಾವ ಅಭ್ಯರ್ಥಿಗೆ ಹೋಗಿದೆ ಎನ್ನುವುದನ್ನು ಖಾತರಿ ಪಡಿಸಿಕೊಳ್ಳಲು ವಿವಿ ಪ್ಯಾಟ್‌ ವೀಕ್ಷಿಸಬಹುದು. ಇದರಿಂದ ಚುನಾವಣಾ ವ್ಯವಸ್ಥೆ ಬಗ್ಗೆ ಮತದಾರರಲ್ಲಿ...

24 Mar, 2018

ಬೀದರ್
ಅವಿಭಕ್ತ ಕುಟುಂಬಗಳಲ್ಲಿ ಉತ್ತಮ ಸಂಸ್ಕಾರ

‘ಅವಿಭಕ್ತ ಕುಟುಂಬಗಳಲ್ಲಿ ಮಾತ್ರ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿ ಕಾಣಸಿಗುತ್ತದೆ. ಆದ್ದರಿಂದ ಕುಟುಂಬಗಳು ವಿಘಟನೆಯಾದಂತೆ ಎಚ್ಚರ ವಹಿಸಬೇಕು’ ಎಂದು ಕಾಶಿಯ ಗಂಗಾಧರ ಭಗವತ್ಪಾದ ಶಿವಾಚಾರ್ಯ ಸ್ವಾಮೀಜಿ...

23 Mar, 2018
ಖಾನ್‌ ಸಾಹೇಬರ ‘ಕೈ’ ಬಿಡದ ಉಪ ಚುನಾವಣೆಗಳು

ಮೊದಲು ಶಾಸಕನಾದ ನೆನಪು
ಖಾನ್‌ ಸಾಹೇಬರ ‘ಕೈ’ ಬಿಡದ ಉಪ ಚುನಾವಣೆಗಳು

23 Mar, 2018