ಟ್ರೆಂಡಿಂಗ್‌

ವಿಶೇಷ ಪಾತ್ರದ ಮೂಲಕ ಮತ್ತೆ ಬೆಳ್ಳಿ ತೆರೆಗೆ ರಾಣಿ ಮುಖರ್ಜಿ: ’ಹಿಚಕಿ’ ಟ್ರೇಲರ್‌ ಬಿಡುಗಡೆ

ನಾಲ್ಕು ವರ್ಷಗಳ ನಂತರ ರಾಣಿ ಮುಖರ್ಜಿ ಮತ್ತೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಚಕಿ ಚಿತ್ರದಲ್ಲಿ ಸವಾಲಿನ ಪಾತ್ರದ ಮೂಲಕ ಬಾಲಿವುಡ್‌ ಅಂಗಳದಲ್ಲಿ ಮರುಪ್ರವೇಶ ಪಡೆಯುತ್ತಿದ್ದು, ಚಿತ್ರದ ಟ್ರೇಲರ್‌ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ಯದ ಟ್ರೆಂಡ್‌ ಆಗಿದೆ.

ವಿಶೇಷ ಪಾತ್ರದ ಮೂಲಕ ಮತ್ತೆ ಬೆಳ್ಳಿ ತೆರೆಗೆ ರಾಣಿ ಮುಖರ್ಜಿ: ’ಹಿಚಕಿ’ ಟ್ರೇಲರ್‌ ಬಿಡುಗಡೆ

ಬೆಂಗಳೂರು: ನಾಲ್ಕು ವರ್ಷಗಳ ನಂತರ ರಾಣಿ ಮುಖರ್ಜಿ ಮತ್ತೆ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿಚಕಿ ಚಿತ್ರದಲ್ಲಿ ಸವಾಲಿನ ಪಾತ್ರದ ಮೂಲಕ ಬಾಲಿವುಡ್‌ ಅಂಗಳದಲ್ಲಿ ಮರುಪ್ರವೇಶ ಪಡೆಯುತ್ತಿದ್ದು, ಚಿತ್ರದ ಟ್ರೇಲರ್‌ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ಯದ ಟ್ರೆಂಡ್‌ ಆಗಿದೆ.

ಮಂಗಳವಾರ ಹಿಚಕಿ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಕೆಲವೇ ಗಂಟೆಗಳಲ್ಲಿ ಯುಟ್ಯೂಬ್‌ನಲ್ಲಿ 3.5 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ವಿಶೇಷ ಕಾಳಜಿ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಶಿಕ್ಷಕಿಯಾಗಿ ಕಾಣಿಸಿಕೊಳ್ಳುವ ರಾಣಿ ಮುಖರ್ಜಿ ಪಾತ್ರಕ್ಕೆ ಅಗತ್ಯವಿರುವ ಭಿನ್ನ ಮ್ಯಾನರಿಸಂ ಅನ್ನು ತನ್ನದಾಗಿಸಿಕೊಂಡಿರುವುದು ಟ್ರೇಲರ್‌ನಲ್ಲಿ ಸ್ಪಷ್ಟವಾಗುತ್ತದೆ.

ನರದೌರ್ಬಲ್ಯಕ್ಕೆ ಸಂಬಂಧಿಸಿದ ಟುರೆಟ್‌ ಸಿಂಡ್ರೋಮ್‌ ಹೊಂದಿರುವ ಶಿಕ್ಷಕಿಗೆ ಆಗಾಗ್ಗೆ ಕಾಡುವ ಬಿಕ್ಕಳಿಕೆ ಹಾಗೂ ನರಗಳ ಸೆಳೆತದ ಸಮಸ್ಯೆ ಇರುತ್ತದೆ. ಎಲ್ಲರಿಗೂ ಕಾಣುವಂತಹ ದೌರ್ಬಲ್ಯದ ನಡುವೆಯೂ ಆಕೆ ತನ್ನ ವಿಶ್ವಾಸವನ್ನು ಕಳೆದುಕೊಳ್ಳುವುದಿಲ್ಲ. ಇದರೊಂದಿಗೆ ತನ್ನ ವಿದ್ಯಾರ್ಥಿಗಳಿಗೂ ಸರಿಯಾದ ಹಾದಿ ಕಂಡುಕೊಳ್ಳಲೂ ಹೇಗೆ ಸಹಕಾರಿಯಾಗುತ್ತಾಳೆ ಎಂಬುದು ಈ ಪಾತ್ರದ ಕಥೆ.

2018ರ ಫೆಬ್ರುವರಿ 23ರಂದು ಚಿತ್ರ ಬಿಡುಗಡೆಗೆ ನಿಗದಿಯಾಗಿದೆ. ಸಿದ್ಧಾರ್ಥ್‌ ಪಿ ಮಲ್ಹೋತ್ರಾ ನಿರ್ದೇಶನದ ಈ ಚಿತ್ರವನ್ನು ಯಶ್‌ ರಾಜ್‌ ಫಿಲ್ಮಂಸ್‌ ತೆರೆಗೆ ತರಲಿದೆ.

2014ರಲ್ಲಿ ತೆರೆಕಂಡಿದ್ದ ಪ್ರದೀಪ್‌ ಸರ್ಕಾರ್‌ ನಿರ್ದೇಶನದ ಮರ್ದಾನಿ ರಾಣಿ ಮುಖರ್ಜಿ ಅಭಿನಯಿಸಿದ್ದ ಕೊನೆಯ ಚಿತ್ರ. 

Comments
ಈ ವಿಭಾಗದಿಂದ ಇನ್ನಷ್ಟು
ಶ್ರಾವ್ಯ ನಾಯಕಾರಾಧನೆ!

ನಾವು ನೋಡಿದ ಸಿನಿಮಾ
ಶ್ರಾವ್ಯ ನಾಯಕಾರಾಧನೆ!

21 Apr, 2018

ಸಿನಿ ಸಂಕ್ಷಿಪ್ತ
‘ಬೆಂಗಳೂರ್‌ನಿಂದ ಕಾಶ್ಮೀರ್’ ಚಿತ್ರೀಕರಣ ಮುಕ್ತಾಯ

‘ಕೃಷ್ಣ ಗಾರ್ಮೆಂಟ್ಸ್` ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಹಾಸನದಲ್ಲಿ ಎಂಟು ದಿನ ಹಾಗೂ ಬೆಂಗಳೂರು ಸುತ್ತಮುತ್ತ ಹತ್ತು ದಿನಗಳ ಚಿತ್ರೀಕರಣ ನಡೆದಿದೆ.

20 Apr, 2018
ತೆರೆಯ ಮೇಲೆ ಮೌನೇಶ್ವರ ಮಹಾತ್ಮೆ

ಸಿನಿಮಾ
ತೆರೆಯ ಮೇಲೆ ಮೌನೇಶ್ವರ ಮಹಾತ್ಮೆ

20 Apr, 2018
ಎನಿ ಟೈಂ ಮನಿ ಅಲ್ಲ; ಅಟೆಂಪ್ಟ್‌ ಟು ಮರ್ಡರ್

ಎಟಿಎಂ
ಎನಿ ಟೈಂ ಮನಿ ಅಲ್ಲ; ಅಟೆಂಪ್ಟ್‌ ಟು ಮರ್ಡರ್

20 Apr, 2018
‘ಸಾಗುವ ದಾರಿಯಲ್ಲಿ’

ಈ ವಾರ ತೆರೆಗೆ
‘ಸಾಗುವ ದಾರಿಯಲ್ಲಿ’

20 Apr, 2018