ಉಡುಪಿ

ಹೆಚ್ಚಿನ ವಾಹನಕ್ಕೆ ಇಲಾಖೆ ಸಚಿವರಿಗೆ ಬೇಡಿಕೆ

ಅಂಗವಿಕಲರ ಕಲ್ಯಾಣ ಇಲಾಖೆ ಮಾತ್ರವಲ್ಲದೆ, ಪಂಚಾಯಿತಿಗಳಲ್ಲಿ ಶೇ 3ರ ಅನುದಾನ ಬಳಸಿ ಸಹ ನಾಲ್ಕು ಚಕ್ರ ವಾಹನ ನೀಡಲಾಗುತ್ತಿದೆ.

ಉಡುಪಿ: ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹ ಅಂಗವಿಕಲರಿಗೂ ನಾಲ್ಕು ಚಕ್ರ ವಾಹನ ವಿತರಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು.

ಹಿರಿಯ ನಾಗರಿಕ ಮತ್ತು ಅಂಗವಿಕರ ಕಲ್ಯಾಣ ಇಲಾಖೆ ನಗರದ ಆಶಾ ನಿಲಯ ವಿಶೇಷ ಮಕ್ಕಳ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಂಟು ಮಂದಿಗೆ ನಾಲ್ಕು ಚಕ್ರ ವಾಹನ ವಿತರಿಸಿ ಮಾತನಾಡಿದರು.

ಕಳೆದ ವರ್ಷ 36 ನಾಲ್ಕು ಚಕ್ರ ವಾಹನ ವಿತರಿಸಲಾಗಿದೆ. ಈ ವರ್ಷವೂ ಅಷ್ಟೇ ಪ್ರಮಾಣದಲ್ಲಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಆದರೆ, 60 ಅರ್ಜಿ ಬಂದಿದೆ ಎಂದು ಅಂಗವಿಕಲರ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ. ಆದ್ದರಿಂದ ಹಿರಿಯ ನಾಗರಿಕರ ಹಾಗೂ ಅಂಗವಿಕಲರ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಅವರೊಂದಿಗೆ ಮಾತನಾಡಿ, ಹೆಚ್ಚು ವಾಹನಗಳನ್ನು ಪಡೆದುಕೊಳ್ಳಲಾಗುವುದು ಎಂದರು.

ಸಂಚಾರ ಅಂಗವಿಕಲರ ಬಹುದೊಡ್ಡ ಸಮಸ್ಯೆಯಾಗಿದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಾದರೆ ಅವರು ಇತರರನ್ನು ಆಶ್ರಯಿಸಬೇಕಾಗುತ್ತದೆ. ವಾಹನ ಇದ್ದರೆ ಸುಲಭವಾಗುತ್ತದೆ. ಅದು ಅವರ ಅಗತ್ಯಗಳಲ್ಲಿ ಒಂದು ಎಂದು ಹೇಳಿದರು.

ಅಂಗವಿಕಲರ ಕಲ್ಯಾಣ ಇಲಾಖೆ ಮಾತ್ರವಲ್ಲದೆ, ಪಂಚಾಯಿತಿಗಳಲ್ಲಿ ಶೇ 3ರ ಅನುದಾನ ಬಳಸಿ ಸಹ ನಾಲ್ಕು ಚಕ್ರ ವಾಹನ ನೀಡಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದಲೂ ನೀಡಲು ಅವಕಾಶ ಇದೆ ಎಂದು ಅವರು ಹೇಳಿದರು.

ಅಂಗವಿಕಲರ ಅನುಕೂಲಕ್ಕೆ ತಕ್ಕಂತೆ ಉತ್ತಮ ಗುಣಮಟ್ಟದ ವಾಹನಗಳನ್ನು ವಿತರಿಸಲಾಗುತ್ತಿದೆ. ಈ ವರ್ಷ ಒಟ್ಟು 2 ಸಾವಿರ ವಾಹನ ವಿತರಿಸುವ ಗುರಿಯನ್ನು ಇಲಾಖೆ ಹೊಂದಿದ್ದು, ಅದರಲ್ಲಿ ಜಿಲ್ಲೆಗೆ 36 ಸಿಗುವ ನಿರೀಕ್ಷೆ ಇದೆ ಎಂದು ಅಂಗವಿಕಲರ ಕಲ್ಯಾಣಾಧಿಕಾರಿ ನಿರಂಜನ್ ಭಟ್‌ ಹೇಳಿದರು. ಆಶಾ ನಿಲಯದ ಮುಖ್ಯ ಶಿಕ್ಷಕಿ ಜಯ ವಿಜಯ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಉಡುಪಿ
ಮಂಜೂರಿಯಾದ ಯೋಜನೆ ಪೂರ್ಣ

ಸಮೃದ್ಧ ಕಾಪು ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದೇನೆ, ಮಂಜೂರಾಗಿರುವ ಹಲವಾರು ಯೋಜನೆ ಪೂರ್ಣಗೊಳಿಸುವ ಮೂಲಕ ಗುರಿ ಸಾಧನೆ ಮಾಡಬೇಕಿದೆ ಎಂದು ಕಾಪು ಶಾಸಕ ವಿನಯ ಕುಮಾರ...

21 Apr, 2018

ಕುಂದಾಪುರ
ಶಕ್ತಿ ಪ್ರದರ್ಶನದ ಚಿಂತೆ ನನಗೆ ಇಲ್ಲ

ಕುಂದಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಶುಕ್ರವಾರ ಮಧ್ಯಾಹ್ನ ಇಲ್ಲಿನ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ...

21 Apr, 2018

ಉಡುಪಿ
ಪಟ್ಟು ಹಿಡಿದು ಟಿಕೆಟ್ ಗಿಟ್ಟಿಸಿದ ಭಟ್ಟರು

ಅಳೆದು– ತೂಗಿ ಲೆಕ್ಕಾಚಾರ ಹಾಕಿದ ಬಿಜೆಪಿ ಹೈಕಮಾಂಡ್ ಉಡುಪಿ ಮತ್ತು ಕಾಪು ಕ್ಷೇತ್ರದಲ್ಲಿ ಮಾಜಿ ಶಾಸಕರನ್ನೇ ಮತ್ತೊಮ್ಮೆ ಕಣಕ್ಕಿಳಿಸಿದೆ. ಕಾಪುವಿನಿಂದ ಲಾಲಾಜಿ ಮೆಂಡನ್ ಹಾಗೂ...

21 Apr, 2018
ಗೋಪಾಲ ಭಂಡಾರಿ ನಾಮಪತ್ರ ಸಲ್ಲಿಕೆ

ಕಾರ್ಕಳ
ಗೋಪಾಲ ಭಂಡಾರಿ ನಾಮಪತ್ರ ಸಲ್ಲಿಕೆ

21 Apr, 2018

ಶಿರ್ವ
ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆಗೆ ಕೈಕೊಟ್ಟ ಬಿಜೆಪಿ

ವಿಧಾನಸಭಾ ಚುನಾವಣೆಗೆ ಕಾಪು ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಪಕ್ಷವು ಕಾಪುಕ್ಷೇತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರ ಸಾಕಷ್ಟು ಗುಟ್ಟಾಗಿಟ್ಟು ಕೊನೆಗೂ,  ನಿರೀಕ್ಷೆಯಂತೆ ಮಾಜಿ ಶಾಸಕ ಲಾಲಾಜಿ...

21 Apr, 2018