ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಪನಹಳ್ಳಿ: ಶಿಲಾನ್ಯಾಸ, ಉದ್ಘಾಟನೆಗಳ ಭರಾಟೆ

Last Updated 21 ಡಿಸೆಂಬರ್ 2017, 6:18 IST
ಅಕ್ಷರ ಗಾತ್ರ

ಹರಪನಹಳ್ಳಿ: ಪಟ್ಟಣಕ್ಕೆ ಡಿ.26ರಂದು ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಶಾಸಕ ಎಂ.ಪಿ.ರವೀಂದ್ರ ತಿಳಿಸಿದರು.

ನಜೀರನಗರ ಹಾಗೂ ಹಲುವಾಗಲು, ಕನ್ನನಾಯಕನಹಳ್ಳಿ ಮೂರಾರ್ಜಿ ವಸತಿ ಶಾಲೆ ಸಿಬ್ಬಂದಿ ವಸತಿ ಗೃಹಗಳು, ಮಾಚಿಹಳ್ಳಿ –ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ವಸತಿ ಗೃಹಗಳಿಗೆ ಶಿಲಾನ್ಯಾಸ, ಬಿಸಿಎಂ –ಬಾಲಕರ ವಿದ್ಯಾರ್ಥಿ ನಿಲಯ, ಅಗ್ನಿ ಶಾಮಕ ಠಾಣೆಗೆ ಶಂಕುಸ್ಥಾಪನೆ ನೆರವೇರಿಸುವರು ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.‌

ಚಿಗಟೇರಿ ಪೊಲೀಸ್ ಠಾಣೆ ಉದ್ಘಾಟನೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೆಚ್ಚುವರಿ ಕೊಠಡಿ, ಪಾಲಿಟೆಕ್ನಿಕ್ ಬಾಲಕಿಯರ ವಿದ್ಯಾರ್ಥಿ ನಿಲಯದ ಕೊಠಡಿಗೆ ಶಂಕುಸ್ಥಾಪನೆ ನೆರವೇರಿಸುವರು ಎಂದರು.

ಪಟ್ಟಣದ ಸರ್ಕಾರಿ ಆಸ್ಪತ್ರೆ ಕಟ್ಟಡ ಉದ್ಘಾಟನೆ, ರಸ್ತೆಗಳು, ಸೇತುವೆ, ಉಪ ಕಾರಾಗೃಹ, ವಿಐಪಿ ವಸತಿ ಗೃಹ, ಸಬ್ ಜೈಲ್ ವಸತಿಗೃಹಗಳ ಉದ್ಘಾಟನೆ, ಎರಡು ಹೊಸ ಐಟಿಐ ಕಾಲೇಜ್, ಇಂದಿರಾ ಕ್ಯಾಂಟಿನ್, ಕುರಿ-ಮೇಕೆ ಸಂತೆಗೆ ಶಂಕುಸ್ಥಾಪನೆ, ಎಪಿಎಂಸಿ ಗೋಡೌನ್, ಹರಾಜು ಮಾರುಕಟ್ಟೆ, ಉಪ ಮಾರುಕಟ್ಟೆ, ಚಿರಸ್ತಹಳ್ಳಿ, ಲಕ್ಷ್ಮೀಪುರ, ನಂದಿಬೇವೂರು ಬಸ್ ನಿಲ್ದಾಣ, ಹಗರಿಗಜಾಪುರ ಬಳಿ ಬ್ರಿಜ್‌ ಕಂ ಬ್ಯಾರೇಜ್ ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಿದರು.

ಗರ್ಭಗುಡಿ ಪಿಕಪ್ ಕಂ ಬ್ರಿಜ್‌, 50 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಹುಲಿಕಟ್ಟಿ ಪಶು ಆಸ್ಪತ್ರೆ, ಹೆಚ್ಚುವರಿ ಅನುದಾನದ ಶಂಕುಸ್ಥಾಪನೆ, ಗುಂಡಗತ್ತಿ ಯಾತ್ರ ನಿವಾಸ, ಗುಂಡಿನಕೇರಿ ಉರ್ದು ಪ್ರಾಥಮಿಕ ಶಾಲಾ ಕಟ್ಟಡ, ದೇವರಾಜು ಅರಸು ಭವನ, ಹಿರೇಮೇಗಳಗೆರೆ, ಗೋವೆರಹಳ್ಳಿ ಪಶು ಆಸ್ಪತ್ರೆ, ಹರಪನಹಳ್ಳಿ, ಕಂಚಿಕೇರಿ ಸರ್ಕಾರಿ ಜೂನಿಯರ್ ಕಾಲೇಜು ಕೊಠಡಿಗಳು, ತೆಲಿಗಿ ರೈತ ಸಂಪರ್ಕ ಕೇಂದ್ರ, ನಾಲ್ಕು ಅಂಗನವಾಡಿ ಕೇಂದ್ರಗಳ ಉದ್ಘಾಟನೆ, ಬೆಸ್ಕಾಂನ ತೆಲಿಗಿ ಉಪ ವಿಭಾಗ ಪ್ರಾರಂಭೋತ್ಸವ, ವಾಲ್ಮೀಕಿ ಭವನ, ಅಂಬೇಡ್ಕರ್ ಭವನ, ಬಾಬು ಜಗಜೀವನ ಭವನ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದರು.

ನಂದಿಬೇವೂರು ಸಮುದಾಯ ಭವನ, ವ್ಯಾಸನತಾಂಡ ಸಿಸಿ ರಸ್ತೆ, ಹರಪನಹಳ್ಳಿ ಸಮುದಾಯ ಭವನ ಉದ್ಘಾಟನೆ, ಇಜಾರಿ ಶಿರಸಪ್ಪ ಬಡಾವಣೆಯ 120 ಫಲಾನುಭವಿಗಳಿಗೆ ಡೋರ್ ನಂಬರ್, 7 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 700 ಫಲಾನುಭವಿಗಳಿಗೆ ಅಶ್ರಯ ಮನೆ ನಿವೇಶನ ಹಕ್ಕು ಪತ್ರ ವಿತರಿಸಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT