ಮಂಗಳೂರು

ಬಂಟ್ವಾಳ ತಾಲ್ಲೂಕಿನ ನಾವೂರು: ಗಂಡು ಕರು ಸಾಗಣೆ- ಗುಂಪಿನಿಂದ ಇಬ್ಬರ ಮೇಲೆ‌ ಹಲ್ಲೆ

ಕಕ್ಕೆಪದವು ಉಳಿ ನಿವಾಸಿ ಪೂವಪ್ಪ ನಾಯ್ಕ ಮತ್ತು ರಿಕ್ಷಾ ಚಾಲಕ ಸೈಯದ್ ಇಬ್ರಾಹಿಂ ಹಲ್ಲೆಗೊಳಗಾದವರು. ರಿಕ್ಷಾದಲ್ಲಿ ಕರು ಸಾಗಿಸುತ್ತಿರುವುದನ್ನು ಕಂಡ ಸ್ಥಳೀಯ 25 ಕ್ಕೂ ಹೆಚ್ಚು ಮಂದಿಯ ಗುಂಪು ವಾಹನ ತಡೆದು ಹಲ್ಲೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

-ಸಾಂದರ್ಭಿಕ ಚಿತ್ರ

ಮಂಗಳೂರು: ಬಂಟ್ವಾಳ ತಾಲ್ಲೂಕಿನ ನಾವೂರು ಗ್ರಾಮದ ಹಳೆಗೇಟು ಎಂಬಲ್ಲಿ ದನದ ಗಂಡು ಕರುವೊಂದನ್ನು ಸರಕು ಸಾಗಣೆ ರಿಕ್ಷಾ ಸಾಗಿಸುತ್ತಿದ್ದ ಇಬ್ಬರ ಮೇಲೆ‌ ಗುಂಪೊಂದು ಮಂಗಳವಾರ ರಾತ್ರಿ ಹಲ್ಲೆ‌ ನಡೆಸಿದೆ.

ಸಮೀಪದ ಕಕ್ಕೆಪದವು ಉಳಿ ನಿವಾಸಿ ಪೂವಪ್ಪ ನಾಯ್ಕ ಮತ್ತು ರಿಕ್ಷಾ ಚಾಲಕ ಸೈಯದ್ ಇಬ್ರಾಹಿಂ ಹಲ್ಲೆಗೊಳಗಾದವರು. ರಿಕ್ಷಾದಲ್ಲಿ ಕರು ಸಾಗಿಸುತ್ತಿರುವುದನ್ನು ಕಂಡ ಸ್ಥಳೀಯ 25 ಕ್ಕೂ ಹೆಚ್ಚು ಮಂದಿಯ ಗುಂಪು ವಾಹನ ತಡೆದು ಹಲ್ಲೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇಬ್ಬರ ಮೇಲೆ ಹಲ್ಲೆ ನಡೆಸಿದ ಗುಂಪು ಅವರನ್ನು ಪೊಲೀಸ್ ವಶಕ್ಕೆ ನೀಡಿದೆ. ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ವಿಚಾರಣೆ ನಡೆಸಿದಾಗ, ಸಾಕುವುದಕ್ಕಾಗಿ ಕರು ಸಾಗಿಸುತ್ತಿದ್ದುದಾಗಿ ಹಲ್ಲೆಗೊಳಗಾದವರು ಹೇಳಿಕೆ ನೀಡಿದ್ದಾರೆ.

ಹಲ್ಲೆಗೊಳಗಾದವರ ದೂರಿನಂತೆ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಕಾಸರಗೋಡು
ಕಾಸರಗೋಡಿನಲ್ಲಿ ಭಾಷಾ ಉತ್ಸವ: ಶಿಫಾರಸು

'ಎಲ್ಲಾ ಭಾಷೆಗಳ ಪರಿ ಪೋಷಣೆಗೆ ಅಗತ್ಯವಾದ ಸಾಹಿತ್ಯ -ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆ ಯಬೇಕು. ಇಲ್ಲಿಗೆ ಪ್ರತ್ಯೇಕವಾದ ಯುವಜನ ನೀತಿಯನ್ನು ರಚಿಸಬೇಕಾಗಿದೆ'.

18 Jan, 2018
ಕುಡಿಯುವ ನೀರು ಪೂರೈಕೆಗೆ ₹33 ಕೋಟಿ

ಮಂಗಳೂರು
ಕುಡಿಯುವ ನೀರು ಪೂರೈಕೆಗೆ ₹33 ಕೋಟಿ

18 Jan, 2018
ನಕ್ಸಲ್: 5 ವರ್ಷಗಳಿಂದ ನಿರಂತರ ಭೇಟಿ

ಉಪ್ಪಿನಂಗಡಿ
ನಕ್ಸಲ್: 5 ವರ್ಷಗಳಿಂದ ನಿರಂತರ ಭೇಟಿ

18 Jan, 2018
ಕಸಿ ಕಾಳುಮೆಣಸು ಸಂಪನ್ನ ಕೃಷಿ

ದಕ್ಷಿಣ ಕನ್ನಡ
ಕಸಿ ಕಾಳುಮೆಣಸು ಸಂಪನ್ನ ಕೃಷಿ

17 Jan, 2018
‘ನಾವು ನಕ್ಸಲರು; ಏನೂ ಮಾಡುವುದಿಲ್ಲ’

ಉಪ್ಪಿನಂಗಡಿ
‘ನಾವು ನಕ್ಸಲರು; ಏನೂ ಮಾಡುವುದಿಲ್ಲ’

17 Jan, 2018