ಕಾರವಾರ

ಕಾರವಾರ ಆಹಾರ ಮೇಳ 26ರಿಂದ

‘ಈಗಾಗಲೇ ಸುಮಾರು 16 ಆಹಾರ ತಯಾರಕರು ಈ ಮೇಳದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.

ಕರಾವಳಿಯ ವಿಶೇಷ ಖಾದ್ಯಗಳು (ಸಾಂದರ್ಭಿಕ ಚಿತ್ರ)

ಕಾರವಾರ: ಇಲ್ಲಿನ ಕಾಳಿ ನದಿಯ ದಂಡೆಯ ಮೇಲಿರುವ ಕಾಳಿ ರಿವರ್‌ ಗಾರ್ಡನ್‌ನಲ್ಲಿ ಇದೇ 26ರಿಂದ 30ರವರೆಗೆ ‘ಕಾರವಾರ ಆಹಾರ ಮೇಳ’ವನ್ನು ಮೊದಲ ಬಾರಿಗೆ ಆಯೋಜಿಸಲಾಗಿದ್ದು, ಕರಾವಳಿಯ ವಿಶೇಷ ಖಾದ್ಯಗಳು ತಿಂಡಿಪ್ರಿಯರ ಬಾಯಲ್ಲಿ ನೀರು ತರಿಸಲಿದೆ.

ಪ್ರವಾಸೋದ್ಯಮ ಇಲಾಖೆ, ಉತ್ತರ ಕನ್ನಡ ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿಯ ಸಹಯೋಗದಲ್ಲಿ ಲೀಸರ್‌ ರೂಟ್ಸ್‌ ಸಂಸ್ಥೆಯು ಈ ಮೇಳವನ್ನು ಆಯೋಜಿಸಿದ್ದು, ಐದು ದಿನಗಳವರೆಗೆ ನಡೆಯಲಿದೆ. ಆಹಾರ ತಯಾರಿಕಾ ಕೆಲ ಸಂಸ್ಥೆಗಳು ಮೇಳದಲ್ಲಿ ಭಾಗವಹಿಸುತ್ತಿದ್ದು, ಸುಮಾರು 70ಕ್ಕೂ ಅಧಿಕ ನಮೂನೆಯ ಖಾದ್ಯಗಳು ಇಲ್ಲಿ ಸವಿಯಲು ಸಿಗಲಿದೆ.

ಮೇಳದಲ್ಲಿ ಏನೇನಿರುತ್ತದೆ?: ವಿವಿಧ ನಮೂನೆಯ ಬಿರಿಯಾನಿ, ಸಮುದ್ರ ಆಹಾರಗಳು, ಕರಾವಳಿಯ ತಿಂಡಿ– ತಿನಿಸುಗಳು, ಚಾಟ್ಸ್, ಸಾವಯವ ಆಹಾರಗಳು, ಚೈನೀಸ್‌ ಆಹಾರಗಳು ಇಲ್ಲಿ ದೊರೆಯಲಿವೆ. ವಿಶೇಷವಾಗಿ ಕಾರವಾರ ಹಾಗೂ ಮಂಗಳೂರು ಶೈಲಿಯ ಆಹಾರಗಳು ಇಲ್ಲಿ ಗಮನ ಸೆಳೆಯಲಿವೆ. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಮತ್ಸದರ್ಶಿನಿ ಮಳಿಗೆಯಲ್ಲಿ ಸಿಗಡಿ (ಪ್ರಾನ್ಸ್‌), ಏಡಿ, ಕಿಂಗ್‌ ಫಿಶ್‌, ಸಾಲ್‌ಮೊನ್‌, ಸ್ಕ್ವಿಡ್‌, ಪಾಂಪ್ಲೆಟ್‌, ಫಿಶ್‌ ಕಟ್‌ಲೆಟ್‌, ಫಿಶ್‌ ಕಬಾಬ್‌, ಲ್ಯಾಬ್‌ಸ್ಟರ್‌ ಬೈಟ್‌, ಫಿಶ್‌ ಫಿಂಗರ್‌ ಖಾದ್ಯಗಳಿರುತ್ತವೆ.

ಇನ್ನು ರತ್ನಾಸ್‌ ಕೆಎ–30 ಸಂಸ್ಥೆಯಿಂದ ಮಂಗಳೂರಿನ ಕೋರಿ ರೋಟಿ, ನೀರ್‌ದೋಸೆ ಜತೆ ಚಿಕ್ಕನ್ ಸುಕ್ಕಾ, ಚಿಕನ್ ಘೀ ರೋಸ್ಟ್‌ ಸೇರಿದಂತೆ ಕರಾವಳಿ ಖಾದ್ಯಗಳು ಸಿದ್ಧವಾಗಲಿದೆ. ಶ್ರೀಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ವತಿಯಿಂದ ಸಿರಿ ಧಾನ್ಯ ಆಹಾರಗಳು ಇಲ್ಲಿ ಸಿಗಲಿದೆ.

20 ಮಳಿಗೆಗೆ ಅವಕಾಶ: ‘ಈಗಾಗಲೇ ಸುಮಾರು 16 ಆಹಾರ ತಯಾರಕರು ಈ ಮೇಳದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಮಾಂಸಾಹಾರದಲ್ಲಿ ರತ್ನಾಸ್ ಕೆಎ 30, ಕೆಎಫ್‌ಡಿಸಿಯ ಮತ್ಸ್ಯದರ್ಶಿನಿ, ಶಾಖಾಹಾರದಲ್ಲಿ ಶ್ರೀಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸಿರಿ ಧಾನ್ಯ ಆಹಾರ ಮಳಿಗೆ ಹಾಗೂ ರತ್ನಾ ಸಾಗರ್‌ ಮಳಿಗೆಗಳು ಇರಲಿದೆ. ಇದರ ಜತೆಗೆ ಇಲ್ಲಿಯ ಸ್ಥಳೀಯರ ಆಹಾರಗಳ ಮಳಿಗೆಗಳು ಇರಲಿದೆ. ಒಟ್ಟು 20 ಮಳಿಗೆಗಳನ್ನು ಇಡಲು ಅವಕಾಶ ನೀಡಲಾಗುತ್ತಿದೆ. ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು ಮೊ: 7899508888 ಗೆ ಕರೆ ಮಾಡಬಹುದು’ ಎಂದು ಲೀಸರ್‌ ರೂಟ್ಸ್‌ ಸಂಸ್ಥೆಯ ಮಾಲೀಕ ರೋಶನ್‌ ಪಿಂಟೋ ‘ಪ್ರಜಾವಾಣಿ’ಗೆ ತಿಳಿಸಿದರು.

ಸಂಗೀತ ಸಂಜೆ: ‘ಪ್ರತಿದಿನ ಸಂಜೆ 4ರಿಂದ ರಾತ್ರಿ 10ವರೆಗೆ ಆಹಾರ ಮೇಳ ನಡೆಯಲಿದ್ದು, ಸಂಜೆ 7ರಿಂದ ರಾತ್ರಿ 9.30ರವರೆಗೆ ಸಂಗೀತ ರಸಸಂಜೆ ಕಾರ್ಯಕ್ರಮಗಳನ್ನು ಕೂಡಾ ಆಯೋಜಿಸಲಾಗಿದೆ. ಇದೇ 26ರ ಸಂಜೆ ರಿಧಂ ಆಫ್‌ ಲವ್, 27ಕ್ಕೆ ಸಿಲ್ವಿಯಾ ಬೀಟ್‌ರೂಟ್‌ ಜ್ಯಾಮ್, 28ಕ್ಕೆ ಕಾರವಾರ ಕರೋಕೆ ಕ್ಲಬ್‌, 29ರಂದು ವೈಲ್ಡ್‌ ಬೀಟ್‌ ಬ್ಯಾಂಡ್ ಹಾಗೂ 30ರಂದು ಸ್ವರ ಸಂಗೀತ ಅವರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷ ಆಟಿಕೆಗಳನ್ನು ಮೇಳದಲ್ಲಿ ಇಡಲಾಗುತ್ತಿದೆ. ಇಲ್ಲಿನ ಪ್ರತಿ ದಿನದ ಕಾರ್ಯಕ್ರಮಗಳ ಮಾಹಿತಿಗಳನ್ನು ‘ಕೋ ರೋವರ್ ಕನೆಕ್ಟ್‌’ ಆ್ಯಪ್‌ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳುವುದರ ಮೂಲಕ ಪಡೆದುಕೊಳ್ಳಬಹುದಾಗಿದೆ. ಈ ಮೇಳಕ್ಕೆ ₹ 20 ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ’ ಎಂದರು.

* * 

ಇಲ್ಲಿನ ಆಹಾರಗಳನ್ನು ದೇಶದ ವಿವಿಧ ಭಾಗಕ್ಕೆ, ಅಲ್ಲಿನ ಖಾದ್ಯಗಳನ್ನು ಇಲ್ಲಿನ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಮೇಳ ಆಯೋಜಿಸಲಾಗುತ್ತಿದೆ.
ರೋಶನ್‌ ಪಿಂಟೋ
ಲೀಸರ್‌ ರೂಟ್ಸ್‌ ಸಂಸ್ಥೆಯ ಮಾಲೀಕ

Comments
ಈ ವಿಭಾಗದಿಂದ ಇನ್ನಷ್ಟು
ಅಂತೂ ಆರಂಭವಾಯ್ತು ಬಂದರಿನಲ್ಲಿ ಹೂಳೆತ್ತುವ ಕಾರ್ಯ!

ಕಾರವಾರ
ಅಂತೂ ಆರಂಭವಾಯ್ತು ಬಂದರಿನಲ್ಲಿ ಹೂಳೆತ್ತುವ ಕಾರ್ಯ!

16 Jan, 2018

ಕಾರವಾರ
ಪಕ್ಷಿ ವೀಕ್ಷಣೆ ಕಾರ್ಯಾಗಾರ; 31 ಪ್ರಬೇಧಗಳ ಗುರುತು

ತಾಲ್ಲೂಕಿನ ಮಲ್ಲಾಪುರದ ಆದರ್ಶ ವಿದ್ಯಾಲಯ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಸುತ್ತಮುತ್ತಲಿನ ಜೀವಿ ಸಂಕುಲಗಳನ್ನು ಪರಿಚಯಿಸಲು ಇತ್ತೀಚಿಗೆ ನಡೆಸಿದ ಪಕ್ಷಿ ವೀಕ್ಷಣೆ ಕಾರ್ಯಾಗಾರದಲ್ಲಿ ಒಟ್ಟು 31 ಪ್ರಬೇಧಗಳನ್ನು ಗುರುತಿಸಲಾಗಿದೆ. ...

16 Jan, 2018

ಉತ್ತರ ಕನ್ನಡ
ತಾತ್ಕಾಲಿಕವಾಗಿ ಬಾಗಿಲುಮುಚ್ಚಿದ ಪ್ರಯೋಗಾಲಯ

‘ಬೇಸಿಗೆ ಕಾಲ ನಮ್ಮ ಕಣ್ಣೆದುರೇ ಇದೆ. ಬಾವಿ, ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನೀರಿನ ಗುಣಮಟ್ಟ ತಿಳಿದುಕೊಳ್ಳುವುದು ಅತ್ಯಗತ್ಯ. ಆದ್ದರಿಂದ ಅಗತ್ಯ...

16 Jan, 2018

ದಾಂಡೇಲಿ
ಫೆ. 2 ರಿಂದ ಹಾರ್ನ್‌ಬೆಲ್‌ ಹಕ್ಕಿ ಹಬ್ಬ

ಎಲ್ಲ ವರ್ಗದ ಜನರಿಗೂ ಅದರಲ್ಲಿಯೂ ಯುವ ಪೀಳಿಗೆಗೆ ಹಾರ್ನಬಿಲ್ ಹಕ್ಕಿಯ ಮಹತ್ವ ಕುರಿತು ಅರಿವು ಮೂಡಿಸುವುದು ಹಬ್ಬದ ಉದ್ದೇಶ.

15 Jan, 2018
ಪ್ರಯಾಣಿಕರ ಸ್ವಾಗತಿಸಲಿದೆ ಪುಷ್ಪಲೋಕ!

ಕಾರವಾರ
ಪ್ರಯಾಣಿಕರ ಸ್ವಾಗತಿಸಲಿದೆ ಪುಷ್ಪಲೋಕ!

15 Jan, 2018