ಹಿಟ್‌ ಹಾಡು

‘ನನ್ನ ಮನದರಸಿ ನೀನು’

‘ಸೀಕ್ರೆಟ್‌ ಸೂಪರ್‌ಸ್ಟಾರ್’ ಬಿಡುಗಡೆಯಾದ ನಂತರ ತಾರಾಪಟ್ಟಕ್ಕೇರಿದವರು ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ. ಇದೀಗ ಇದೇ ಸಂಗೀತ ನಿರ್ದೇಶಕನ ಕೈಚಳಕವಿರುವ ಮತ್ತೊಂದು ಚಿತ್ರ ‘ಪ್ಯಾಡ್‌ಮನ್’ ಬಿಡುಗಡೆಗೆ ಸಿದ್ಧವಾಗಿದೆ. ಕಳೆದ ವಾರವಷ್ಟೇ ಟೀಸರ್‌ ಬಿಡುಗಡೆ ಮಾಡಿ ಜನರಲ್ಲಿ ನಿರೀಕ್ಷೆ ಹೆಚ್ಚಿಸಿದ್ದ ಚಿತ್ರತಂಡ ಇದೀಗ ಹಾಡೊಂದನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡಿದೆ.

ನವದಾಂಪತ್ಯದ ಸಲುಗೆ, ಸರಸ–ಸಲ್ಲಾಪಗಳನ್ನು ಆಪ್ತವಾಗಿ ಕಟ್ಟಿಕೊಡುವ ಹಾಡು ‘ಆಜ್‌ ಸೇ ತೇರಿ’. ಇದು ಯುಟ್ಯೂಬ್‌ಗೆ ಅಪ್‌ಲೋಡ್ ಆದ ಒಂದೇ ದಿನದಲ್ಲಿ 40 ಲಕ್ಷ ಹಿಟ್ಸ್‌ ಪಡೆದಿದೆ.

ಹೊಸದಾಗಿ ಮದುವೆಯಾದ ಪತಿ–ಪತ್ನಿಯರ ಆಪ್ತಕ್ಷಣಗಳಿಗೆ ಅಕ್ಷಯ್‌ಕುಮಾರ್ ಮತ್ತು ರಾಧಿಕಾ ಆಪ್ಟೆ ಜೀವ ತುಂಬಿದ್ದಾರೆ. ಅರ್ಜಿತ್‌ ಸಿಂಗ್‌ ದನಿಯಲ್ಲಿರುವ ಕೌಸರ್‌ ಮುನೀರ್‌ ಅವರ ಸಾಹಿತ್ಯ ನವದಂಪತಿಗಳ ಭಾವನೆಗಳನ್ನು ವೀಕ್ಷಕರ ಮನಕ್ಕೆ ದಾಟಿಸುವಲ್ಲಿ ಸಫಲವಾಗುತ್ತದೆ.

‘ನಿನ್ನ ಮನ ನನ್ನದು, ನನ್ನ ಮನೆ ನಿನ್ನದು’ ಎನ್ನುವ ಮಾತಂತೂ ಕೇಳಿದಕ್ಷಣವೇ ಮನಕ್ಕೆ ಇಳಿದುಬಿಡುತ್ತೆ. ರಾಧಿಕಾ ಪಕ್ಕದಮನೆಯಷ್ಟೇ ಹುಡುಗಿಯಷ್ಟು ಆಪ್ತರಾಗುತ್ತಾರೆ. ಅಕ್ಷಯ್‌ಕುಮಾರ್‌ ನಮ್ಮೂರಿನ ಸಹೃದಯಿಯಂತೆ ಮನತಟ್ಟುತ್ತಾರೆ.

ಈರುಳ್ಳಿ ಕತ್ತರಿಸುವಾಗ ಕಣ್ಣೀರಿಡುವ ಪತ್ನಿಗಾಗಿ ಈರುಳ್ಳಿ ಕತ್ತರಿಸುವ ಯಂತ್ರವನ್ನೇ ಈ ಪತಿರಾಯ ಮಾಡಿಕೊಡುತ್ತಾನೆ. ಆಕೆಗಾಗಿ ತನ್ನ ಸೈಕಲ್ ಕ್ಯಾರಿಯರ್‌ ವಿನ್ಯಾಸ ಬದಲಿಸುತ್ತಾನೆ. ಮದುವೆಯಾದ ನಂತರ ಬಂದ ಮೊದಲ ಸಂಬಳವನ್ನು ಅಮ್ಮನಿಗೆ ಕೊಡುವುದೋ–ಹೆಂಡತಿಗೆ ಕೊಡುವುದೋ ಎಂಬ ಭಾರತೀಯ ಪುರುಷರ ದ್ವಂದ್ವ ಅವನನ್ನೂ ಕಾಡುತ್ತದೆ.

ಸಿನಿಮಾ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಹಾಡು ಸಫಲವಾಗಿದೆ. ಸಿನಿಮಾ ಜ.16ರಂದು ತೆರೆಕಾಣಲಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಸಾಧು ಕೋಕಿಲ

ಈ ದಿನ ಜನ್ಮದಿನ
ಸಾಧು ಕೋಕಿಲ

24 Mar, 2018
ಪ್ರವಾಸದ ಖರ್ಚಿಗೆ ಕಡಿವಾಣ

ಟ್ರಾವೆಲ್‌ ಟಿಪ್ಸ್‌
ಪ್ರವಾಸದ ಖರ್ಚಿಗೆ ಕಡಿವಾಣ

24 Mar, 2018
ಚಿಂತೆ ಬಿಟ್ಟು, ಖುಷಿಯಾಗಿರಿ...

ಖುಷಿ ವಿಚಾರ
ಚಿಂತೆ ಬಿಟ್ಟು, ಖುಷಿಯಾಗಿರಿ...

24 Mar, 2018
ಸ್ಟಾರ್‌ ಕ್ಲಿಕ್‌

ಅನುಷ್ಕಾ ಶರ್ಮಾ
ಸ್ಟಾರ್‌ ಕ್ಲಿಕ್‌

24 Mar, 2018
ಬೇಸಿಗೆಗೆ ಚೆಲುವಿನ ತಂಪು

ಫ್ಯಾಷನ್‌
ಬೇಸಿಗೆಗೆ ಚೆಲುವಿನ ತಂಪು

24 Mar, 2018