ಚಿತ್ರ ತಯಾರಿ

30 ಕೆ.ಜಿ. ತೂಕ ಇಳಿಸಿಕೊಂಡ ಧ್ರುವ ಸರ್ಜಾ

‘ಭರ್ಜರಿ’ ಸಿನಿಮಾದ ಮೂಲಕ ಸ್ಟಾರ್‌ಗಿರಿ ಹೆಚ್ಚಿಸಿಕೊಂಡವರು ನಟ ಧ್ರುವ ಸರ್ಜಾ. ನಂದ ಕಿಶೋರ್‌ ನಿರ್ದೇಶನದ ತಮ್ಮ ಮುಂದಿನ ‘ಪೊಗರು’ ಚಿತ್ರಕ್ಕಾಗಿ ಅವರು ಸುಮಾರು 30 ಕೆ.ಜಿ. ತೂಕ ಕಳೆದುಕೊಂಡು ಸಣ್ಣಗಾಗಿದ್ದಾರೆ.

30 ಕೆ.ಜಿ. ತೂಕ ಇಳಿಸಿಕೊಂಡ ಧ್ರುವ ಸರ್ಜಾ

‘ಭರ್ಜರಿ’ ಸಿನಿಮಾದ ಮೂಲಕ ಸ್ಟಾರ್‌ಗಿರಿ ಹೆಚ್ಚಿಸಿಕೊಂಡವರು ನಟ ಧ್ರುವ ಸರ್ಜಾ. ನಂದ ಕಿಶೋರ್‌ ನಿರ್ದೇಶನದ ತಮ್ಮ ಮುಂದಿನ ‘ಪೊಗರು’ ಚಿತ್ರಕ್ಕಾಗಿ ಅವರು ಸುಮಾರು 30 ಕೆ.ಜಿ. ತೂಕ ಕಳೆದುಕೊಂಡು ಸಣ್ಣಗಾಗಿದ್ದಾರೆ.

‘ಪೊಗರು’ ಚಿತ್ರದಲ್ಲಿ ಧ್ರುವ ಅವರದು ಹೈಸ್ಕೂಲು ಮುಗಿಸಿ ಕಾಲೇಜಿಗೆ ಕಾಲಿಟ್ಟ ಹುಡುಗ. ಈ ಚಿತ್ರದ ಪಾತ್ರಕ್ಕಾಗಿ ಬರೋಬ್ಬರಿ 30 ಕೆ.ಜಿ. ಇಳಿಸಿಕೊಳ್ಳಲು ನಂದ ಕಿಶೋರ್‌ ಅವರು ಸೂಚನೆ ನೀಡಿದ್ದಾರಂತೆ. ಫಿಟ್‌ ಆಗಿ ಇರಬೇಕು ಎಂದು ಬಯಸುವ ಧ್ರುವ ಅವರು ಎಂದೂ ವರ್ಕೌಟ್‌ ತಪ್ಪಿಸಿದವರಲ್ಲ. ಆದರೆ ಈಗ ತೂಕ ಕಡಿಮೆ ಮಾಡಿಕೊಳ್ಳಲು ಜಿಮ್‌ನಲ್ಲಿ ತುಸು ಹೆಚ್ಚು ಕಾಲ ಕಳೆಯುತ್ತಿದ್ದಾರೆ.

ಬೆಳಿಗ್ಗೆ 2 ಗಂಟೆ, ಸಂಜೆ 2 ಗಂಟೆಗಳ ಕಾಲ ಜಿಮ್‌ನಲ್ಲಿ ಕಾರ್ಡಿಯೊ ಮಾಡುತ್ತಾರೆ.

‘96 ಕೆ.ಜಿ ಇದ್ದ ನಾನು ಈಗ 65 ಕೆ.ಜಿ ಆಗಿದ್ದೇನೆ. ಇನ್ನು 5 ಕೆ.ಜಿ ಕಡಿಮೆ ಮಾಡಿಕೊಂಡರೆ ಆಯಿತು. ಇನ್ನು ಒಂದು ವಾರದಲ್ಲಿ ಇದೂ ಆಗುತ್ತೆ’ ಎಂದು ಹೇಳುತ್ತಾರೆ ಸರ್ಜಾ. ಇವರಿಗೆ ಜಿಮ್‌ ಟ್ರೈನ್‌ ಮಾಡುತ್ತಿರುವವರು ಪ್ರಶಾಂತ್‌ ಪೂಜಾರಿ. ಅವರ ನಿರ್ದೇಶನದ ಪ್ರಕಾರ ವರ್ಕೌಟ್‌ ಮಾಡಿ ಈಗ ಯಶಸ್ವಿಯೂ ಆಗಿದ್ದಾರೆ.

ಆಹಾರದಲ್ಲೂ ಪಥ್ಯ ಮಾಡುತ್ತಿದ್ದಾರೆ ಧ್ರುವ ಸರ್ಜಾ. ಡಯೆಟ್‌ಗಾಗಿ ತರಕಾರಿಯನ್ನೇ ನೆಚ್ಚಿಕೊಂಡಿದ್ದಾರೆ. ಬೀಟ್‌ರೂಟ್‌, ಬೀನ್ಸ್‌, ಎಲೆಕೋಸಿನಿಂದ ಮಾಡಿದ ತಿನಿಸುಗಳನ್ನು ಹೆಚ್ಚು ತಿನ್ನುತ್ತಿದ್ದಾರೆ. ದ್ರವ ಪದಾರ್ಥಗಳಿಗೆ ಮೊದಲ ಆದ್ಯತೆ.

Comments
ಈ ವಿಭಾಗದಿಂದ ಇನ್ನಷ್ಟು
‘ಫೈಟ್ ಮಾಡುವಾಸೆ’

ಬೆಳ್ಳಿ ತೆರೆ
‘ಫೈಟ್ ಮಾಡುವಾಸೆ’

25 Apr, 2018
ಲೇವಿಟ್ವ ಬಿಡಿಸಿದ ದೀರ್ಘಾಯು ನಕ್ಷತ್ರದ ಗುಟ್ಟು

ಮಹಿಳಾ ವಿಜ್ಞಾನಿ
ಲೇವಿಟ್ವ ಬಿಡಿಸಿದ ದೀರ್ಘಾಯು ನಕ್ಷತ್ರದ ಗುಟ್ಟು

25 Apr, 2018
ಮೇನಾಳ ವೇಗನ್‌ ಮೇನಿಯಾ

ಸ್ಟಾರ್‌ ಡಯಟ್‌
ಮೇನಾಳ ವೇಗನ್‌ ಮೇನಿಯಾ

25 Apr, 2018
ದಿರಿಸಿನ ನಾವೀನ್ಯತೆಗೆ ಕಸೂತಿ

ಮೈಸೂರು ಮೆಟ್ರೋ
ದಿರಿಸಿನ ನಾವೀನ್ಯತೆಗೆ ಕಸೂತಿ

24 Apr, 2018
ನೀಳ ಕೇಶಾಲಂಕಾರಕ್ಕೆ ಜಡೆಬಿಲ್ಲೆಗಳು

ಕರಾವಳಿ
ನೀಳ ಕೇಶಾಲಂಕಾರಕ್ಕೆ ಜಡೆಬಿಲ್ಲೆಗಳು

24 Apr, 2018