ಹೊಳೆಹೊನ್ನೂರು

‘ಗೋದಾಮಿನ ಪ್ರಯೋಜನ ರೈತರಿಗೆ ಸಿಗಲಿ’

‘ಮುಂದಿನ ದಿನಗಳಲ್ಲಿ ಇಲ್ಲಿನ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯು ಸ್ವತಂತ್ರ ಮಾರುಕಟ್ಟೆಯಾಗುವ ಎಲ್ಲ ಲಕ್ಷಣ ಹೊಂದಿದೆ. ಇದಕ್ಕೆ ಸರ್ಕಾರವು ಹೆಚ್ಚಿನ ಅನುದಾನ ನೀಡಬೇಕು.

ಹೊಳೆಹೊನ್ನೂರು: ರೈತರ ಬೆಳೆ ಸಂಗ್ರಹಣೆ ಮಾಡಲು ಸರ್ಕಾರದಿಂದ ನಿರ್ಮಿಸುವ ಗೋದಾಮುಗಳ ಸದ್ಬಳಕೆ ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಹೇಳಿದರು.

ಪಟ್ಟಣದ ಭದ್ರಾವತಿ ರಸ್ತೆಯಲ್ಲಿರುವ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ₹ 1 ಕೋಟಿ ವೆಚ್ಚದಲ್ಲಿ ಸುಮಾರು ನಿರ್ಮಿಸಲು ಉದ್ದೇಶಿಸಿರುವ, ಒಂದು ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ಕಾಮಗಾರಿಗೆ ಈಚೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ರೈತರು ಬೆಳೆದ ಫಸಲು ಸಂಗ್ರಹಿಸಲು ಸಾಧ್ಯವಾಗದೆ ಕಟಾವು ಆದ ತಕ್ಷಣವೇ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ. ಆದರೆ, ಇಂತಹ ಗೋದಾಮುಗಳನ್ನು ನಿರ್ಮಿಸಿ ರೈತರ ಕೃಷಿ ಉತ್ಪನ್ನಗಳನ್ನು ಇಲ್ಲಿ ಸಂಗ್ರಹಿಸಿಡಬೇಕು. ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾದಾಗ ಮಾರಾಟ ಮಾಡಿ ಆರ್ಥಿಕವಾಗಿ ಸದೃಢರಾಗಬಹುದು ಎಂದು ಹೇಳಿದರು.

ಭದ್ರಾವತಿ ಎಪಿಎಂಸಿ ಅಧ್ಯಕ್ಷ ಡಿ.ಜಯರಾಮ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಮುಂದಿನ ದಿನಗಳಲ್ಲಿ ಇಲ್ಲಿನ ಕೃಷಿ ಉತ್ಪನ್ನ ಉಪ ಮಾರುಕಟ್ಟೆಯು ಸ್ವತಂತ್ರ ಮಾರುಕಟ್ಟೆಯಾಗುವ ಎಲ್ಲ ಲಕ್ಷಣ ಹೊಂದಿದೆ. ಇದಕ್ಕೆ ಸರ್ಕಾರವು ಹೆಚ್ಚಿನ ಅನುದಾನ ನೀಡಬೇಕು. ರೈತರು ಈ ಮಾರುಕಟ್ಟೆಯ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ಸದಸ್ಯ ಅರಹತೊಳಲು ಚಂದ್ರಣ್ಣ ಮಾತನಾಡಿ, ‘ರೈತರಿಂದ ಸಂಗ್ರಹಿಸಿದ ಹಣವನ್ನು ರೈತರ ಅಭಿವೃದ್ಧಿ ಕಾಮಗಾರಿಗೆ ವಿನಿಯೋಗ ಮಾಡಲು ಅನುವು ಮಾಡಿಕೊಡಬೇಕು. ಇದಕ್ಕೆ ಸರ‌ಕಾರದ ಮಟ್ಟದಲ್ಲಿ ಶಾಸಕರು ಚರ್ಚಿಸಬೇಕು. ಅಭಿವೃದ್ಧಿ ಕೆಲಸ ಮಾಡಲು ಎಪಿಎಂಸಿ ಸದಸ್ಯರಿಗೆ ಅತ್ಯಂತ ಕಡಿಮೆ ಅನುದಾನ ನೀಡಲಾಗುತ್ತಿದ್ದು, ಇದನ್ನು ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಡಿ.ಆರ್.ರೇಖಾ ಉಮೇಶ್, ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷ ಎಂ.ನಾಗೇಶ್, ಸದಸ್ಯ ಆರ್.ಉಮೇಶ್, ಯು.ಕೆ.ವೆಂಕಟೇಶ್, ಬಸವರಾಜ್, ನರಸಿಂಹ, ಎಪಿಎಂಸಿ ಸದಸ್ಯರಾದ ಎಸ್.ಆರ್.ಸತೀಶ್, ಎಚ್.ಆರ್.ತಿಮ್ಮಪ್ಪ, ಡಾ.ಎಚ್.ನಾಗೇಶ್  ಅವರೂ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಶಿವಮೊಗ್ಗ
ನಾಮಪತ್ರ ಸಲ್ಲಿಸಿದವರು; ಸಲ್ಲಿಸುವವರು

ಶಿವಮೊಗ್ಗ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಹಲವು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

22 Apr, 2018

ಶಿವಮೊಗ್ಗ
ಧರ್ಮದ ಹೆಸರಿನಲ್ಲಿ ಮತಯಾಚನೆ

ಬಿಜೆಪಿಯವರಿಗೆ ಹೇಳಿ ಕೊಳ್ಳಲು ಯಾವುದೇ ಅಭಿವೃದ್ಧಿ ಕಾರ್ಯಗಳು ಇಲ್ಲದಿರುವುದರಿಂದ ದೇವರು, ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ತೀ.ನಾ.ಶ್ರೀನಿವಾಸ್‌ ವ್ಯಂಗ್ಯವಾಡಿದರು. ...

22 Apr, 2018

ಶಿವಮೊಗ್ಗ
ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆ

ಕುಮಾರಸ್ವಾಮಿ ಸರ್ಕಾರದ ಅಭಿವೃದ್ಧಿ ಕಾರ್ಯಗಳೇ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರೀರಕ್ಷೆ ಎಂದು ಜೆಡಿಎಸ್‌ ಮುಖಂಡ ಹಾಗೂ ಮೇಯರ್‌ ನಾಗರಾಜ್‌ ಕಂಕಾರಿ ಅಭಿಪ್ರಾಯಪಟ್ಟರು.

22 Apr, 2018

ಶಿವಮೊಗ್ಗ
ಮಕ್ಕಳ ಮೇಲಿನ ಅತ್ಯಾಚಾರಕ್ಕೆ ವ್ಯಾಪಕ ಖಂಡನೆ

ದೇಶದಲ್ಲಿ ಬಾಲಕಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಖಂಡಿಸಿ ನಗರದಲ್ಲಿ ಶನಿವಾರ ನಮ್ಮ ಹಕ್ಕು ನಮ್ಮ ವೇದಿಕೆ, ದಲಿತ ಸಂಘರ್ಷ ಸಮಿತಿ, ಪ್ರೆಸ್‌ಟ್ರಸ್ಟ್‌ ಹಾಗೂ ವಿವಿಧ...

22 Apr, 2018
ಭದ್ರಾವತಿ: ‘ರಜಾ–ಮಜಾ’ ಬೇಸಿಗೆ ಶಿಬಿರದಲ್ಲಿ ಚಿಣ್ಣರ ಕಲರವ

ಭದ್ರಾವತಿ
ಭದ್ರಾವತಿ: ‘ರಜಾ–ಮಜಾ’ ಬೇಸಿಗೆ ಶಿಬಿರದಲ್ಲಿ ಚಿಣ್ಣರ ಕಲರವ

21 Apr, 2018