ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಪಕ್ಷ ಮೀನುಗಾರರ ಪರ

Last Updated 24 ಡಿಸೆಂಬರ್ 2017, 5:54 IST
ಅಕ್ಷರ ಗಾತ್ರ

ಉಡುಪಿ: ‘ಭದ್ರತೆ ಬೇಕು ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದರೆ ಮೀನುಗಾರರು ಸಂಘಟಿತರಾಗಬೇಕು’ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್‌ ಸಲಹೆ ನೀಡಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮತಿ ಉಡುಪಿಯಲ್ಲಿ ಶನಿವಾರ ಆಯೋಜಿಸಿದ್ದ ಮೀನುಗಾರರ ಕಾಂಗ್ರೆಸ್‌ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಒಂದು ವರ್ಗದ, ಸಮುದಾಯ, ವೃತ್ತಿಯ ಸಮಸ್ಯೆ ವಿರುದ್ಧ ಕೇವಲ ಒಬ್ಬ ವ್ಯಕ್ತಿ ಹೋರಾಡಿದರೆ ಪರಿಹಾರ ಸಿಗದು. ಒಳನಾಡ ಮತ್ತು ಸಮುದ್ರದ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡವರು ಸಂಘಟ ಗೊಳ್ಳುವುದರ ಮೂಲಕ ಸಮಸ್ಯೆ ಪರಿಹಾರ ಕಂಡುಕೊಳ್ಳ ಬಹುದು. ಈ ನಿಟ್ಟಿನಲ್ಲಿ ಮೀನುಗಾರರ ಪ್ರತಿಯೊಂದು ವಿಚಾರವನ್ನು ಮುಕ್ತವಾಗಿ ಚರ್ಚೆ ಮಾಡಿ ಪರಿಹಾರ ಕಂಡಹಿಡಿಯಬೇಕು ಎಂದರು.

ಕಾರವಳಿಯನ್ನು ಕಾಡುತ್ತಿರುವ ಮತ್ಸ ಕ್ಷಾಮಕ್ಕೆ ಒಂದು ರೀತಿಯಲ್ಲಿ ಮೀನುಗಾರರೇ ಕಾರಣ. ಮೀನುಗಳು ಮೊಟ್ಟೆ ಇಡುವ ಸಂದರ್ಭದಲ್ಲಿ ಮೀನುಗಾರಿಕೆ ನಿಷೇಧವಿದ್ದರೂ, ಮೀನುಗಾರಕೆ ಮಾಡುವುದು ಸಮಸ್ಯೆ ಮೂಲ ಕಾರಣ. ಮತ್ಸ್ಯ ಕ್ಷಾಮದಿಂದ ಹೊರಗೆ ಬರಲು ಮೀನುಗಾರರು ಮೊದಲು ಮೀನು ವೃದ್ಧಿ
ಮಾಡುವ ವಿಧಾನ ತಿಳಿದುಕೊಳ್ಳ ಬೇಕೆಂದರು.

ಕಾಂಗ್ರೆಸ್ ಪಕ್ಷ ಮೀನುಗಾರರ ಪರವಾಗಿದೆ. ಹಿಂದೆ ಮೀನುಗಾರರಿಗೆ ಡಿಸೇಲ್‌ಗೆ ಸಬ್ಸಿಡಿ ಸಿಗುತ್ತಿರಲಿಲ್ಲ. ಕಾಂಗ್ರೆಸ್ ಸತತ ಪ್ರಯತ್ನದಿಂದ ಇಂದು ಮೀನುಗಾರಿಕೆಯಲ್ಲಿ ತೊಡಗಿ ಸಿಕೊಂಡವರಿಗೆ ಸಬ್ಸಿಡಿ ಸಿಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಅಲ್ಪ ಸಂಖ್ಯಾತರ ನಿಗಮದ ಅಧ್ಯಕ್ಷ ಎಂ.ಎ ಗಫೂರ್, ರಾಜ್ಯ ಮೀನುಗಾರರ ಕಾಂಗ್ರೆಸ್ ಅಧ್ಯಕ್ಷ ಯು.ಆರ್. ಸಭಾಪತಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜರ್ನಾದನ್ ತೋನ್ಸೆ, ಜಿಲ್ಲಾ ಮೀನುಗಾರರ ಸಂಘಟನೆಯ ಅಧ್ಯಕ್ಷ ಮನೋಜ್ ಕರ್ಕೇರ, ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ ಅಮಿನ್ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾದ ಸತೀಶ್ ಅಮಿನ್‌, ಮದನ್ ಕುಮಾರ್, ಕೇಶವ್ ಕುಂದರ್, ಅಶೋಕ್ ಕೊಡವೂರು, ಗೀತಾ ವಾಗ್ಲೇ, ಗಂಗಾಧರ್ ಸುರ್ವಣ, ನರಸಿಂಹ ಮೂರ್ತಿ, ಸದಾಶಿವ ಕೋಟ್ಯಾನ್, ನವೀನ್ ಚಂದ್ರ ಶೆಟ್ಟಿ, ಗಣೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

ಕಾಂಗ್ರೆಸ್ ಶಕ್ತಿ ಹೆಚ್ಚಾಗುತ್ತಿದೆ

ಚುನಾವಣೆ ಇತಿಹಾಸದಲ್ಲಿ ಪ್ರಧಾನಿಯೊಬ್ಬರು ರಾಜ್ಯಗಳ ಪ್ರಚಾರ ಸಭೆ ಸಮಾರಂಭದಲ್ಲಿ ಭಾಗವಹಿಸಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಚುನಾವಣೆ ವೇಳೆ 10ಕ್ಕಿಂತ ಹೆಚ್ಚಿನ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು. ಆದರೆ ಗೆದ್ದುಕೊಂಡ ಕ್ಷೇತ್ರಗಳ ಸಂಖ್ಯೆ ಕಳೆದ ಬಾರಿಗಿಂತ ಕಡಿಮೆ ಇದೆ. ಕಾಂಗ್ರೆಸ್ ಈ ಬಾರಿ ಪಕ್ಷವನ್ನು ಸಂಘಟನೆಯ ಮೂಲಕ ಗುಜರಾತ್‌ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಅಧಿಕ ಕ್ಷೇತ್ರಗಳನ್ನು ಪಡೆದುಕೊಂಡಿದೆ ಎಂದು ರಾಜ್ಯ ಮೀನುಗಾರರ ಕಾಂಗ್ರೆಸ್ ಅಧ್ಯಕ್ಷ ಯು. ಆರ್. ಸಭಾಪತಿ ತಿಳಿಸಿದರು.

* * 

ಕೇಂದ್ರದಲ್ಲಿ ಮೀನುಗಾರಿಕೆ ವಿಶೇಷ ಸಚಿವಾಲಯ ನೀಡುವಂತೆ ಮೀನುಗಾರ  ಬಂಧುಗಳು ಒತ್ತಾಯಿಸುತ್ತಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡುತ್ತಿದೆ.
ಆಸ್ಕರ್ ಫರ್ನಾಂಡಿಸ್
ರಾಜ್ಯಸಭಾ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT