ಗೋಕಾಕ

ಎಲ್ಲ ಮನುಕುಲ ಒಂದೇ : ಶಾಸಕ ಜಾರಕಿಹೊಳಿ

‘ಕ್ಷಮೆ ಇರುವಲ್ಲಿ ಪ್ರೀತಿ-ವಿಶ್ವಾಸ ಮೊಳೆಯುತ್ತದೆ. ಎಲ್ಲ ಮನುಕುಲದವರು ಒಂದೇ ಎಂಬ ಉದಾತ್ತ ಮನೋಭಾವನೆ ಉಂಟಾದಾಗ ಮಾತ್ರ ಇಡೀ ಪ್ರಪಂಚವು ಸುಂದರವಾಗಿ ಕಾಣುತ್ತದೆ’

ಗೋಕಾಕ: ‘ಕ್ಷಮೆ ಇರುವಲ್ಲಿ ಪ್ರೀತಿ-ವಿಶ್ವಾಸ ಮೊಳೆಯುತ್ತದೆ. ಎಲ್ಲ ಮನುಕುಲದವರು ಒಂದೇ ಎಂಬ ಉದಾತ್ತ ಮನೋಭಾವನೆ ಉಂಟಾದಾಗ ಮಾತ್ರ ಇಡೀ ಪ್ರಪಂಚವು ಸುಂದರವಾಗಿ ಕಾಣುತ್ತದೆ’ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಭಾನುವಾರ ಇಲ್ಲಿಯ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ತಾಲ್ಲೂಕು ಕ್ರೈಸ್ತ ಸಮುದಾಯ ಟ್ರಸ್ಟ್ ಏರ್ಪಡಿಸಿದ್ದ ಕ್ರಿಸಮಸ್ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಪ್ರಪಂಚವು ಸುಂದರವಾಗಿ ಕಂಡಾಗ ಮಾತ್ರ ಪ್ರತಿ ಮನುಕುಲವು ದೈವ ಸ್ವರೂಪಿಯಾಗುತ್ತದೆ ಎಂದು ಹೇಳಿದರು.

ಏಸು ಕ್ರಿಸ್ತನ ಶಿಷ್ಯರ ಒಗ್ಗಟ್ಟಿನ ಕೆಲಸ, ವ್ಯವಸ್ಥಿತ ರೂಪುರೇಷೆ ಕ್ರೈಸ್ತ ತತ್ವಗಳ ಬಗ್ಗೆ ಬದ್ಧತೆ ಮುಂತಾದ ಕಾರಣಗಳಿಂದ ಕ್ರೈಸ್ತ ಧರ್ಮವು ಪ್ರಪಂಚದಾದ್ಯಂತ ಪಸರಿಸಿದೆ. ನಿನ್ನ ನೆರೆ-ಹೊರೆಯವರನ್ನು ಪ್ರೀತಿಸು. ದೇವರನ್ನು ಪೂರ್ಣ ಮನಸ್ಸಿನಿಂದ ಆತ್ಮದಿಂದ ಹಾಗೂ ಸತ್ಯದಿಂದ ಆರಾಧಿಸುವ ಏಸು ಕ್ರಿಸ್ತನ ತತ್ವಾದರ್ಶಗಳು ಪ್ರಸ್ತುತವಾಗಿವೆ ಎಂದರು.

ಪ್ರಪಂಚವು ಜಾತಿ-ಮತ-ಪಂಥಗಳ ಬೇಧವಿಲ್ಲದೆ ಆಚರಿಸುವ ಕ್ರಿಸಮಸ್ ಹಬ್ಬವಾಗಿದೆ. ಶಾಂತಿ, ಪ್ರೀತಿ ಹಾಗೂ ದೀನತೆಯ ಸಂದೇಶವು ಪ್ರತಿ ದಿನವು ಹಬ್ಬವಾಗಿ ಮಾರ್ಪಡಾಗಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಕ್ರಿಸಮಸ್ ಹಬ್ಬದ ಪ್ರಯುಕ್ತ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕೇಕ್ ಕತ್ತರಿಸಿ ಸಮಾಜ ಬಾಂಧವರಿಗೆ ಶುಭ ಕೋರಿದರು.

ಟ್ರಸ್ಟ್ ಗೌರವಾಧ್ಯಕ್ಷ ಏಬಿನೇಜರ್ ಕರಬನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಪ್ರವೀಣ ದಾವಣೆ, ಉಪಾಧ್ಯಕ್ಷ ಸತೀಶ ಹರಿಜನ, ಖಜಾಂಚಿ ಆನಂದ ಬೆಟಗೇರಿ, ಕಾರ್ಯದರ್ಶಿ ಸಂಜೀವ ಚಿಂಚಲಿ, ಸದಸ್ಯರಾದ ಪ್ರಕಾಶ ತಳವಾರ, ಲಕ್ಷ್ಮಣ ಸತ್ತಿಗೇರಿ, ಸಂಜಯ ಸಂಗಮನವರ, ಸಂತೋಷ ದಾವಣೆ, ಜಗದೀಶ ಮಂಡಿ, ಭೀಮಪ್ಪ ಹಣಮಪ್ಪಗೋಳ, ಹನೋಕ ಕಿನ್ನೂರಿ, ಬಾಬು ಹರಿಜನ, ಶಿವರುದ್ರ ಘೋಡಗೇರಿ, ಎಸ್ತೇರ ದಾರಾ, ಡಿಎಸ್ಎಸ್ ತಾಲ್ಲೂಕು ಸಂಚಾಲಕ ಲಕ್ಷ್ಮಣ ತೆಳಗಡೆ ಮತ್ತಿತರರು ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಬೆಳಗಾವಿ
ನನ್ನ ಮತ ಖಾತ್ರಿ- ಯುವಜನರಿಂದ ಸಹಿ

ಭಯವಿಲ್ಲದೇ, ಧರ್ಮ, ಜಾತಿ, ಸಮುದಾಯ, ಭಾಷೆ ಅಥವಾ ಯಾವುದೇ ಪ್ರಭಾವಕ್ಕೆ ಒಳಗಾಗದೇ ಮುಕ್ತವಾಗಿ ನಮ್ಮ ಮತ ಚಲಾಯಿಸುತ್ತೇವೆ.

25 Apr, 2018

ಬೆಳಗಾವಿ
ರಾಜ್‌ಕುಮಾರ್‌ ಜಾಗತಿಕ ಶ್ರೇಷ್ಠ ಕಲಾವಿದ

‘ವರನಟ ರಾಜ್‌ಕುಮಾರ್‌ ಅವರು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲದ ಜಾಗತಿಕ ಮಟ್ಟದ ಶ್ರೇಷ್ಠ ಕಲಾವಿದರಾಗಿದ್ದಾರೆ’ ಎಂದು ಹಿರಿಯ ಸಾಹಿತಿ ಬಸವರಾಜ ಜಗಜಂಪಿ ಹೇಳಿದರು.

25 Apr, 2018
ಕಡೋಲಿ: ಲಕ್ಷ್ಮೀದೇವಿ ಜಾತ್ರೆ ಆರಂಭ

ಬೆಳಗಾವಿ
ಕಡೋಲಿ: ಲಕ್ಷ್ಮೀದೇವಿ ಜಾತ್ರೆ ಆರಂಭ

25 Apr, 2018
ಕಿತ್ತೂರು: ಜೆಡಿಎಸ್‌ ಅಭ್ಯರ್ಥಿ ದಿಢೀರ್ ಬದಲು!

ಬೆಳಗಾವಿ
ಕಿತ್ತೂರು: ಜೆಡಿಎಸ್‌ ಅಭ್ಯರ್ಥಿ ದಿಢೀರ್ ಬದಲು!

25 Apr, 2018
‘ಬಂಡಾಯ ಅಭ್ಯರ್ಥಿಗಳಿಂದ ಏನೂ ಎಫೆಕ್ಟ್‌ ಆಗಲ್ಲ...’

ಬೆಳಗಾವಿ
‘ಬಂಡಾಯ ಅಭ್ಯರ್ಥಿಗಳಿಂದ ಏನೂ ಎಫೆಕ್ಟ್‌ ಆಗಲ್ಲ...’

24 Apr, 2018