ಮನಸಿನ ಮಾತು

ಶುಭಾ ಕನಸಿನ ಹುಡುಗನ ಐದು ಗುಣಗಳು!

‘ಶ್ರೀಮಂತ ಆಗಿರುವುದು ಬೇಡವಾ?’ ಎಂದರೆ ಯಾವುದೋ ಅವಗುಣದ ಹೆಸರು ಕೇಳಿದವರಂತೆ ಮುಖ ಕಿವುಚಿ ಅಡ್ಡಡ್ಡ ತಲೆ ಅಲ್ಲಾಡಿಸಿದರು. ‘ಶ್ರೀಮಂತ ಏನೂ ಬೇಕಾಗಿಲ್ಲ. ಮಧ್ಯಮ ವರ್ಗದ ಹುಡುಗ. ಆದ್ರೆ ಜೀವನ ನಿರ್ವಹಣೆಗೆ ತೊಂದರೆ ಆಗದಷ್ಟು ಹಣ ಇದ್ರೆ ಸಾಕು’ ಎಂಬುದು ಅವರ ಅಂಬೋಣ.

ಶುಭಾ ಪೂಂಜಾ

ಅದು ಹೃದಯಶಿವ ನಿರ್ದೇಶನದ ‘ಜಯಮಹಲ್‌’ ಸಿನಿಮಾ ಧ್ವನಿಸುರಳಿ ಬಿಡುಗಡೆ ಸಂದರ್ಭ. ಕಾರ್ಯಕ್ರಮ ಆರಂಭವಾಗುವ ತುಸು ಮೊದಲು ಪತ್ರಕರ್ತರ ಜತೆ ನಟಿ ಶುಭಾ ಪೂಂಜಾ ಮಾತಿಗೆ ಕುಳಿತಿದ್ದರು.

‘ಸದ್ಯ ನಿಮ್ಮ ಮದ್ವೆ ಸುದ್ದಿ ಏನೂ ಇಲ್ವಾ?’–ಮೊದಲಿಗೇ ಎದುರಾದ ಈ ಪ್ರಶ್ನೆಗೆ ಪ್ರಶ್ನೆಗೆ ನಟಿ ಶುಭಾ ಪೂಂಜಾ ಸ್ವಲ್ಪವೂ ವಿಚಲಿತರಾಗಲಿಲ್ಲ. ಎಂದಿನ ಶೈಲಿಯಲ್ಲಿ ದೊಡ್ಡದಾಗಿ ನಕ್ಕು ‘ನಾನು ಮೆಚ್ಚುವ ಹುಡುಗ ಇನ್ನೂ ಸಿಕ್ಕಿಲ್ಲ’ ಎಂದು ಉತ್ತರಿಸಿದರು.  ‘ಹಾಗಾದರೆ ನೀವು ಮೆಚ್ಚುವ ಹುಡುಗ ಹೇಗಿರಬೇಕು?’ ಎಂಬ ಪ್ರಶ್ನೆ ಮರುಕ್ಷಣವೇ ಎರಗಿತು. ಶುಭಾ ಮುಖದಲ್ಲಿ ಮತ್ತದೇ ನಗು. ಕ್ಷಣ ಕಾಲ ಯೋಚಿಸಿ ಅಲ್ಲಿಯೇ ಇದ್ದ ಟಿಶ್ಯೂ ಪೇಪರ್‌ ಮತ್ತೆ ಪೆನ್‌ ಎತ್ತಿಕೊಂಡರು. ತನ್ನ ಬಾಳಸಂಗಾತಿಯಾಗುವ ಹುಡುಗನಲ್ಲಿರಬೇಕಾದ ಗುಣಗಳನ್ನು ಒಂದೊಂದಾಗಿ ಪಟ್ಟಿ ಮಾಡುತ್ತಲೇ ಹೋದರು.

ಶುಭಾ ಮನಸಲ್ಲಿ ಅನುರಾಗದ ಅಲೆ ಎಬ್ಬಿಸುವ ಹುಡುಗನಲ್ಲಿ ಇರಬೇಕಾದ ಗುಣಗಳ ಪಟ್ಟಿ ಹೀಗಿದೆ ನೋಡಿ.

1) ಪ್ರಾಣಿಗಳನ್ನು ಪ್ರೀತಿಸಬೇಕು.
2) ಹಳ್ಳಿ ಜೀವನಕ್ಕೆ ಸಿದ್ಧನಾಗಿರಬೇಕು.
3) ಮಹತ್ವಾಕಾಂಕ್ಷೆಗಳು ಇರಬಾರದು.
4) ಕಪ್ಪು ಬಣ್ಣ ಇಷ್ಟ.
5) ಒಳ್ಳೆ ಮನುಷ್ಯನಾಗಿರಬೇಕು.

ಪೇಪರ್‌ ಮುಗಿದುಹೋಗಿದ್ದರಿಂದ ಪಟ್ಟಿ ತಾತ್ಕಾಲಿಕವಾಗಿ ಸ್ಥಗಿತವಾದರೂ ಮೌಖಿಕವಾಗಿ ಅವರ ನಿರೀಕ್ಷೆಯ ಲೆಕ್ಕಾಚಾರ ಏರುತ್ತಲೇ ಇತ್ತು. ‘ಶ್ರೀಮಂತ ಆಗಿರುವುದು ಬೇಡವಾ?’ ಎಂದರೆ ಯಾವುದೋ ಅವಗುಣದ ಹೆಸರು ಕೇಳಿದವರಂತೆ ಮುಖ ಕಿವುಚಿ ಅಡ್ಡಡ್ಡ ತಲೆ ಅಲ್ಲಾಡಿಸಿದರು. ‘ಶ್ರೀಮಂತ ಏನೂ ಬೇಕಾಗಿಲ್ಲ. ಮಧ್ಯಮ ವರ್ಗದ ಹುಡುಗ. ಆದ್ರೆ ಜೀವನ ನಿರ್ವಹಣೆಗೆ ತೊಂದರೆ ಆಗದಷ್ಟು ಹಣ ಇದ್ರೆ ಸಾಕು’ ಎಂಬುದು ಅವರ ಅಂಬೋಣ.

‘ಜೀವನ ನಿರ್ವಹಣೆಗೆ ಸಾಕಾಗುವಷ್ಟು ಅಂದ್ರೆ ಎಷ್ಟು?’ ಕೆಣಕುವ ಮತ್ತೊಂದು ಪ್ರಶ್ನೆ ಅವರೆದುರು ತೂರಿ ಬಂದಿತ್ತು. ‘ನಂಗೆ ಸೀರೆ ಅಂದ್ರೆ ತುಂಬ ಇಷ್ಟ. ನಾನು ಇಷ್ಟಪಟ್ಟ ಸೀರೆ ಕೊಡಿಸುವಷ್ಟು... ನಮ್ಮನೆಯಲ್ಲಿನ  ಎಮ್ಮೆ, ಹಸು, ಇತರ ಪ್ರಾಣಿಗಳಿಗೆ ಹೊಟ್ಟೆಗೆ ಹಾಕುವಷ್ಟು... ಮತ್ತೆ...’ ಹೀಗೆ ಜೀನ್ಸ್‌ ಮೇಲಿನ ಪಿಂಕ್‌ ಶಾರ್ಟ್‌ ಟಾಪ್‌ ಅನ್ನು ಕೊಂಚ ಎಳೆದುಕೊಳ್ಳುತ್ತಾ ಪಟ್ಟಿಯನ್ನು ಬೆಳೆಸುತ್ತಲೇ ಹೋದರು. ‘ಹಾ... ರೈತ ಆಗಿದ್ದರೆ ಪ್ರಶಸ್ತ್ಯ ಹೆಚ್ಚು’ ಎಂದು ಹಳೆಯ ಪಟ್ಟಿಗೆ ಇನ್ನೊಂದು ಬೇಡಿಕೆ ಸೇರಿಸಿದರು.

‘ಹಾಗಾದ್ರೆ ಯಾಕೆ ನೀವಿನ್ನೂ ಮದುವೆಯಾಗಲಿಲ್ಲ?’ ಎಂಬ ಪ್ರಶ್ನೆಗೆ ಮತ್ತೊಮ್ಮೆ ಜೋರಾಗಿ ನಕ್ಕು ‘ನಾನು ಮೇಲೆ ಹೇಳಿದ ಎಲ್ಲಾ ಗುಣಗಳು ಇರುವ ಹುಡುಗ ಸಿಗಲಿಲ್ಲ. ಅದ್ಕೆ ಇನ್ನೂ ಮದುವೆ ಆಗಲಿಲ್ಲ’ ಎಂದು ಮಾತಿಗೆ ಪೂರ್ಣವಿರಾಮ ಕೊಟ್ಟರು.

Comments
ಈ ವಿಭಾಗದಿಂದ ಇನ್ನಷ್ಟು
ಅಣ್ಣಾವ್ರ ಹುಟ್ಟುಹಬ್ಬದಂದು ಶಿವಣ್ಣನ ’ರುಸ್ತುಂ’ ಸಿನಿಮಾ ಫಸ್ಟ್‌ಲುಕ್‌

ಬೆಂಗಳೂರು
ಅಣ್ಣಾವ್ರ ಹುಟ್ಟುಹಬ್ಬದಂದು ಶಿವಣ್ಣನ ’ರುಸ್ತುಂ’ ಸಿನಿಮಾ ಫಸ್ಟ್‌ಲುಕ್‌

24 Apr, 2018
‘ಚಿನ್ನದ ಗೊಂಬೆ’ಗೆ ಐವತ್ತು ದಿನ!

ಪತ್ರಿಕಾಗೋಷ್ಠಿ
‘ಚಿನ್ನದ ಗೊಂಬೆ’ಗೆ ಐವತ್ತು ದಿನ!

23 Apr, 2018
‘ಪುರುಷೋತ್ತಮ ಪರ್ವ’ ಧ್ವನಿಮುದ್ರಿಕೆ ಬಿಡುಗಡೆ

ನಾಟಕ
‘ಪುರುಷೋತ್ತಮ ಪರ್ವ’ ಧ್ವನಿಮುದ್ರಿಕೆ ಬಿಡುಗಡೆ

23 Apr, 2018
ಪುಸ್ತಕಗಳನ್ನು ಖರೀದಿಸಿಯೇ ಓದಬೇಕಂತೆ!

ಕಿರುಚಿತ್ರ
ಪುಸ್ತಕಗಳನ್ನು ಖರೀದಿಸಿಯೇ ಓದಬೇಕಂತೆ!

23 Apr, 2018
₹100 ಕೋಟಿ ಗಳಿಸಿದ ‘ಭರತ್ ಅನೆ ನೇನು’

ಉತ್ತಮ ಪ್ರದರ್ಶನ
₹100 ಕೋಟಿ ಗಳಿಸಿದ ‘ಭರತ್ ಅನೆ ನೇನು’

23 Apr, 2018