ಬಾಗಲಕೋಟೆ

‘ಉ.ಕ.ಕ್ಕೆ ಪ್ರತ್ಯೇಕ ರೈತ ಸಂಘ ಸ್ಥಾಪನೆ’

‘ಸರ್ಕಾರ ಮಹದಾಯಿ ಸಮಸ್ಯೆ ಯನ್ನು ಶೀಘ್ರ ಬಗೆಹರಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ರೈತ ಮಹಿಳೆಯರಿಗೆ ಹೆಚ್ಚಿನ ಸವಲತ್ತು ನೀಡಬೇಕು

ಬಾಗಲಕೋಟೆ: ‘ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಹೋರಾಟ ನಡೆಸಬೇಕಾದ ರಾಜ್ಯ ರೈತ ಸಂಘದ ಮುಖಂಡರು ಉತ್ತರ ಕರ್ನಾಟಕದ ಅಭಿವೃದ್ಧಿಯ ವಿಷಯದಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಉತ್ತರ ಕರ್ನಾಟಕ ರೈತ ಸಂಘ ಸ್ಥಾಪಿಸಲಾಗಿದೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಕರಿಗಾರ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕ ರಾಜ್ಯ ಸಂಘದೊಂದಿಗೆ ಸುಮಾರು 40 ವರ್ಷಗಳಿಂದ ಹೋರಾಟ ಮಾಡುತ್ತಾ ಬರಲಾಗಿತ್ತು. ದಕ್ಷಿಣ ಕರ್ನಾಟಕ ಹಾಗೂ ಕಾವೇರಿ ವಿಷಯಕ್ಕೆ ನೀಡುವ ಪ್ರಾಮುಖ್ಯತೆಯನ್ನು ಉತ್ತರ ಕರ್ನಾಟದ ಅಭಿವೃದ್ಧಿಗೆ ನೀಡುತ್ತಿಲ್ಲ’ ಎಂದರು.

‘ಉತ್ತರ ಕರ್ನಾಟಕ ರೈತ ಸಂಘದ ಮೂಲಕ ಈ ಭಾಗದ ರೈತರು ಸ್ವಾಭಿಮಾನಿಗಳಾಗಿ ಒಕ್ಕೂಟತೆಯನ್ನು ತೋರಿಸಬೇಕಿದೆ. ಎಲ್ಲರೂ ಒಂದು ಎಂಬ ಭಾವನೆ ಮೂಡಿಸಬೇಕಿದೆ. ಸರ್ಕಾರ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್ ಮಂಡಿಸಬೇಕು. ಈ ಭಾಗದ ಎಲ್ಲ ಸಮಸ್ಯೆಗಳಿಗೆ ಶೀಘ್ರ ಪರಿಹಾರ ರೂಪಿಸಬೇಕು’ ಎಂದು ಆಗ್ರಹಿಸಿದರು.

‘ಸರ್ಕಾರ ಮಹದಾಯಿ ಸಮಸ್ಯೆ ಯನ್ನು ಶೀಘ್ರ ಬಗೆಹರಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ರೈತ ಮಹಿಳೆಯರಿಗೆ ಹೆಚ್ಚಿನ ಸವಲತ್ತು ನೀಡಬೇಕು. ಸರ್ಕಾರದ ನಿರ್ಲಕ್ಷ್ಯ ಭಾವನೆ ಇದೇ ರೀತಿ ಮುಂದು ವರಿದರೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಸಂಘದ ಗೌರವಾಧ್ಯಕ್ಷ ಎಲ್.ಎಸ್.ಗೌಡರ, ಉಪಾಧ್ಯಕ್ಷ ಸೋಮಶೇಖರ ಬರಗೊಂಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪಗೌಡ ದೇಸಾಯಿ, ಎಸ್.ಎಸ್.ಸರಗಣಾಚಾರಿ, ಹನುಮಂತ ಸೊನ್ನದ ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
‘ಬಸವಣ್ಣನನ್ನು ಧರ್ಮ ಗುರು ಎಂದು ಒಪ್ಪಿಕೊಳ್ಳುತ್ತಿಲ್ಲ'

ಕೂಡಲಸಂಗಮ
‘ಬಸವಣ್ಣನನ್ನು ಧರ್ಮ ಗುರು ಎಂದು ಒಪ್ಪಿಕೊಳ್ಳುತ್ತಿಲ್ಲ'

19 Jan, 2018

ಬಾಗಲಕೋಟೆ
ಫುಟ್‌ಫಾತ್ ಮೇಲೆ ಮಲಗಿದ ನೂರಾರು ಅಭ್ಯರ್ಥಿಗಳು!

ಜಿಲ್ಲಾಡಳಿತ ಅಭ್ಯರ್ಥಿಗಳಿಗಾಗಿ ನಗರದ ಬಾಬು ಜಗಜೀವನರಾಂ ಭವನ, ನಗರಸಭೆ ಸಮುದಾಯ ಭವನ, ಶಾದಿಮಹಲ್, ಡಾ. ಬಿ.ಆರ್.ಅಂಬೇಡ್ಕರ್ ಭವನ ಸೇರದಂತೆ ಹಲವೆಡೆ ವ್ಯವಸ್ಥೆ ಕಲ್ಪಿಸಿದೆ.

19 Jan, 2018

ಬಾಗಲಕೋಟೆ
ಎನ್‌ಪಿಎಸ್‌ ಯೋಜನೆ ರದ್ದುಪಡಿಸಲು ಒತ್ತಾಯ

ತ್ರಿಪುರಾ, ಪಶ್ಚಿಮಬಂಗಾಲ ರಾಜ್ಯದಲ್ಲಿ ಎನ್‌ಪಿಎಸ್‌ ಯೋಜನೆ ಕೈಬಿಟ್ಟಿದ್ದಾರೆ. ತೆಲಂಗಾಣ ರಾಜ್ಯದಲ್ಲಿಯೂ ಈ ಯೋಜನೆಯನ್ನು ಕೈಬಿಡುವವರಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಈ ಯೋಜನೆಯನ್ನು ಕೈಬಿಟ್ಟು ಹಳೆ ಪಿಂಚಣಿ...

19 Jan, 2018

ಹುನಗುಂದ
‘ಭೋವಿ ಸಮಾಜದ ಅಭಿವೃದ್ಧಿಗೆ ಬದ್ಧ’

‘ಭೋವಿ ಸಮಾಜಕ್ಕೆ ಅಗತ್ಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ಸಮುದಾಯದ ಸದಸ್ಯರಿಗೆ ಅಗತ್ಯ ಸೌಲಭ್ಯ ನೀಡಿದೆ’

19 Jan, 2018
ಕಾಳಿಕಾಂಬೆ ರಥ ಎಳೆದ ಮಹಿಳೆಯರು

ಬಾಗಲಕೋಟೆ
ಕಾಳಿಕಾಂಬೆ ರಥ ಎಳೆದ ಮಹಿಳೆಯರು

18 Jan, 2018