ಕೋಲಾರ

ರಾಜಕಾರಣದಲ್ಲಿ ಸಂಸ್ಕಾರ ಮಾಯ

ರಾಜಕಾರಣಕ್ಕೆ ಬರಲು ಪ್ರೇರಣೆ ಹಣ ಗಳಿಸುವುದಲ್ಲ. ನಮಗೆ ಹಿರಿಯರಾಗಿದ್ದವರು ವಿಶಾಲ ಹೃದಯವಂತರು. ಜನರ ಕೆಲಸ ಮಾಡುವುದು ಹಾಗೂ ಅವರೊಂದಿಗೆ ಹೇಗಿರಬೇಕು ಎಂಬ ಸಂಸ್ಕಾರ ತಿಳಿಸಿಕೊಟ್ಟಿದ್ದಾರೆ

ಕೋಲಾರ: ‘ರಾಜಕಾರಣ ಎಂದರೆ ಥಳಕು ಎಂಬಂತಾಗಿದೆ. ಪಂಚಾಯಿತಿಯಿಂದ ಲೋಕಸಭೆವರೆಗೂ ರಾಜಕಾರಣದಲ್ಲಿ ಸಂಸ್ಕಾರ ಮಾಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದರು. ತಾಲ್ಲೂಕಿನ ಅಣ್ಣಿಹಳ್ಳಿಯಲ್ಲಿ ಜಿಲ್ಲಾ ಕೇದ್ರ ಸಹಕಾರ (ಡಿಸಿಸಿ) ಬ್ಯಾಂಕಿನಿಂದ ರೈತರಿಗೆ ಸೋಮವಾರ ಸಾಲ ವಿತರಿಸಿ ಮಾತನಾಡಿದರು‌.

ರಾಜಕಾರಣಕ್ಕೆ ಬರಲು ಪ್ರೇರಣೆ ಹಣ ಗಳಿಸುವುದಲ್ಲ. ನಮಗೆ ಹಿರಿಯರಾಗಿದ್ದವರು ವಿಶಾಲ ಹೃದಯವಂತರು. ಜನರ ಕೆಲಸ ಮಾಡುವುದು ಹಾಗೂ ಅವರೊಂದಿಗೆ ಹೇಗಿರಬೇಕು ಎಂಬ ಸಂಸ್ಕಾರ ತಿಳಿಸಿಕೊಟ್ಟಿದ್ದಾರೆ ಎಂದರು.

ಅನ್ನ ನೀಡುವ ರೈತ ತನ್ನ ಮನೆಗೆ ಬೇಕಾದಷ್ಟು ಧಾನ್ಯ ಬೆಳೆದು ಸುಮ್ಮನಾದರೆ ನಗರದಲ್ಲಿ ಇರುವವರ ಗತಿಯೇನು ಎಂಬ ಪ್ರಶ್ನೆ ಹಾಕಿಕೊಳ್ಳಿ. ಯೋಧ ಹಾಗೂ ರೈತ ಇಬ್ಬರು ದುಡಿವ ವರ್ಗದವರು. ಇವರು ಗೌರವದಿಂದ ಬದುಕುವ ವಾತಾವರಣದ ಕುರಿತು ಇದುವರೆಗೂ ಯಾಕೆ ಯಾರು ಸರಿಯಾಗಿ ಯೋಚಿಸುತ್ತಿಲ್ಲ ಎಂದು ಪ್ರಶ್ನಿಸಿದರು.

‘ತಾಲ್ಲೂಕಿನ ವೀರಾಪುರ ಸಮೀಪ ರಕ್ಷಣಾ ಇಲಾಖೆ ಭೂಸ್ವಾಧೀನ ಪಡಿಸಿಕೊಂಡಿರುವ ರೈತರಿಗೆ ಪರಿಹಾರ ಕಲ್ಪಿಸಲು ₹ 25 ಕೋಟಿ ಮಂಜೂರು ಆಗಲಿದ್ದು, ಮಧ್ಯವರ್ತಿಗಳ ಪಾಲಾಗದಂತೆ ಎಚ್ಚರ ವಹಿಸಬೇಕಾಗಿದೆ’ ಎಂದು ಮುಖಂಡ ಕೆ.ಶ್ರೀನಿವಾಸಗೌಡ ತಿಳಿಸಿದರು.

ರೈತರಿಗೆ ಪರಿಹಾರ ಹಣ ಸಿಗುವಲ್ಲಿ ಆಗಿದ್ದ ಅನ್ಯಾಯದ ವಿರುದ್ಧ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೋರಾಟ ಮಾಡಲಾಗಿದೆ. ಇದರಿಂದಾಗಿ ಪರಿಹಾರದ ಹಣ ಬರುತ್ತಿದ್ದು, ಮಧ್ಯವರ್ತಿಗಳ ಪಾಲಾಗಬಾರದು ಎಂದರು.

ರೈತರ ಹಿತ ಕಾಯುತ್ತಿರುವ ಡಿಸಿಸಿ ಬ್ಯಾಂಕಿನಲ್ಲೇ ಈ ಹಣ ಠೇವಣಿ ಇಡಲು ಕೂಡಲೇ ಸಂಬಂಧಿಸಿದ ರೈತರ ಸಭೆ ನಡೆಸಿ ಕ್ರಮ ವಹಿಸುವುದಾಗಿ ತಿಳಿಸಿದರು. ಕೋಚಿಮುಲ್ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ, ವಕೀಲ ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್, ಎಸ್‍ಎಫ್‌ಸಿಎಸ್ ಉಪಾಧ್ಯಕ್ಷ ನಾಗರಾಜ್ ಹಾಜರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಕೋಲಾರ
ಸಮಸ್ಯೆ ಬಗೆಹರಿಸುವ ಶಕ್ತಿ ರೈತರಲ್ಲಿದೆ

‘ದೇಶದಲ್ಲಿನ ಆಹಾರ ಸಮಸ್ಯೆ ಬಗೆಹರಿಸುವ ಶಕ್ತಿ ರೈತರಿಗೆ ಮಾತ್ರ ಇದೆ’ ಎಂದು ಕೆನರಾ ಬ್ಯಾಂಕ್ ಪ್ರಧಾನ ಕಚೇರಿಯ ಮಹಾ ಪ್ರಬಂಧಕ ಅನಿಲ್ ಕುಮಾರ್ ಅಭಿಪ್ರಾಯಪಟ್ಟರು. ...

23 Apr, 2018

ಕೋಲಾರ
ಪರಿಸರ ಕಾಳಜಿಗೆ ಶಿಬಿರ ಸಹಕಾರಿ

‘ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಲು ಶಿಬಿರಗಳು ಸಹಕಾರಿಯಾಗಿವೆ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಸಂಸ್ಥೆಯ ಜಿಲ್ಲಾ ಆಯುಕ್ತ ಕೆ.ಆರ್.ಸುರೇಶ್ ತಿಳಿಸಿದರು.

23 Apr, 2018

ಕೋಲಾರ
ಶ್ರೀನಿವಾಸಗೌಡರ ಸ್ಪರ್ಧೆಗೆ ಹಸಿರು ನಿಶಾನೆ

ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಆಯ್ಕೆ ಸಂಬಂಧ ನಡೆಯುತ್ತಿದ್ದ ಹಗ್ಗ ಜಗ್ಗಾಟ ಅಂತ್ಯಗೊಂಡಿದ್ದು, ವರಿಷ್ಠರು ಮಾಜಿ ಸಚಿವ ಕೆ.ಶ್ರೀನಿವಾಸಗೌಡರಿಗೆ ಅಸ್ತು ಎನ್ನುವ ಮೂಲಕ ಎಲ್ಲಾ...

23 Apr, 2018

ಕೆಜಿಎಫ್‌
ಮತದಾನದ ಮಾಹಿತಿ ತಿಳಿಯಲು ಸಲಹೆ

ಮತದಾನ ನಡೆಯುವ ಮೊದಲೇ ಮತಗಟ್ಟೆ ಅಧಿಕಾರಿಗಳು ಮತದಾನಕ್ಕೆ ಸಂಬಂಧಿಸಿದ ಎಲ್ಲ ಮಾರ್ಗಸೂಚಿಗಳನ್ನು ಮನನ ಮಾಡಿಕೊಂಡಿರಬೇಕು ಎಂದು ಪ್ರೊಬೇಷನರಿ ಉಪವಿಭಾಗಾಧಿಕಾರಿ ವಿದ್ಯಾಶ್ರೀ ಹೇಳಿದರು.

23 Apr, 2018

ಶ್ರೀನಿವಾಸಪುರ
ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತಿಹಿಡಿಯಲು ಮತ ಹಾಕಿ

ಮತದಾರರು ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತಿಹಿಡಿಯಬೇಕು. ಮತದಾನ ಪ್ರಜೆಯ ಹಕ್ಕು. ಎಲ್ಲರೂ ತಪ್ಪದೆ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಹೇಳಿದರು. ...

22 Apr, 2018