ಪ್ರತಿ ತಿಂಗಳು ₹ 4ರಂತೆ ಹೆಚ್ಚಿಸಲು ನೀಡಿದ್ದ ಆದೇಶ ವಾಪಸ್

ಎಲ್‌ಪಿಜಿ ದರ ಏರಿಕೆ ಆದೇಶ ಹಿಂಪಡೆದ ಕೇಂದ್ರ ಸರ್ಕಾರ

ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ದರವನ್ನು ಪ್ರತಿ ತಿಂಗಳು ₹ 4ರಂತೆ ಹೆಚ್ಚಿಸಲು ತೈಲ ಕಂಪೆನಿಗಳಿಗೆ ನೀಡಿದ್ದ ಸೂಚನೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಬಡವರಿಗೆ ಉಚಿತವಾಗಿ ಎಲ್‌ಪಿಜಿ ಸಂಪರ್ಕ ಒದಗಿಸುವ ‘ಉಜ್ವಲ’ ಯೋಜನೆಯ ಆಶಯಗಳಿಗೆ ಈ ನೀತಿ ವಿರುದ್ಧವಾಗಿದೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್ ದರವನ್ನು ಪ್ರತಿ ತಿಂಗಳು ₹ 4ರಂತೆ ಹೆಚ್ಚಿಸಲು ತೈಲ ಕಂಪೆನಿಗಳಿಗೆ ನೀಡಿದ್ದ ಸೂಚನೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.

ಬಡವರಿಗೆ ಉಚಿತವಾಗಿ ಎಲ್‌ಪಿಜಿ ಸಂಪರ್ಕ ಒದಗಿಸುವ ‘ಉಜ್ವಲ’ ಯೋಜನೆಯ ಆಶಯಗಳಿಗೆ ಈ ನೀತಿ ವಿರುದ್ಧವಾಗಿದೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ. ಆದರೆ, ತೆರಿಗೆಯ ಕಾರಣಕ್ಕೆ ಸಬ್ಸಿಡಿ ಸಿಲಿಂಡರ್‌ಗಳ ಬೆಲೆ ಅಕ್ಟೋಬರ್ ನಂತರವೂ ಏರಿಕೆ ಆಗಿದೆ’ ಎಂದು ಉನ್ನತ ಮೂಲಗಳು ತಿಳಿಸಿವೆ.

2016ರ ಜೂನ್‌ನಿಂದ ಗೃಹ ಬಳಕೆ ಸಿಲಿಂಡ್ ಬೆಲೆಯನ್ನು ಪ್ರತಿ ತಿಂಗಳು ಹೆಚ್ಚಿಸಲು ತೈಲ ಕಂಪೆನಿಗಳಿಗೆ ಸರ್ಕಾರ ಈ ಹಿಂದೆ ಸೂಚಿಸಿತ್ತು. ಇದೇ ಅಕ್ಟೋಬರ್‌ನಲ್ಲಿ ಈ ಆದೇಶವನ್ನು ಹಿಂಪಡೆಯಲಾಗಿದೆ. ಇದರಂತೆ ತೈಲ ಕಂಪೆನಿಗಳು ಅಕ್ಟೋಬರ್‌ನಿಂದ ಬೆಲೆ ಏರಿಕೆ ಮಾಡಿಲ್ಲ.

ಮೊದಲು ಪ್ರತಿ ತಿಂಗಳು ₹ 2 ಏರಿಸಲು ತಿಳಿಸಲಾಗಿತ್ತು. ನಂತರ, ಈ ವರ್ಷದ ಜೂನ್ 1ರಿಂದ ₹ 4 ಏರಿಸಲು ಆದೇಶಿಸಲಾಗಿತ್ತು. ಕಳೆದ 17 ತಿಂಗಳುಗಳಲ್ಲಿ ಸಬ್ಸಿಡಿ ಅಡುಗೆ ಅನಿಲದ ಬೆಲೆ ₹ 76.5 ಏರಿಕೆಯಾಗಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಹಜ್ ಯಾತ್ರೆಗೆ ಸಹಾಯಧನ ಇಲ್ಲ

ಮುಕ್ತಾರ್ ಅಬ್ಬಾಸ್ ನಖ್ವಿ
ಹಜ್ ಯಾತ್ರೆಗೆ ಸಹಾಯಧನ ಇಲ್ಲ

17 Jan, 2018
ಸಾಕ್ಷಿಯನ್ನು ಖರೀದಿಸಿಲ್ಲ

ಗೋವಾ ಆರೋಪಕ್ಕೆ ಕರ್ನಾಟಕ ತಿರುಗೇಟು
ಸಾಕ್ಷಿಯನ್ನು ಖರೀದಿಸಿಲ್ಲ

17 Jan, 2018
ಹತ್ಯೆಗೆ ಸಂಚು: ತೊಗಾಡಿಯಾ

ಸ್ವತಂತ್ರ ತನಿಖೆಗೆ ಕಾಂಗ್ರೆಸ್‌ ಆಗ್ರಹ
ಹತ್ಯೆಗೆ ಸಂಚು: ತೊಗಾಡಿಯಾ

17 Jan, 2018
ಶಮನವಾಗದ ಬಿಕ್ಕಟ್ಟು

ಸುಪ್ರೀಂ ಕೋರ್ಟ್‌
ಶಮನವಾಗದ ಬಿಕ್ಕಟ್ಟು

17 Jan, 2018
ತೊಗಾಡಿಯಾ ನಾಪತ್ತೆ: ಉಳಿದ ಗೊಂದಲ

ಅಹಮದಾಬಾದ್
ತೊಗಾಡಿಯಾ ನಾಪತ್ತೆ: ಉಳಿದ ಗೊಂದಲ

17 Jan, 2018