ಕೊಪ್ಪಳ

‘ಕಾಂಗ್ರೆಸ್‍ನಿಂದ ದೇಶಕ್ಕೆ ಮಹತ್ತರ ಕೊಡುಗೆ’

ದೇಶಕ್ಕೆ ಅನೇಕ ಮಹತ್ತರ ಯೋಜನೆಗಳನ್ನು ನೀಡುವ ಮೂಲಕ ಭಾರತವನ್ನು ವಿಶ್ವದಲ್ಲಿಯೇ ಮಹಾನ್‍ ಹಾಗೂ ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿಸಿದ ಶ್ರೇಯಸ್ಸು ಕಾಂಗ್ರೆಸ್ಗೆ ಸಲ್ಲುತ್ತದೆ

ಕೊಪ್ಪಳ: ದೇಶಕ್ಕೆ ಅನೇಕ ಮಹತ್ತರ ಯೋಜನೆಗಳನ್ನು ನೀಡುವ ಮೂಲಕ ಭಾರತವನ್ನು ವಿಶ್ವದಲ್ಲಿಯೇ ಮಹಾನ್‍ ಹಾಗೂ ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿಸಿದ ಶ್ರೇಯಸ್ಸು ಕಾಂಗ್ರೆಸ್ಗೆ ಸಲ್ಲುತ್ತದೆ ಎಂದು ಕಾಂಗ್ರೆಸ್‍ ಜಿಲ್ಲಾಧ್ಯಕ್ಷ ಕೆ.ಬಸವರಾಜ ಹಿಟ್ನಾಳ್‍ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

1885ರ ಡಿ.28ರಂದು ಮುಂಬೈನಲ್ಲಿ ಅಲೆನ್ ಹೋಮೆ ಹಾಗೂ ದಾದಾಬಾಯಿ ನವರೋಜಿ ಸಾರಥ್ಯದಲ್ಲಿ 72 ಸದಸ್ಯರನ್ನೊಳಗೊಂಡ ಕಾಂಗ್ರೆಸ್ ಪಕ್ಷ ಸ್ಥಾಪನೆಗೊಂಡಿತು. ಮೊದಲ ಅಧ್ಯಕ್ಷರಾಗಿ ಎ.ಓ.ಹ್ಯೂಮ್‌ ಆಯ್ಕೆಯಾದರು. ಬ್ರಿಟಿಷರ ವಿರುದ್ಧ ಸ್ವತಂತ್ರ ಸಂಗ್ರಾಮದ ರಣಕಹಳೆ ಮೊಳಗಿಸಿದ ಪಕ್ಷ ಹಾಗೂ ಅನೇಕ ಸ್ವಾತಂತ್ರ್ಯ ಸೇನಾನಿಗಳ ಹೋರಾಟದಿಂದ ಭಾರತವನ್ನು ಸ್ವತಂತ್ರಗೊಂಡಿತು. ಬಡತನದಿಂದ ಬಳಲುತ್ತಿದ್ದ ದೇಶದ ಪುನಶ್ಚೇತನಕ್ಕೆ ಪಕ್ಷ ಸಾಕಷ್ಟು ಶ್ರಮಿಸಿದೆ ಎಂದರು.

'ದೇಶದ ಉದ್ದಗಲಕ್ಕೂ ಅನೇಕ ಅಣೆಕಟ್ಟೆಗಳನ್ನು ನಿರ್ಮಿಸುವ ಮೂಲಕ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿದೆ. ಆ ಮೂಲಕ ದೇಶದಲ್ಲಿ ಹಸಿರುಕ್ರಾಂತಿ ಸೃಷ್ಟಿಸಿತು ಈ ಪಕ್ಷ. ಔದ್ಯೋಗೀಕರಣದ ಯೋಜನೆಗಳ ಮೂಲಕ ಕೈಗಾರಿಕೆಗಳನ್ನು ಸೃಷ್ಟಿಸಿ, ದೇಶದ ಯುವಕರಿಗೆ ಉದ್ಯೋಗ ಹಾಗೂ ತಾಂತ್ರಿಕತೆಯ ಸ್ಪರ್ಶ ನೀಡಿದೆ. ಇದು ಕೇವಲ ಒಂದು ರಾಜಕೀಯ ಪಕ್ಷವಾಗಿರದೆ ಭವ್ಯ ಭಾರತದ ಇತಿಹಾಸ' ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಬಿ.ನಾಗರಳ್ಳಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರೆಡ್ಡಿ, ಕಾಟನ್ ಪಾಷಾ, ಮುಖಂಡರಾದ ಶಾಂತಣ್ಣ ಮುದಗಲ್, ದ್ಯಾಮಣ್ಣ ಚಿಲವಾಡಗಿ, ನಗರಸಭೆ ಸದಸ್ಯರಾದ ಬಾಳಪ್ಪ ಬಾರಕೇರ, ಮುತ್ತುರಾಜ ಕುಷ್ಟಗಿ, ಗವಿಸಿದ್ದಪ್ಪ ಮುದಗಲ್, ನಾಗರಾಜ ಪಟವಾರಿ, ಮಾನ್ವಿ ಪಾಷಾ, ಜಾಫರ್ ತಟ್ಟಿ, ಮಹೆಬೂಬ ಅರಗಂಜಿ, ಅಜ್ಜಪ್ಪಸ್ವಾಮಿ, ಶಿವಾನಂದ ಹೊದ್ಲೂರು, ಮುನೀರ್‍ ಸಿದ್ದಿಕಿ, ಕೋಟೇಶ್‍ ತಳವಾರ, ದೇವೇಂದ್ರಪ್ಪ ಕೋಳೂರ, ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ರಾಜ್ಯದಲ್ಲಿ ಹೆಚ್ಚಿದ ಹತ್ಯೆ, ಆತ್ಮಹತ್ಯೆಗಳು

ಕೊಪ್ಪಳ
ರಾಜ್ಯದಲ್ಲಿ ಹೆಚ್ಚಿದ ಹತ್ಯೆ, ಆತ್ಮಹತ್ಯೆಗಳು

21 Jan, 2018
ಹನುಮನಹಳ್ಳಿಯಲ್ಲಿ ಕುಡುಕರಿಗೆ ದೊಣ್ಣೆಯೇಟು ಖಾತ್ರಿ

ಕೊಪ್ಪಳ
ಹನುಮನಹಳ್ಳಿಯಲ್ಲಿ ಕುಡುಕರಿಗೆ ದೊಣ್ಣೆಯೇಟು ಖಾತ್ರಿ

20 Jan, 2018

ಗಂಗಾವತಿ
ಆತ್ಮಹತ್ಯೆ ನಿರ್ಣಯ ಹಿಂಪಡೆದ ಪೌರನೌಕರರು

ಹಿರಿಯ ಕಾರ್ಮಿಕ ನಾಯಕ ಜೆ. ಭಾರದ್ವಾಜ್, ನಗರಸಭೆಯಲ್ಲಿ ಸೇವೆ ಸಲ್ಲಿಸುತ್ತಿರುವ ದಿನಗೂಲಿ ನೌಕರರನ್ನು ಕೆಲಸದಿಂದ ತೆಗೆಯದಂತೆ ಸರ್ಕಾರದ ನಿರ್ದೇಶನವಿದೆ.

20 Jan, 2018

ಕೊಪ್ಪಳ
ಜೀವನ ಮೌಲ್ಯ ಜಾಗೃತಗೊಳಿಸಿದ ಸಾಧಕ

ಅವರು ಅಸ್ಪೃಶ್ಯತೆಯ ವಿರುದ್ಧ ನೇರವಾಗಿ ಮಾತನಾಡುವ, ಖಂಡಿಸುವ ವ್ಯಕ್ತಿ ಆಗಿದ್ದರು. ಇವರ ಇತಿಹಾಸವನ್ನು ಯಾರು ಬರೆಯಲಿಲ್ಲ. ಆದರೆ, ವೇಮನರು ತಮ್ಮ ಪದ್ಯಗಳ ಮೂಲಕ ಪ್ರತಿಯೊಬ್ಬರ...

20 Jan, 2018
‘ಆಧ್ಯಾತ್ಮಿಕ ಚಿಂತನೆಯಿಂದ ನೆಮ್ಮದಿ’

ಕುಷ್ಟಗಿ
‘ಆಧ್ಯಾತ್ಮಿಕ ಚಿಂತನೆಯಿಂದ ನೆಮ್ಮದಿ’

19 Jan, 2018