ವಿಜಯಪುರ

ಯುವಕರಿಗೆ ಅಧಿಕಾರ ದೊರೆತರೆ ಅಭಿವೃದ್ಧಿ ಸಾಧ್ಯ

ನೂತನವಾಗಿ ಯುವ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ಎಂ.ಮಣಿಕಂಠ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಯುವಜನರ ಕೌಶಲ್ಯಾಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ

ವಿಜಯಪುರ : ರಾಷ್ಟ್ರದ ಸಮಗ್ರ ಅಭಿವೃದ್ಧಿಗಾಗಿ ಯುವಕರ ಕೈಗೆ ಅಧಿಕಾರ ಸಿಗಬೇಕು ಎಂದು ಸಮಾಜ ಸೇವಕ ಎಂ.ಮುಖೇಶ್ ಬಾಬು ಹೇಳಿದರು. ನೂತನವಾಗಿ ತಾಲ್ಲೂಕು ಯುವ ಕಾಂಗ್ರೆಸ್ ಘಟಕದ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಎಂ.ಮಣಿಕಂಠ ಅವರನ್ನು ಗುರುವಾರ ಅಭಿನಂದಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಅಧಿಕಾರ ಜನರಿಗೆ ಸಿಗಬೇಕು. ಸಿಕ್ಕಿರುವ ಅಧಿಕಾರವನ್ನು ಸಮಾಜ ಒಳಿತಿಗಾಗಿ ಉಪಯೋಗ ಮಾಡುವುದನ್ನು ಯುವಜನರು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಾಮಾಣಿಕರು, ಬದ್ಧತೆ ಇರುವವರು, ಕನಸುಗಳನ್ನು ಹೊಂದಿರುವವರು ಬಂದರೆ ಬದಲಾವಣೆ ಸಾಧ್ಯವಾಗುತ್ತದೆ. ಒಂದು ವೇಳೆ ಅಪ್ರಾಮಾಣಿಕರು, ಭ್ರಷ್ಟರು, ಸಂಪತ್ತನ್ನು ವೃದ್ಧಿ ಮಾಡಿಕೊಳ್ಳುವವರ ಕೈಗೆ ಅಧಿಕಾರ ನೀಡಿದರೆ ಅಪಾಯ ತಪ್ಪಿದಲ್ಲ ಎಂದರು.

ನೂತನವಾಗಿ ಯುವ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ಎಂ.ಮಣಿಕಂಠ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಯುವಜನರ ಕೌಶಲ್ಯಾಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದರು.

ಯುವಜನರಿಗೆ ಯೋಜನೆಗಳನ್ನು ಮುಟ್ಟಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಪಕ್ಷ ಸಂಘಟನೆಗೂ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದರು.ಯುವ ಮುಖಂಡರಾದ ನಾಗೇಶ್, ಸುಹೇಲ್ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಕೆರೆ ಕುಂಟೆಗಳಲ್ಲಿ ನೀರಿಲ್ಲ, ಆತಂಕ

ವಿಜಯಪುರ
ಕೆರೆ ಕುಂಟೆಗಳಲ್ಲಿ ನೀರಿಲ್ಲ, ಆತಂಕ

16 Jan, 2018

ವಿಜಯಪುರ
‘ರೈತರ ಬೆಳೆಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ’

ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸಂತೆ ಮಾರುಕಟ್ಟೆಗಳು ನಿರ್ಮಾಣವಾದರೆ, ರೈತರಿಗೆ ಅನುಕೂಲವಾಗಲಿದೆ. ರೈತರು ಬೆಳೆದ ತರಕಾರಿಗಳನ್ನು ನಿಗದಿತ ಸಮಯದಲ್ಲಿ ಮಾರುಕಟ್ಟೆಗೆ ತರಲು ಅನುಕೂಲವಾಗಲಿದೆ ಎಂದರು.

15 Jan, 2018
‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಿ’

ದೇವನಹಳ್ಳಿ
‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಿ’

15 Jan, 2018
ಪ್ರಧಾನಿ ಕಾರ್ಯವೈಖರಿಗೆ ಮೆಚ್ಚಿ ಬಿಜೆಪಿಗೆ ಸೇರ್ಪಡೆ

ವಿಜಯಪುರ
ಪ್ರಧಾನಿ ಕಾರ್ಯವೈಖರಿಗೆ ಮೆಚ್ಚಿ ಬಿಜೆಪಿಗೆ ಸೇರ್ಪಡೆ

15 Jan, 2018
ವಿದ್ಯುತ್ ಮಗ್ಗ ಸಹಾಯಧನ ಹೆಚ್ಚಿಸಿ

ವಿಜಯಪುರ
ವಿದ್ಯುತ್ ಮಗ್ಗ ಸಹಾಯಧನ ಹೆಚ್ಚಿಸಿ

14 Jan, 2018