ರೂಪ ಸಂಪತ್ತಿಗಿಂತ ಭಾವ ಸಂಪತ್ತು ಶ್ರೇಷ್ಠ

ಸಾಮಾನ್ಯರಲ್ಲಿ ಇದು ಮಾತ್ರ ನನ್ನದು, ಇವರು ಮಾತ್ರ ನನ್ನವರು ಎನ್ನುವ ಸಣ್ಣತನ ಮೂಡುತ್ತದೆ

ರೂಪ ಸಂಪತ್ತಿಗಿಂತ ಭಾವ ಸಂಪತ್ತು ಶ್ರೇಷ್ಠ. ನಮಗೆ ದೊರೆತ ಮಹತ್ತರವಾದ ಸಂಪತ್ತು ಎಂದರೆ ದೇಹ, ಬುದ್ದಿ ಮತ್ತು ಭಾವಗಳು. ಇವೆ. ದೇವರು ಕರುಣಿಸಿದ ಅಪ್ರತಿಮ ಕಾಣಿಕೆ. ಭಾವ ಸೌಂದರ್ಯದ ಮೇಲೆ ಜೀವನ ಅವಲಂಬಿಸಿದೆ. ಭಾವ ವಿಶಾಲವಾದರೇ ಬದುಕು ವಿಶಾಲ, ಸಂಕುಚಿತವಾದರೆ ಜೀವನವೂ ಸಂಕುಚಿತ. ಸುಖ, ದುಃಖ, ಬಂಧನ, ಮುಕ್ತಿ ಎಲ್ಲವೂ ಭಾವವನ್ನೇ ಅವಲಂಬಿಸಿವೆ.

ಕೇವಲ ಶರೀರದಿಂದ ಎಲ್ಲವೂ ಸಾಧ್ಯವಿಲ್ಲ. ಈ ಭಾವದಲ್ಲಿ ಮೂರು ಪ್ರಕಾರಗಳಿವೆ. ನಾನು ಅನುಭವಿಸುತ್ತಿದ್ದೇನೆ ಎಂಬುದು ಭೋಕ್ತಭಾವ. ನಾನು ಮಾಡುತ್ತಿದ್ದೇನೆ ಎಂಬುದು ಕರ್ತವ್ಯ ಭಾವ ಮತ್ತು ನಾನು ತಿಳಿಯುತ್ತಿದ್ದೇನೆ ಎಂಬುದು ಜ್ಞಾತೃತ್ವ ಭಾವ.

ಈ ಮೂರರಲ್ಲಿ ‘ನಾನು’ ಎಂಬುದು ಮುಖ್ಯವಾದದ್ದು. ಈ ಭಾವಗಳು ನಮ್ಮ ಸಂತೋಷ ಹಾಗೂ ದುಃಖಕ್ಕೆ ಕಾರಣವಾಗುತ್ತವೆ. ಗಾಳಿಪಟ ಎತ್ತರೆತ್ತರಕ್ಕೇರಲು ಹಾರಲು ಸೂತ್ರ ಮತ್ತು ಬಾಲವೇ ಕಾರಣ. ಸೂತ್ರ ಹರಿದರೆ ನಾನು ಮತ್ತು ನನ್ನದು ಎಂಬ ಭಾವ ಬೇಕು. ಆದರೆ, ಆ ಭಾವ ಸಾತ್ವಿಕವಾಗಿರಬೇಕು ಹೊರತು ತಾಮಸವಾಗಬಾರದು. ಇಡೀ ಜಗತ್ತನ್ನು ಗೆದ್ದು, ಸಾಮ್ರಾಟವಾಗಬೇಕು ನಿಮಿತ್ತ ಅಲೆಕ್ಸಾಂಡರ್ ಕನಸು ಕಂಡ. ಎಷ್ಟೇ ದೊಡ್ಡವ ಎಂದು ಭಾವಿಸಿದವನಿಗೂ ಆ ಅಹಂ ಬಿಟ್ಟಿಲ್ಲ. ಲೌಕಿಕ ಮಾತ್ರವಲ್ಲ ಪಾರಮಾರ್ಥಿಕ ಜಗತ್ತಿನಲ್ಲಿಯೂ ಇದು ಕಾಡುತ್ತದೆ. ವ್ಯತ್ಯಾಸವೆಂದರೆ ಮಹಾತ್ಮರಲ್ಲಿ ಎಲ್ಲರೂ ನನ್ನವರೆಂಬ ಉದಾತ್ತತೆ ಇದ್ದರೆ.

ಸಾಮಾನ್ಯರಲ್ಲಿ ಇದು ಮಾತ್ರ ನನ್ನದು, ಇವರು ಮಾತ್ರ ನನ್ನವರು ಎನ್ನುವ ಸಣ್ಣತನ ಮೂಡುತ್ತದೆ. ಭಾರತ ರತ್ನದಂಥ ಪ್ರಶಸ್ತಿಯನ್ನು ಸರ್ಕಾರಗಳು ಕೊಡಬಹುದು. ಆದರೇ, ಮಹಾತ್ಮ ಎಂಬ ಬಿರುದನ್ನು ಯಾರಿಗೆ ಯಾರು ಕೊಡಲು ಸಾಧ್ಯ ? ಮಹರ್ಷಿ ಅರವಿಂದರ ಪ್ರಕಾರ ಮನೋವಿಕಾಸವೆ ಜೀವನದ ಅತಿದೊಡ್ಡ ಸಾಧನ. ಮನುಷ್ಯ ಮಹಾದೇವನಾಗುವ ದಿವ್ಯತೆಯೇ ಭಾವ ವಿಕಾಸ.

ವ್ಯಕ್ತಿಯಿಂದ ವ್ಯಕ್ತಿಗೆ ಬುದ್ದಿ ಹೆಚ್ಚು, ಕಡಿಮೆ ಇರಬಹುದು. ಆದರೆ ಭಾವ ಎಲ್ಲರಲ್ಲಿ ಸಮವಾಗಿರುತ್ತದೆ. ಮದುವೆಯಲ್ಲಿ ಕಟ್ಟಿದ ಅರವಿ ಗಂಟು ಬಿಚ್ಚಬಹುದು. ಆದರೇ ಭಾವ ಗಂಟು ಬಿಡುವುದಿಲ್ಲ. ನೂರು ವರ್ಷಗಳ ಸಂಬಂಧವನ್ನು ಅದು ಬೆಸೆಯುತ್ತದೆ. ಪಾಶ್ಚಿಮಾತ್ಯರ ಮದುವೆ ವ್ಯವಹಾರದ ಬಂಧನ. ಭಾರತೀಯರದು ಭಾವ ವಿವಾಹ. ವನವಾಸದ ಕಷ್ಟ ರಾಮನಿಗೆ ಇದ್ದರೂ ಅದನ್ನು ಸೀತಾ ದೇವಿಯೂ ಅನುಭವಿಸಿದಳು. ನೀನಿಲ್ಲದ ಅರಮನೆ ನನಗೆ ವನವಾಸ, ನೀನಿರುವ ಕಾಡೇ ನನಗೆ ಅಯೋಧ್ಯೆ ಅಂದಳು ಜಾನಕಿ. ಈ ಭಾವವೇ ಬದುಕಿನ ಮೂಲ ದ್ರವ್ಯವಾಗಬೇಕು. ಯೌವನ, ರೂಪ ಹಾಗೂ ಸಂಪತ್ತಿಗಿಂತ ಭಾವ ಸಂಪತ್ತು ಶ್ರೇಷ್ಠ.

Comments
ಈ ವಿಭಾಗದಿಂದ ಇನ್ನಷ್ಟು

ಭಾಲ್ಕಿ
ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಪಟ್ಟದ್ದೇವರು

ಲಿಂ.ಚನ್ನಬಸವ ಪಟ್ಟದ್ದೇವರ 19ನೇ ಸ್ಮರಣೋತ್ಸವ, ವಚನ ಜಾತ್ರೆ ಶನಿವಾರ (ಏ.21) ನಡೆಯಲಿದ್ದು, ಪಟ್ಟಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರಮುಖ ವೃತ್ತಗಳಲ್ಲಿ ಶರಣರ ನೂರಾರು...

21 Apr, 2018

ಬೀದರ್
ಅಕ್ರಮ ಮದ್ಯ, ಗಾಂಜಾ ವಶ: 129 ಜನರ ಬಂಧನ

ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಏಪ್ರಿಲ್ 18ರ ವರೆಗೆ ಜಿಲ್ಲೆಯಲ್ಲಿ 995.500 ಲೀಟರ್ ಅಕ್ರಮ ಮದ್ಯ, 168.150 ಲೀಟರ್ ಬೀಯರ್, 84...

21 Apr, 2018

ಬೀದರ್‌
ಶೈಲೇಂದ್ರ, ಕಲ್ಲೂರಗೆ ಬಿಜೆಪಿ ಟಿಕೆಟ್

ರಾಜಕೀಯ ಪಕ್ಷಗಳು ಜಿಲ್ಲೆಯ ಎಲ್ಲ ಕ್ಷೇತ್ರಗಳ ಟಿಕೆಟ್‌ ಘೋಷಣೆ ಮಾಡಿವೆ. ಕಾಂಗ್ರೆಸ್ ಮೊದಲ ಹಂತದಲ್ಲೇ ಎಲ್ಲ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದರೆ, ಉತ್ತಮ ಅಭ್ಯರ್ಥಿಗಳ ನಿರೀಕ್ಷೆಯಲ್ಲಿದ್ದ...

21 Apr, 2018
ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಹುಮನಾಬಾದ್
ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

20 Apr, 2018

ಬೀದರ್‌
ಒಗ್ಗೂಡುತ್ತಿರುವ ಮರಾಠರು: ಬಿಜೆಪಿ, ಕಾಂಗ್ರೆಸ್‌ ತಳಮಳ

ಜೆಡಿಎಸ್‌ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿಶ್ಚಯಿಸಿದ ನಂತರ ಜಿಲ್ಲೆಯಲ್ಲಿ ಮರಾಠರು ಒಗ್ಗೂಡಲು ಆರಂಭಿಸಿದ್ದಾರೆ. ಇದರಿಂದಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ...

20 Apr, 2018