ಚೆಲುವಿನ ಚಿತ್ತಾರ

ಸೌತ್‌ ಇಂಡಿಯಾ ಐಕಾನ್‌ ಐಶ್ವರ್ಯಾ

ಈ ಹಿಂದೆ ‘ಮಿಸ್‌ ಕರ್ನಾಟಕ’ ಕಿರೀಟವನ್ನು ಇವರು ಮುಡಿಗೇರಿಸಿಕೊಂಡಿದ್ದರು. ಎಂಟನೇ ತರಗತಿವರೆಗೂ ಮಸ್ಕತ್ತ್‌ ಓದಿದ ಐಶ್ವರ್ಯಾ, ಬೆಂಗಳೂರಿಗೆ ಬಂದು ಆರು ವರ್ಷವಾಗಿದೆ.

ಐಶ್ವರ್ಯಾ

ಮಿಸ್‌ ಇಂಡಿಯಾ ಕನವರಿಕೆಯಲ್ಲಿ ಮಾಡೆಲಿಂಗ್‌ ಕ್ಷೇತ್ರ ಪ್ರವೇಶಿಸಿರುವ ಐಶ್ವರ್ಯಾ, ‘ಮಿಸ್‌ ಬೆಸ್ಟ್‌ ಇಂಡಿಯಾ ಐಕಾನ್‌’ ಸ್ಪರ್ಧೆಯಲ್ಲಿ  ದಕ್ಷಿಣ ಭಾರತ ಏಕೈಕ ಸ್ಪರ್ಧಿಯಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 24 ರೂಪದರ್ಶಿಗಳಿದ್ದ ಈ ಸ್ಪರ್ಧೆಯಲ್ಲಿ ಆಯ್ಕೆಯಾಗಿರುವವರು ಐವರು ಮಾತ್ರ. ರಿಯೊ ಪ್ರೊಡಕ್ಷನ್‌ ಈ ಸ್ಪರ್ಧೆ ಆಯೋಜಿಸಿತ್ತು. ಫೆಬ್ರುವರಿಯಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆ ಮುಂಬೈನಲ್ಲಿ ನಡೆಯಲಿದ್ದು, ಇದರಲ್ಲಿ ವಿಜೇತರಾದವರು ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ.

ಈ ಹಿಂದೆ ‘ಮಿಸ್‌ ಕರ್ನಾಟಕ’ ಕಿರೀಟವನ್ನು ಇವರು ಮುಡಿಗೇರಿಸಿಕೊಂಡಿದ್ದರು. ಎಂಟನೇ ತರಗತಿವರೆಗೂ ಮಸ್ಕತ್ತ್‌ ಓದಿದ ಐಶ್ವರ್ಯಾ, ಬೆಂಗಳೂರಿಗೆ ಬಂದು ಆರು ವರ್ಷವಾಗಿದೆ. ಟಿ.ವಿಯಲ್ಲಿ, ಮಿಸ್‌ ಇಂಡಿಯಾ ಮತ್ತು ವಿಶ್ವಸುಂದರಿ ಸ್ಪರ್ಧೆಗಳನ್ನು ನೋಡುವಾಗ ತಾನೂ ರೂಪದರ್ಶಿಯಾಗಬೇಕು, ರ‍್ಯಾಂಪ್‌ ಮೇಲೆ ಕಾಣಿಸಿಕೊಳ್ಳಬೇಕು, ದೇಶವೇ ಗುರುತಿಸುವಂತಾಗಬೇಕು ಅನಿಸಿ ಆ ನಿಟ್ಟಿನಲ್ಲಿ ತಯಾರಿ ನಡೆಸತೊಡಗಿದ್ದರು.

ಫಿಟ್‌ನೆಸ್‌: ದೇಹ ಫಿಟ್‌ ಆಗಿರಲು ಐಶ್ವರ್ಯಾ ಬೆಳಿಗ್ಗೆ ಎರಡು ಗಂಟೆ ಹಾಗೂ ಸಂಜೆ ಒಂದು ಗಂಟೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಾರೆ. ಅದರಲ್ಲೂ ಹೆಚ್ಚಾಗಿ ಕಾರ್ಡಿಯೊ ಮೊರೆ ಹೋಗುತ್ತಾರಂತೆ. ಬಿಡುವಿದ್ದಾಗ ಮಕ್ಕಳಿಗೆ ನೃತ್ಯ ಹೇಳಿಕೊಡುತ್ತಾರೆ. ಬೆಳಿಗ್ಗೆ ಹಣ್ಣು, ಮೊಟ್ಟೆ, ಮಧ್ಯಾಹ್ನ ಚಪಾತಿ, ತರಕಾರಿ ಪಲ್ಯ, ಹಾಗೂ ರಾತ್ರಿ ಹಣ್ಣು ತಿನ್ನುತ್ತಾರೆ. ‘ಮಾಡೆಲಿಂಗ್‌ ಜೊತೆಗೆ ಉತ್ತಮ ಸಿನಿಮಾಗಳಲ್ಲಿ ಅವಕಾಶ ಸಿಕ್ಕರೆ ನಟಿಸಲು ಸಿದ್ಧ’ ಎನ್ನುತ್ತಾರೆ ಇವರು.

Comments
ಈ ವಿಭಾಗದಿಂದ ಇನ್ನಷ್ಟು
ಸಿಗಲಿ ತಲೆಎತ್ತಿ ನಡೆಯುವ ಪಾಠ

ಹೆಣ್ಣು ಮಗು ದಿನ
ಸಿಗಲಿ ತಲೆಎತ್ತಿ ನಡೆಯುವ ಪಾಠ

24 Jan, 2018
ಹೆಣ್ಣೇ ಹೊನ್ನು ಎಂದವರು...

ಮೆಟ್ರೋ
ಹೆಣ್ಣೇ ಹೊನ್ನು ಎಂದವರು...

24 Jan, 2018
ನಮ್ಮ ಬಾಲ್ಯ ಹೀಗಿತ್ತು...

ರಾಷ್ಟ್ರೀಯ ಹೆಣ್ಣು ಮಗು ದಿನ
ನಮ್ಮ ಬಾಲ್ಯ ಹೀಗಿತ್ತು...

24 Jan, 2018
ಮತ್ತೆ ಬಾಲಿವುಡ್‌ನಲ್ಲಿ ದುಲ್ಕರ್‌ ಸೋನಂ ಕಪೂರ್‌ ಜೋಡಿ

ಮೆಟ್ರೋ
ಮತ್ತೆ ಬಾಲಿವುಡ್‌ನಲ್ಲಿ ದುಲ್ಕರ್‌ ಸೋನಂ ಕಪೂರ್‌ ಜೋಡಿ

23 Jan, 2018
ಚರಿತ್ರೆ ದಾಖಲಿಸುವ ಉದ್ಯಾನ

ಬೆಳಕು
ಚರಿತ್ರೆ ದಾಖಲಿಸುವ ಉದ್ಯಾನ

23 Jan, 2018