ಕವಿತೆ

ತೃಪ್ತ

ಬೇಡಿಕೆಯ ಮಂಡನೆ ಸಾಕಪ್ಪ ಸಾಕು ಈ ಮುಖಕೆ ಈ ಸಲಕೆ ಇನ್ನೆಷ್ಟು ಬೇಕು

ಚಿತ್ರ: ಶಶಿಕಿರಣ ದೇಸಾಯಿ

ಆಗಲೂ ಅರ್ಜಿ ಗುಜರಾಯಿಸಿರಲಿಲ್ಲ
ತಾನಾಗೆ ಮಂಜೂರು ದರಖಾಸ್ತು ತುಂಡು ನೆಲ
ಇರಬಹುದು ಚೂರು ಕಹಿ, ಬಾಕಿ ಬೆಲ್ಲ
ಇನ್ನು ಬೇಕೆಂದರೆ ಅದು ತೀರಾ ಸಲ್ಲ

ಆಗ್ರಹಕು ದೈನ್ಯತೆಗು ಅರ್ಥವೇ ಇಲ್ಲ
ಕಾಣಿಸದ ಪ್ರಭುವಿಗೆ ಪುರುಸೊತ್ತೆ ಇಲ್ಲ
ಕೋಟಿ ಕಡತಗಳು ಕೊಳೆಯುತಿವೆಯಲ್ಲ
ಸುಮ್ಮನಿರು ಮಾರಾಯ ಲೋಭ ತರವಲ್ಲ

ಬೇಡಿಕೆಯ ಮಂಡನೆ ಸಾಕಪ್ಪ ಸಾಕು
ಈ ಮುಖಕೆ ಈ ಸಲಕೆ ಇನ್ನೆಷ್ಟು ಬೇಕು
ಯಾರು ಕೊಟ್ಟಿದ್ದರೋ ಗ್ಯಾರಂಟಿ ಕಾರ್ಡು
ಅಳಬೇಡ ಚಪ್ಪಲಿಗೆ ಕಾಲಿರದವನ ನೋಡು

ಧನ್ಯತೆಯ ಹೇಳುತ್ತ ತಲೆಬಾಗಿ ನಮಿಸುತ್ತ
ಪಡೆದುದೆಲ್ಲವ ಮರಳಿ ಕೊಡಲು ಅಣಿಯಾಗು
ನೀ ಬರುವ ಮುನ್ನವೇ ನಿನಗಾಗಿ ಕಾಯುತ್ತ
ನಿಂತ ಸಾಲುಮರಗಳಿಗೆ ನಿಜಕು ಋಣಿಯಾಗು

Comments
ಈ ವಿಭಾಗದಿಂದ ಇನ್ನಷ್ಟು
ಪ್ರಾಣಿ ಪ್ರಪಂಚ: ವೈವಿಧ್ಯ - ವಿಸ್ಮಯ

ವಿಜ್ಞಾನ ವಿಶೇಷ
ಪ್ರಾಣಿ ಪ್ರಪಂಚ: ವೈವಿಧ್ಯ - ವಿಸ್ಮಯ

22 Apr, 2018
ಅಣ್ಣನ ವೆಸ್ಟ್‌ಕೋಟ್‌

ಮಕ್ಕಳ ಪದ್ಯ
ಅಣ್ಣನ ವೆಸ್ಟ್‌ಕೋಟ್‌

22 Apr, 2018
ಹಕ್ಕಿಗೊಂದಿಷ್ಟು ಅರವಟ್ಟಿಗೆ

ಮಕ್ಕಳ ಪದ್ಯ
ಹಕ್ಕಿಗೊಂದಿಷ್ಟು ಅರವಟ್ಟಿಗೆ

22 Apr, 2018
ಸಂತರ ಸಂಗ

ಮಕ್ಕಳ ಕತೆ
ಸಂತರ ಸಂಗ

22 Apr, 2018
ತಂದೆಯ ನೆನಪಿನ ಸಾರ!

ಮೊದಲ ಓದು
ತಂದೆಯ ನೆನಪಿನ ಸಾರ!

22 Apr, 2018