ಉರುಸ್‌ನಲ್ಲಿ ಪಾಲ್ಗೊಳ್ಳುವ ಬಯಕೆ ಹೊಂದಿದ್ದ ನಾಗರಿಕರು

192 ಯಾತ್ರಾರ್ಥಿಗಳಿಗೆ ವೀಸಾ ನಿರಾಕರಣೆ

ನವದೆಹಲಿಯಲ್ಲಿ ಜ. 1ರಿಂದ 8ರವರೆಗೆ ನಡೆಯಲಿರುವ ನಿಜಾಮುದ್ದೀನ್‌ ಉರುಸ್‌ನಲ್ಲಿ ಪಾಲ್ಗೊಳ್ಳಲು ಬಯಸಿದ್ದ 192 ಯಾತ್ರಾರ್ಥಿಗಳಿಗೆ ವೀಸಾ ನೀಡಲು ಭಾರತ ನಿರಾಕರಿಸಿದೆ ಎಂದು ಪಾಕಿಸ್ತಾನ ದೂರಿದೆ.

192 ಯಾತ್ರಾರ್ಥಿಗಳಿಗೆ ವೀಸಾ ನಿರಾಕರಣೆ

ಇಸ್ಲಾಮಾಬಾದ್‌: ನವದೆಹಲಿಯಲ್ಲಿ ಜ. 1ರಿಂದ 8ರವರೆಗೆ ನಡೆಯಲಿರುವ ನಿಜಾಮುದ್ದೀನ್‌ ಉರುಸ್‌ನಲ್ಲಿ ಪಾಲ್ಗೊಳ್ಳಲು ಬಯಸಿದ್ದ 192 ಯಾತ್ರಾರ್ಥಿಗಳಿಗೆ ವೀಸಾ ನೀಡಲು ಭಾರತ ನಿರಾಕರಿಸಿದೆ ಎಂದು ಪಾಕಿಸ್ತಾನ ದೂರಿದೆ.

ಹಜರತ್‌ ಖವಾಜ ನಿಜಾಮುದಿನ್ ಔಲಿಯಾ ಅವರ ಪುಣ್ಯ ತಿಥಿ ಅಂಗವಾಗಿ ಈ ಉರುಸ್‌ ನಡೆಯಲಿದೆ.’ಕೊನೆ ಕ್ಷಣದಲ್ಲಿ ವೀಸಾ ನೀಡಲು ನಿರಾಕರಿಸಿರುವುದು ಬೇಸರ ಮೂಡಿಸಿದೆ. ಭಾರತದ ನಿರ್ಧಾರದಿಂದ ಮಹತ್ವದ ಉರುಸ್‌ನಲ್ಲಿ ಪಾಲ್ಗೊಳ್ಳಲು ಯಾತ್ರಾರ್ಥಿಗಳಿಗೆ ಅವಕಾಶ ದೊರೆಯದಂತಾಗಿದೆ’ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ತಿಳಿಸಿದೆ.

‘ಧಾರ್ಮಿಕ ಸ್ಥಳಗಳಿಗೆ ಮತ್ತು ವಾರ್ಷಿಕವಾಗಿ ನಡೆಯುವ ಉತ್ಸವಗಳಲ್ಲಿಪಾಲ್ಗೊಳ್ಳಲು ಅವಕಾಶಕಲ್ಪಿಸುವ ಉದ್ದೇಶದಿಂದ 1974ರಲ್ಲಿ  ಉಭಯ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿದ್ದವು. ಈ ಒಪ್ಪಂದದ ಅನ್ವಯವೇ ಯಾತ್ರಾರ್ಥಿಗಳು ನವದೆಹಲಿಗೆ ಭೇಟಿ ನೀಡುವ ಉದ್ದೇಶ ಹೊಂದಿದ್ದರು. ಆದರೆ, ಈಗ ಭಾರತ ಕೈಗೊಂಡಿರುವ ಕ್ರಮ 1974ರ ಒಪ್ಪಂದವನ್ನು ಉಲ್ಲಂಘಿಸುತ್ತದೆ’ ಎಂದು ಅದು ಹೇಳಿದೆ.

Comments
ಈ ವಿಭಾಗದಿಂದ ಇನ್ನಷ್ಟು
ಮೋದಿ–ಮರ್ಕೆಲ್ ಭೇಟಿ

ದ್ವಿಪಕ್ಷೀಯ ಮಾತುಕತೆ
ಮೋದಿ–ಮರ್ಕೆಲ್ ಭೇಟಿ

22 Apr, 2018
ಮಹಿಳೆಗಾಗಿ ‘ಬಾಕ್ಸರ್‌ ನೆರಳು’

ಸುರಕ್ಷತೆ
ಮಹಿಳೆಗಾಗಿ ‘ಬಾಕ್ಸರ್‌ ನೆರಳು’

22 Apr, 2018
ಅಣ್ವಸ್ತ್ರ ನಿಷೇಧ: ಕಿಮ್ ಜಾಂಗ್‌

ಅಣ್ವಸ್ತ್ರ ನಿಶಸ್ತ್ರೀಕರಣ ನಿರ್ಧಾರ
ಅಣ್ವಸ್ತ್ರ ನಿಷೇಧ: ಕಿಮ್ ಜಾಂಗ್‌

22 Apr, 2018
₹ 66 ಲಕ್ಷ ಗೆದ್ದ ಭಾರತದ ಸಂಜಾತ

ರಸಪ್ರಶ್ನೆ ಸ್ಪರ್ಧೆ
₹ 66 ಲಕ್ಷ ಗೆದ್ದ ಭಾರತದ ಸಂಜಾತ

22 Apr, 2018

ಫ್ರಾನ್ಸ್‌ ಕೋರ್ಟ್‌
ಕೈಕುಲುಕದ ಕಾರಣ ಪಾಸ್‌ಪೋರ್ಟ್‌ ನಕಾರ

ಫ್ರಾನ್ಸ್‌ ದೇಶದ ಪೌರತ್ವ ನೀಡುವ ಕಾರ್ಯಕ್ರಮದ ದಿನ ಅಧಿಕಾರಿಗಳಿಗೆ ಕೈಕುಲುಕಿಲ್ಲ ಎಂಬ ಕಾರಣಕ್ಕೆ ಮುಸ್ಲಿಂ ಮಹಿಳೆಗೆ ಪಾಸ್‌ಪೋರ್ಟ್‌ ನೀಡಲು ನಿರಾಕರಿಸಿರುವ ಕ್ರಮ ಸರಿಯಾಗಿದೆ ಎಂದು...

22 Apr, 2018