ನರಸಿಂಹರಾಜಪುರ

‘ಶೃಂಗೇರಿ ಕ್ಷೇತ್ರ: 367 ಮನೆ ಮಂಜೂರು’

ಎನ್‌.ಆರ್.ಪುರ, ಕೊಪ್ಪ, ಶೃಂಗೇರಿ ತಾಲ್ಲೂಕಿನ ವ್ಯಾಪ್ತಿಗೆ ಒಟ್ಟು 367 ಮನೆಗಳು ಮಂಜೂರಾಗಿವೆ ಎಂದು ರಾಜ್ಯ ಅನಿವಾಸಿ ಭಾರತೀಯ ನಿಗಮದ ಉಪಾಧ್ಯಕ್ಷೆ ಡಾ.ಆರತಿಕೃಷ್ಣ ತಿಳಿಸಿದ್ದಾರೆ.

ನರಸಿಂಹರಾಜಪುರ: ಎನ್‌.ಆರ್.ಪುರ, ಕೊಪ್ಪ, ಶೃಂಗೇರಿ ತಾಲ್ಲೂಕಿನ ವ್ಯಾಪ್ತಿಗೆ ಒಟ್ಟು 367 ಮನೆಗಳು ಮಂಜೂರಾಗಿವೆ ಎಂದು ರಾಜ್ಯ ಅನಿವಾಸಿ ಭಾರತೀಯ ನಿಗಮದ ಉಪಾಧ್ಯಕ್ಷೆ ಡಾ.ಆರತಿಕೃಷ್ಣ ತಿಳಿಸಿದ್ದಾರೆ.

ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡಾಗ ಸರ್ಕಾರದಿಂದ ವಸತಿ ಮಂಜೂರು ಮಾಡಿಸಿಕೊಡಬೇಕೆಂದು ವಸತಿ ರಹಿತರು ಮನವಿ ಸಲ್ಲಿಸಿದ್ದರು. ಅದರಂತೆ ವಸತಿ ಸಚಿವ ಕೃಷ್ಣಪ್ಪ ಅವರನ್ನು ಭೇಟಿ ಮಾಡಿ ಶೃಂಗೇರಿ ಕ್ಷೇತ್ರದ ವ್ಯಾಪ್ತಿಗೆ ಬರುವ 3 ತಾಲ್ಲೂಕುಗಳಿಗೆ ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡಬೇಕೆಂದು ಮನವಿ ಸಲ್ಲಿಸಲಾಗಿತ್ತು’ ಎಂದರು.

‘ನನ್ನ ಮನವಿಗೆ ಸ್ಪಂದಿಸಿದ ಶೃಂಗೇರಿ, ನರಸಿಂಹರಾಜಪುರ ಮತ್ತು ಕೊಪ್ಪ ತಾಲ್ಲೂಕುಗಳ ವ್ಯಾಪ್ತಿಗೆ ಬರುವ ಪಂಚಾ ಯಿತಿಗಳಿಗೆ ಹೆಚ್ಚುವರಿಯಾಗಿ ತಮ್ಮ ವಿವೇಚನ ಕೋಟಾದಡಿ ಸಾಮಾನ್ಯ ವರ್ಗದವರಿಗೆ 300 ಮನೆಗಳನ್ನು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 67 ಮನೆಗಳನ್ನು ಮಂಜೂರು ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಶೃಂಗೇರಿ
ಸೂಕ್ತ ಉದ್ಯೋಗ ಪಡೆಯುವುದು ಸವಾಲು

‘ನಮ್ಮ ದೇಶದಲ್ಲಿ ಅನಕ್ಷರತೆ ಮಾಯವಾಗುತ್ತಿದ್ದು, ವಿದ್ಯಾವಂತ ಯುವಕರಿಗೆ ಉದ್ಯೋಗದ ಕೊರತೆಯು ತೀವ್ರವಾಗಿ ಕಾಡುತ್ತಿದೆ. ನಿರುದ್ಯೋಗವು ಸಮಾಜದಲ್ಲಿ ಕೆಟ್ಟ ವಾತಾವರಣ ಸೃಷ್ಟಿಗೆ ಅವಕಾಶ ಕೊಡುತ್ತದೆ'.

18 Jan, 2018
ಕಾಡಾನೆ ದಾಳಿ: ಲಕ್ಷಾಂತರ ಮೌಲ್ಯದ ಬೆಳೆ ನಾಶ

ಚಿಕ್ಕಮಗಳೂರು
ಕಾಡಾನೆ ದಾಳಿ: ಲಕ್ಷಾಂತರ ಮೌಲ್ಯದ ಬೆಳೆ ನಾಶ

18 Jan, 2018

ಚಿಕ್ಕಮಗಳೂರು
97,682 ಮಕ್ಕಳಿಗೆ ಲಸಿಕೆ ಗುರಿ

'ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಘಟಕ ಇರಬೇಕು. ಕೇಂದ್ರಗಳಿಗೆ ಸಿಬ್ಬಂದಿ ತೆರಳಲು ಶಾಲಾ ವಾಹನ ಬಳಕೆ ಮಾಡಬೇಕು. 10 ಕೇಂದ್ರಗಳಿಗೆ ಒಂದರಂತೆ ವಾಹನ ನಿಯೋಜಿಸಬೇಕು'.

18 Jan, 2018
ಪಾದಚಾರಿ ಮಾರ್ಗದಲ್ಲಿ ಆಟೊ ನಿಲ್ದಾಣ!

ನರಸಿಂಹರಾಜಪುರ
ಪಾದಚಾರಿ ಮಾರ್ಗದಲ್ಲಿ ಆಟೊ ನಿಲ್ದಾಣ!

17 Jan, 2018
ರಂಗನಾಥಸ್ವಾಮಿ ರಥೋತ್ಸವ ಇಂದು

ಕಡೂರು
ರಂಗನಾಥಸ್ವಾಮಿ ರಥೋತ್ಸವ ಇಂದು

17 Jan, 2018