ಮಡಿಕೇರಿ

4ರಂದು ಜಿಲ್ಲೆಗೆ ಅಭಯ ಗೋ ಯಾತ್ರೆ ಪ್ರವೇಶ

ಗೋಹತ್ಯೆ ನಿಷೇಧ ಮತ್ತು ಗೋ ತಳಿ ಸಂರಕ್ಷಣೆ ಸಂಬಂಧ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ರಾಜ್ಯದಾದ್ಯಂತ ನಡೆಸುತ್ತಿರುವ ಅಭಯ ಗೋ ಯಾತ್ರೆ ಜ.4ರಂದು ಕೊಡಗು ಪ್ರವೇಶಿಸಲಿದೆ ಎಂದು ಗೋ ಪರಿವಾರ ಕೊಡಗು ಚಾರಿಟಬಲ್ ಟ್ರಸ್ಟಿ ಬಿ.ಕೆ. ಜಗದೀಶ್ ತಿಳಿಸಿದರು.

ಮಡಿಕೇರಿ: ಗೋಹತ್ಯೆ ನಿಷೇಧ ಮತ್ತು ಗೋ ತಳಿ ಸಂರಕ್ಷಣೆ ಸಂಬಂಧ ರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ರಾಜ್ಯದಾದ್ಯಂತ ನಡೆಸುತ್ತಿರುವ ಅಭಯ ಗೋ ಯಾತ್ರೆ ಜ.4ರಂದು ಕೊಡಗು ಪ್ರವೇಶಿಸಲಿದೆ ಎಂದು ಗೋ ಪರಿವಾರ ಕೊಡಗು ಚಾರಿಟಬಲ್ ಟ್ರಸ್ಟಿ ಬಿ.ಕೆ. ಜಗದೀಶ್ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋ ಸಂರಕ್ಷಣೆಯ ಸಂದೇಶ ವನ್ನು ದೇಶಕ್ಕೆ ಸಾರುವಲ್ಲಿ ಅಭಯ ಗೋ ಯಾತ್ರೆ ಮಹತ್ವದ್ದಾಗಿದೆ. ಯಾತ್ರೆಯಲ್ಲಿ 3 ರಥಗಳು ಇದ್ದು. ಕುಶಾಲನಗರದಲ್ಲಿ ಭವ್ಯ ಸ್ವಾಗತ ಕೋರಲಾಗುವುದು. ನಂತರ ಸುಂಟಿಕೊಪ್ಪ, ಮಡಿಕೇರಿ, ವೀರಾಜಪೇಟೆ, ಗೋಣಿಕೊಪ್ಪ, ಚೆಯ್ಯಂಡಾಣೆ, ನೆಲ್ಯಹುದಿಕೇರಿ ಮೂಲಕ ರಥಯಾತ್ರೆ ಸಂಚರಿಸಿ ಸಂಪಾಜೆ ಮೂಲಕ ದಕ್ಷಿಣ ಕನ್ನಡ ಪ್ರವೇಶಿಸಲಿದೆ ಎಂದು ಮಾಹಿತಿ ನೀಡಿದರು.

ಹವ್ಯಕ ವಲಯದ ಕಾರ್ಯದರ್ಶಿ ಜಿ.ಆರ್ ನಾರಾಯಣ್ ಮಾತನಾಡಿ, ಗೋಹತ್ಯೆ ನಿಷೇಧಕ್ಕಾಗಿ ರಾಜ್ಯದಾದ್ಯಂತ 1 ಕೋಟಿ ಸಹಿ ಸಂಗ್ರಹಿಸಿ ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಗಳಿಗೆ ಕಳುಹಿಸಿಕೊಡುವ ಯೋಜನೆಯಿದೆ. ಜಿಲ್ಲೆಯಲ್ಲಿ 2 ಲಕ್ಷ ಸಹಿ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ. ಸಹಿ ಸಂಗ್ರಹಿಸುವ ಸಲುವಾಗಿ ನಾಲ್ಕು ತಂಡಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಗೋ ಪರಿವಾರ ಸದಸ್ಯ ಪ್ರವೀಣ್, ಟ್ರಸ್ಟ್‌ನ ಕಾರ್ಯದರ್ಶಿ ರಾಜಾರಾಮ್ ಉಪಸ್ಥಿತರಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
‘ಸ್ವಚ್ಛ ಪಟ್ಟಣ’ಕ್ಕೆ ಕಸದ ಕಳಂಕ

ಗೋಣಿಕೊಪ್ಪಲು
‘ಸ್ವಚ್ಛ ಪಟ್ಟಣ’ಕ್ಕೆ ಕಸದ ಕಳಂಕ

18 Apr, 2018
ಹಾಕಿ ಟೂರ್ನಿ; 12 ತಂಡ ಮುನ್ನಡೆ

ನಾಪೋಕ್ಲು
ಹಾಕಿ ಟೂರ್ನಿ; 12 ತಂಡ ಮುನ್ನಡೆ

18 Apr, 2018

ಮಡಿಕೇರಿ
ಸಿ.ಎಂ ನಡೆ; ಕಾಂಗ್ರೆಸ್‌ಗೇ ತಿರುಗುಬಾಣ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಕ್ರಮ ಚಟುವ ಟಿಕೆಗೆ ಕಡಿವಾಣ ಹಾಕಿದ್ದೇ ಜೆಡಿಎಸ್‌. ಅದಕ್ಕೆ ಜೆಡಿಎಸ್‌ ಅನ್ನು ಸಿದ್ದರಾಮಯ್ಯ ಟಾರ್ಗೆಟ್‌ ಮಾಡುತ್ತಿದ್ದಾರೆ’ ಎಂದು ಜೆಡಿಎಸ್‌ ರಾಜ್ಯ...

18 Apr, 2018

ಮಡಿಕೇರಿ
ಅನಾರೋಗ್ಯದ ನಡುವೆ ಕುಮಾರಸ್ವಾಮಿ ಪ್ರಚಾರ

ನಿರಂತರ ಪ್ರಚಾರದಲ್ಲಿ ತೊಡಗಿಕೊಂಡಿರುವ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಏರುಪೇರಾಗಿದೆ.

18 Apr, 2018
ಮಡಿಕೇರಿಯಲ್ಲಿ ‘ಬಿಸು ಪರ್ಬ’ ಸಂಭ್ರಮ

ಮಡಿಕೇರಿ
ಮಡಿಕೇರಿಯಲ್ಲಿ ‘ಬಿಸು ಪರ್ಬ’ ಸಂಭ್ರಮ

18 Apr, 2018