ಜಿಲ್ಲಾಧಿಕಾರಿ ಕಾರು ತಡೆಗಟ್ಟಿದ ಬಸಾಪುರ ಗ್ರಾಮಸ್ಥರು, ಪಡಿತರ ಸಮಸ್ಯೆ ತೋಡಿಕೊಂಡ ಜನರು

ಆಹಾರ ಇಲಾಖೆ ಅಧಿಕಾರಿಗಾಗಿ 2 ತಾಸು ಕಾಯ್ದ ಡಿ.ಸಿ

ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಬಸಾಪುರ, ಗೂಗೆಬಾಳ, ಪರಸಾಪುರ ಮತ್ತು ಇರಕಲ್‌ ಗ್ರಾಮಗಳ ಜನರು ಪಡಿತರ ವಿತರಣೆಯಲ್ಲಿನ ಸಮಸ್ಯೆ ಕುರಿತು ಮಾಹಿತಿ ನೀಡಿದರು

ಕವಿತಾಳ: ಕಂದಾಯ ಮತ್ತು ಆಹಾರ ಇಲಾಖೆ ಅಧಿಕಾರಿಗಳ ಬರುವಿಕೆಗಾಗಿ ಜಿಲ್ಲಾಧಿಕಾರಿ ಬಗಾದಿ ಗೌತಮ್‌ ಅವರು ಎರಡು ಗಂಟೆಗೂ ಅಧಿಕ ಸಮಯ ಕಾಯ್ದು ಕುಳಿತ ಪ್ರಸಂಗ ಸಮೀಪದ ಬಸಾಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.

ಮಸ್ಕಿಗೆ ತೆರಳುತ್ತಿದ್ದ ಜಿಲ್ಲಾಧಿಕಾರಿಯವರ ಕಾರು ತಡೆದ ಗ್ರಾಮಸ್ಥರು ಪಡಿತರ ವಿತರಣೆ ಸಮಸ್ಯೆ ಕುರಿತು ಮಾಹಿತಿ ನೀಡಿದರು. ಸಾರ್ವಜನಿಕರ ದೂರು ಆಲಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರು ಆಹಾರ ಇಲಾಖೆ ಅಧಿಕಾರಿ ಅಮರೇಶ ಅವರಿಗೆ ದೂರವಾಣಿ ಕರೆ ಮಾಡಿ ಕೂಡಲೇ ಸ್ಥಳಕ್ಕೆ ಬರುವಂತೆ ಸೂಚಿಸಿದರು. ಅಧಿಕಾರಿ ಸ್ಥಳಕ್ಕೆ ಬರುವ ತನಕ 2 ಗಂಟೆಗೂ ಅಧಿಕ ಸಮಯ ಜಿಲ್ಲಾಧಿಕಾರಿಗಳು ಕಾಯ್ದು ಕುಳಿತರು.

ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಬಸಾಪುರ, ಗೂಗೆಬಾಳ, ಪರಸಾಪುರ ಮತ್ತು ಇರಕಲ್‌ ಗ್ರಾಮಗಳ ಜನರು ಪಡಿತರ ವಿತರಣೆಯಲ್ಲಿನ ಸಮಸ್ಯೆ ಕುರಿತು ಮಾಹಿತಿ ನೀಡಿದರು. ಸ್ಥಳಕ್ಕೆ ತಡವಾಗಿ ಬಂದ ಗ್ರಾಮಲೆಕ್ಕಿಗ ಸದಾಕ್‌ ಅಲಿ ಹಾಗೂ ಆಹಾರ ಇಲಾಖೆಯ ಅಧಿಕಾರಿ ಅಮರೇಶ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಪಡಿತರ ವಿತರಣೆಯಲ್ಲಿನ ಸಮಸ್ಯೆ ಕುರಿತು ಲಿಖಿತ ದೂರು ನೀಡುತ್ತಿದ್ದರೂ ಆಹಾರ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ತಕ್ಷಣ ರದ್ದುಗೊಳಿಸಿ ವ್ಯವಸ್ಥಾಪಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ತಮಗೆ ಲಿಖಿತ ವರದಿ ನೀಡುವಂತೆ ಆಹಾರ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಕ್ರಮ ಕೈಗೊಳ್ಳಲು ಹಿಂದೇಟು ಹಾಕಿದಲ್ಲಿ ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಯವರು ಗ್ರಾಮದಿಂದ ತೆರಳಿದ ನಂತರ ಆಹಾರ ಇಲಾಖೆ ಉಪ ನಿರ್ದೇಶಕ ಪ್ರಭಾಕರ ವಾಲ್ಗದ್‌ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದರು.

***
ದಾಖಲೆಗಳ ಪರಿಶೀಲನೆ ವೇಳೆ ಪಡಿತರ ವಿತರಣೆಯಲ್ಲಿ ಲೋಪಗಳು ಕಂಡು ಬಂದಿವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಸಮರ್ಪಕ ವಿತರಣೆಗೆ ಅನುಕೂಲ ಕಲ್ಪಿಸಲಾಗುವುದು.
-ಡಾ.ಬಗಾದಿ ಗೌತಮ್‌,
ಜಿಲ್ಲಾಧಿಕಾರಿ

Comments
ಈ ವಿಭಾಗದಿಂದ ಇನ್ನಷ್ಟು
ಕವಿತಾಳದಲ್ಲಿ ವಸತಿಸಹಿತ ಪದವಿ ಕಾಲೇಜು: ಬೋಸರಾಜು

ಕವಿತಾಳ
ಕವಿತಾಳದಲ್ಲಿ ವಸತಿಸಹಿತ ಪದವಿ ಕಾಲೇಜು: ಬೋಸರಾಜು

24 Jan, 2018

ರಾಯಚೂರು
ನಗರಸಭೆಯಿಂದ ನೋಡಲ್‌ ಅಧಿಕಾರಿ ನೇಮಿಸಿ

ಮಾನ್ವಿ ತಾಲ್ಲೂಕಿನ ಜೀನೂರಲ್ಲಿ ಅಕ್ರಮ ಮರಳು ಸಾಗಣೆಗೆ ಸಂಬಂಧಪಟ್ಟ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಜೀನೂರಿಗೆ ಹೋಗಿ ಐದು ಟಿಪ್ಪರ್‌ಗಳನ್ನು ಹಿಡಿದು, ಕ್ರಮ ಜರುಗಿಸಿ...

24 Jan, 2018

ಶಕ್ತಿನಗರ
ನಾಲ್ವರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

ದೇವಸೂಗೂರಿನ ಸೂಗೂರೇಶ್ವರ ಶಿಕ್ಷಣ ಸಂಸ್ಥೆಯ ಶಾಲೆ ಹಾಗೂ ಕಾಲೇಜಿನ ಸಿಬ್ಬಂದಿಯ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕೈಗೊಂಡಿರುವ ಅನಿರ್ದಿಷ್ಟ ಉಪವಾಸ ಧರಣಿಯಲ್ಲಿ ನಾಲ್ವರು ಅಸ್ವಸ್ಥರಾಗಿದ್ದಾರೆ. ...

24 Jan, 2018
ಸಂಶೋಧನೆಯಿಂದ ರೈತರಿಗೆ ಲಾಭ

ರಾಯಚೂರು
ಸಂಶೋಧನೆಯಿಂದ ರೈತರಿಗೆ ಲಾಭ

23 Jan, 2018
ಉದ್ಯಮಗಳಿಗೆ ಸಹಕರಿಸದ ಬ್ಯಾಂಕುಗಳು

ರಾಯಚೂರು
ಉದ್ಯಮಗಳಿಗೆ ಸಹಕರಿಸದ ಬ್ಯಾಂಕುಗಳು

23 Jan, 2018