ಎರಡು ವರ್ಷದ ಬಳಿಕ ದುರಸ್ತಿ ಪೂರ್ಣ

ಮತ್ತೆ ಮೈದುಂಬಿದ ಬಂಡ್ರಿ ದೊಡ್ಡ ಕೆರೆ

ಸಂಡೂರು ತಾಲ್ಲೂಕಿನ ಬಂಡ್ರಿ ದೊಡ್ಡ ಕೆರೆ ಎರಡು ವರ್ಷದ ಬಳಿಕ ಮತ್ತೆ ಮೈದುಂಬಿದೆ.

ಸಂಡೂರು ತಾಲ್ಲೂಕಿನ ಬಂಡ್ರಿ ಗ್ರಾಮದ ದೊಡ್ಡ ಕೆರೆ 2015ರ ಸಪ್ಟೆಂಬರ್ ತಿಂಗಳಲ್ಲಿ ಒಡೆದ ಸಂದರ್ಭ,

ಸಂಡೂರು: ತಾಲ್ಲೂಕಿನ ಬಂಡ್ರಿ ದೊಡ್ಡ ಕೆರೆ ಎರಡು ವರ್ಷದ ಬಳಿಕ ಮತ್ತೆ ಮೈದುಂಬಿದೆ.

2015ರ ಸೆಪ್ಟೆಂಬರ್‌ನಲ್ಲಿ ಅಪಾರ ಮಳೆಯಿಂದಾಗಿ ಕೆರೆಯ ಒಂದು ಭಾಗ ಒಡೆದು ನೀರು ಪೋಲಾಗಿ ಸುತ್ತಮುತ್ತಲಿನ ಪ್ರದೇಶದ ಬೆಳೆ ನಷ್ಟಕ್ಕೂ ದಾರಿ ಮಾಡಿತ್ತು. ದುರಸ್ತಿಯ ನಂತರ ಬಿದ್ದ ಉತ್ತಮ ಮಳೆಯಿಂದಾಗಿ ಕೆರೆಯು ಮೈದುಂಬಿಕೊಂಡು ನೋಡುಗರನ್ನು ಆಕರ್ಷಿಸುತ್ತಿದೆ. ಗ್ರಾಮಸ್ಥರಲ್ಲೂ ಹರ್ಷವನ್ನುಂಟು ಮಾಡಿದೆ.

ಜಿಲ್ಲಾ ಪಂಚಾಯಿತಿಗೆ ಸೇರಿದ ಕೆರೆಯನ್ನು ಲೋಕೋಪಯೋಗಿ ಇಲಾಖೆಯ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕರ 2016–17ನೇ ಸಾಲಿನ ವಿಶೇಷ ಅನುದಾನ ಸೇರಿ ಒಟ್ಟು ₹1.75 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಒಡೆದ ಭಾಗವನ್ನಲ್ಲದೆ, ಕೆರೆಯ ಏರಿ, ತೂಬು, ಕೋಡಿಯನ್ನು ಕೂಡ ಅಭಿವೃದ್ಧಿ ಪಡಿಸಲಾಗಿದೆ.

ಅಂತರ್ಜಲ ಹೆಚ್ಚಳ: ಹೆಚ್ಚಿನ ನೀರು ಸಂಗ್ರಹವಾಗಿರುವುದರಿಂದ ಕೆರೆಯ ಸುತ್ತಲಿನ ಬಂಡ್ರಿ, ಕೋಡಳ್ಳಿ, ಗೊಲ್ಲರಹಟ್ಟಿ ಮುಂತಾದ ಭಾಗಗಳಲ್ಲಿ ಬೇಸಿಗೆಯಲ್ಲಿ ಸ್ಥಗಿತಗೊಂಡಿದ್ದ ಕೊಳವೆ ಬಾವಿಗಳೆಲ್ಲಾ ಈಗ ಮರುಪೂರಣಗೊಂಡಿವೆ.

‘ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಈ ಭಾಗದಲ್ಲಿ ನೀರಿನ ತೊಂದರೆ ತಪ್ಪಿದೆ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಬಂಡ್ರಿ ಗ್ರಾಮಸ್ಥ ಹನುಮಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಮೀನುಗಾರಿಕೆಗೂ ಅನುಕೂಲ: ಕೆರೆಯಲ್ಲಿ ನೀರು ತುಂಬಿರುವುದು ಮೀನುಗಾರಿಕೆಗೂ ಅನುಕೂಲವಾಗಿದೆ. ಇಲ್ಲಿ ಮೀನುಗಾರಿಕೆ ನಡೆಸಲು ವಾರ್ಷಿಕ ₹3.01 ಲಕ್ಷಕ್ಕೆ ಗುತ್ತಿಗೆ ನೀಡಲಾಗಿದೆ.

‘ಕೃಷಿ ಮತ್ತು ದನಕರುಗಳಿಗೂ ಹೆಚ್ಚು ಅನುಕೂಲವಾಗಿದೆ’ ಎಂದು ಬಂಡ್ರಿ ಗ್ರಾಮ ಪಂಚಾಯ್ತಿ ಸದಸ್ಯ ಕೆ. ನಾಗರಾಜ್ ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು

ಕಂಪ್ಲಿ
ಸಂಭ್ರಮದ ವಾಸವಿ ಜಯಂತ್ಯುತ್ಸವ

ಕಂಪ್ಲಿಯಲ್ಲಿ ವಾಸವಿ ಕಲ್ಯಾಣಮಂಟಪದಲ್ಲಿ ಬುಧವಾರ ವಾಸವಿ ಜಯಂತ್ಯುತ್ಸವ  ನಡೆಯಿತು.

26 Apr, 2018

ಬಳ್ಳಾರಿ
ಬಳ್ಳಾರಿ ಹೊರಗಿದ್ದೇ ಜಿಲ್ಲೆಯ ಮುಖಂಡರೊಂದಿಗೆ ಜನಾರ್ದನರೆಡ್ಡಿ ಸಭೆ!

ಬಳ್ಳಾರಿ ಜಿಲ್ಲೆಯ ಬಿಜೆಪಿ ಚುನಾವಣಾ ರಾಜಕೀಯ ಮೊಳಕಾಲ್ಮುರು ಗಡಿಭಾಗಕ್ಕೆ ಸ್ಥಳಾಂತರಗೊಂಡಿದೆ.ಜಿಲ್ಲೆ ಪ್ರವೇಶಿಸುವುದಕ್ಕೆ ಅನುಮತಿ ಇಲ್ಲವಾದ್ದರಿಂದ ಬಳ್ಳಾರಿ ಮತ್ತು ಮೊಳಕಾಲ್ಮುರು ಗಡಿಭಾಗದಲ್ಲಿ ವಾಸ್ತವ್ಯ ಹೂಡಿರುವ ಜಿ.ಜನಾರ್ದನ...

26 Apr, 2018
ತಾಯಣ್ಣ ಮಗನಿಗೆ ಜೆಡಿಎಸ್‌ ಟಿಕೆಟ್‌!

ಬಳ್ಳಾರಿ
ತಾಯಣ್ಣ ಮಗನಿಗೆ ಜೆಡಿಎಸ್‌ ಟಿಕೆಟ್‌!

25 Apr, 2018

ಹೂವಿನಹಡಗಲಿ
ಓದೋ ಗಂಗಪ್ಪ ಹೊತ್ತು ಬಂದ ಬೆಂಬಲಿಗರು

ಹಡಗಲಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಓದೋ ಗಂಗಪ್ಪ ಮಂಗಳವಾರ ನಾಮಪತ್ರ ಸಲ್ಲಿಸಿದರು.

25 Apr, 2018

ಕಂಪ್ಲಿ
ಮೀನುಗಾರರಿಂದ ಕಠಿಣ ಹರಕೆ ಸಮರ್ಪಣೆ

ಕಂಪ್ಲಿ ಕೋಟೆ ತುಂಗಭದ್ರಾದೇವಿ ಮೀನುಗಾರರ ಕಾಲೊನಿ ಕಾಳಮ್ಮದೇವಿ ಗಂಗಾಸ್ಥಳ ಪೂಜಾ ಮಹೋತ್ಸವದ ಅಂಗವಾಗಿ ಮಂಗಳವಾರ ಮೀನುಗಾರರು ವಿಶಿಷ್ಟ ಹರಕೆಗಳನ್ನು ಭಕ್ತಿ ಭಾವದಿಂದ ತೀರಿಸಿದರು.

25 Apr, 2018