ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹ,ಪ್ರೀತಿ,ನಿಷ್ಠೆಯ ಸಂಕೇತ ಶ್ವಾನ

ಶ್ವಾನ ಪ್ರದರ್ಶನ ಉದ್ಘಾಟನೆ: ಸಚಿವ ಪ್ರಮೋದ್ ಮಧ್ವರಾಜ್
Last Updated 1 ಜನವರಿ 2018, 12:22 IST
ಅಕ್ಷರ ಗಾತ್ರ

ಉಡುಪಿ: ‘ಬದುಕಿನ ಭದ್ರತೆ ಜೊತೆಗೆ ನಿಷ್ಠೆ, ಸ್ನೇಹಕ್ಕೆ ಶ್ವಾನಗಳು ಹೆಸರುವಾಸಿಯಾಗಿವೆ’ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ಉಡುಪಿ ಪರ್ಬದ ಅಂಗವಾಗಿ ಜಿಲ್ಲಾಡಳಿತ, ರಾಜ್ಯ ಪಶು ವೈದ್ಯಕೀಯ, ಜಿಲ್ಲಾ ಪ್ರಾಣಿ ದಯಾ ಸಂಘ ಸಹ ಯೋಗದಲ್ಲಿ ಭಾನುವಾರ ಆಯೋಜಿದ್ದ ಶ್ವಾನ ಪ್ರದರ್ಶನ 2017 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನವ ಸಹೋದ್ಯೋಗಿಗಳು ಮತ್ತು ಬಂಧುಗಳೊಂದಿಗೆ ಸ್ನೇಹದ ಭಾವನೆಯನ್ನು ತೊರೆಯುತ್ತಿದ್ದಾನೆ. ನಾಯಿಗಳು ಜೀವನ ಸಂಗಾತಿಯ ಸ್ನೇಹವನ್ನು ನೀಡುವುದರ ಜೊತೆಗೆ ಬದುಕಿಗೆ ಭದ್ರತೆ ನೀಡುತ್ತವೆ ಎಂದು ಅಭಿಪ್ರಾಯಪಟ್ಟರು.

ಪ್ರದರ್ಶನದಲ್ಲಿ ಉಡುಪಿ, ಮಂಗಳೂರು ಕುಂದಾಪುದಿಂದ ಗ್ರೇಟ್‌ಡೇನ್‌, ಲ್ಯಾಬ್ರಡಾಲ್, ಜರ್ಮನ್ ಶೆಫರ್ಡ್, ಡಾಬರ್ ಮನ್, ಮುಧೋಳ, ರಾಟ್ ವೀಲರ್, ಡಾಲ್ಮೀಶನ್, ಪಗ್, ಗೋಲ್ಡನ್ ರಿಟ್ರೀವಲ್, ಅಮೆರಿಕನ್‌ ಪಿಟ್‌ಬೂಲ್‌, ಬೆಗಲ್‌, ಬಾಕ್ಸರ್‌, ಬುಲ್‌ ಡಾಗ್‌, ಸೆಂಟರ್‌ ಏಷಿಯನ್‌ ಶೆಫರ್ಡ್‌ , ಡಾಲ್‌ಮಟೀನ್‌, ಸೇರಿದಂತೆ ವಿವಿಧ ನಾಯಿಗಳು ಜನರನ್ನು ಆಕರ್ಷಿಸಿವೆ. ಸುಮಾರು 28 ದೇಶಿ ವಿದೇಶಿ ತಳಿಯ 150 ನಾಯಿಗಳು ಇದ್ದವು. ಗೋಲ್ಡನ್ ರಿಟ್ರೀವರ್ ತಳಿ ಶ್ವಾನ ಚಾಂಪಿ ಯನ್ ಶ್ವಾನ 2017 ಪಟ್ಟವನ್ನು ತನ್ನದಾಗಿ ಸಿಕೊಂಡಿತು. ನಗರಸಭೆ ಅಧ್ಯಕ್ಷ ಮೀನಾಕ್ಷಿ ಮಾಧವಾ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಸಿಇಒ ಶಿವಾನಂದ ಕಾಪಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧ , ಪಶು ವೈದ್ಯಕೀಯ ಅಧಿಕಾರಿ ಮಸವೋತ್ತಮ ಉಡುಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT