ಕಣಕಾಲ ಗ್ರಾಮದಲ್ಲಿ ‘ವಿಕಾಸಕ್ಕಾಗಿ ಜಾನಪದ’ ಕಾರ್ಯಕ್ರಮ

‘ಜಾನಪದ ಕಲೆಯನ್ನು ಉಳಿಸಬೇಕಿದೆ’

‘ಇಂದು ಅಧುನಿಕ ಭರಾಟೆಯಲ್ಲಿ ನಾವು ಪೂರ್ವಜರ ಜಾನಪದ ಕಲೆ ಯನ್ನು ಮರೆಯುತ್ತಿದ್ದೆವೆ. ಉತ್ತರ ಕರ್ನಾಟಕದ ಜಾನಪದದ ಸೊಗಡು ಬೇರೆ ಯಾವ ಭಾಷೆಯಲ್ಲೂ ಇಲ್ಲ. ಮರೆಯಾಗುತ್ತಿರುವ ಹಂತಿಪದ, ಜೋಗುಳ ಪದ, ಗೀಗಿ ಪದಗಳು ಸೇರಿದಂತೆ ವಿವಿಧ ಜಾನಪದ ಕಲೆಗಳ ಬಗ್ಗೆ ಯುವಕರು ಹೆಚ್ಚಿನ ಆಸಕ್ತಿ ವಹಿಸಬೇಕಾದ ಅಗತ್ಯತೆ ಇದೆ’

ಬಸವನಬಾಗೇವಾಡಿ: ‘ಜಾನಪದ ಕಲೆಯು ನಮ್ಮ ಹಿರಿಯರು ಬಿಟ್ಟು ಹೋಗಿರುವ ಶ್ರೇಷ್ಠ ಕಲೆಯಾಗಿದೆ. ಅದನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕಿದೆ’ ಎಂದು ಹೆಸ್ಕಾಂ ಇಲಾಖೆಯ ಲೆಕ್ಕಪರಿಶೋಧನಾಧಿಕಾರಿ ಎಸ್.ಡಿ. ಕೃಷ್ಣಮೂರ್ತಿ ಹೇಳಿದರು.

ತಾಲ್ಲೂಕಿನ ಕಣಕಾಲ ಗ್ರಾಮದ ನ್ಯೂ ಹೈಸ್ಕೂಲ್‌ ಆವರಣದಲ್ಲಿ ಕನ್ನಡ ಜಾನಪದ ಪರಿಷತ್‌ ಈಚೆಗೆ ಹಮ್ಮಿಕೊಂಡಿದ್ದ ವಿಕಾಸಕ್ಕಾಗಿ ಜಾನಪದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದು ಅಧುನಿಕ ಭರಾಟೆಯಲ್ಲಿ ನಾವು ಪೂರ್ವಜರ ಜಾನಪದ ಕಲೆ ಯನ್ನು ಮರೆಯುತ್ತಿದ್ದೆವೆ. ಉತ್ತರ ಕರ್ನಾಟಕದ ಜಾನಪದದ ಸೊಗಡು ಬೇರೆ ಯಾವ ಭಾಷೆಯಲ್ಲೂ ಇಲ್ಲ. ಮರೆಯಾಗುತ್ತಿರುವ ಹಂತಿಪದ, ಜೋಗುಳ ಪದ, ಗೀಗಿ ಪದಗಳು ಸೇರಿದಂತೆ ವಿವಿಧ ಜಾನಪದ ಕಲೆಗಳ ಬಗ್ಗೆ ಯುವಕರು ಹೆಚ್ಚಿನ ಆಸಕ್ತಿ ವಹಿಸಬೇಕಾದ ಅಗತ್ಯತೆ ಇದೆ’ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಜಿ.ಕೆ.ದಿನ್ನಿ, ‘ದೂರದರ್ಶನ, ಮೊಬೈಲ್‌ಗಳ ಅಬ್ಬರದಲ್ಲಿ ಜಾನಪದ ಕಲೆಯ ಮಹತ್ವವನ್ನು ಮರೆಯು
ತ್ತಿದ್ದೇವೆ. ಜಾನಪದಲ್ಲಿ ಸತ್ವಯುತವಾದ ಪದಗಳಿವೆ. ಅವುಗಳ ಮಹತ್ವ ಅರಿಯಬೇಕು’ ಎಂದು ಹೇಳಿದರು.

ಕಜಾಪ ತಾಲ್ಲೂಕು ಘಟಕದ ಅಧ್ಯಕ್ಷ ದೇವೇಂದ್ರ ಗೋನಾಳ, ವೈ.ಎಸ್.ಗಂಗಶೆಟ್ಟಿ, ಎಸ್.ಐ. ಬಿರಾದಾರ ಮಾತನಾಡಿದರು. ಎನ್.ಎಸ್.ಹೂಗಾರ, ನಾಗೇಶ ನಾಗೂರ ವೇದಿಕೆಯಲ್ಲಿದ್ದರು. ಚನ್ನಮ್ಮ ಈಳಗೇರ ಹಾಗೂ ಸಂಗಡಿಗರು ಪ್ರಾರ್ಥನಾಗೀತೆ ಹಾಡಿದರು. ಎಸ್.ಆರ್. ಮಠ ಸ್ವಾಗತಿಸಿದರು, ಬಿ.ಎಚ್. ಬಾಗವಾನ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಮಾನಪ್ಪ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.

Comments
ಈ ವಿಭಾಗದಿಂದ ಇನ್ನಷ್ಟು
₹ 2 ಕೋಟಿಗೂ ಹೆಚ್ಚಿನ ವಹಿವಾಟು.. ?

ವಿಜಯಪುರ
₹ 2 ಕೋಟಿಗೂ ಹೆಚ್ಚಿನ ವಹಿವಾಟು.. ?

22 Jan, 2018

ತಾಳಿಕೋಟೆ
ಯಂತ್ರಗಳ ಬಂದ ಮೇಲೆ ಸುಗ್ಗಿಯ ಸಂಭ್ರಮ ಕಣ್ಮರೆ

ರಾಶಿ ಮಾಡುವ ಯಂತ್ರಗಳು ಬಂದ ಮೇಲೆ ರೈತರ ಸುಗ್ಗಿಯ ಸಂಭ್ರಮ ಕಣ್ಮರೆಯಾಗುತ್ತಿದೆ ಎಂದು ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್.ನಾಡಗೌಡ(ಅಪ್ಪಾಜಿ) ವಿಷಾಧ ವ್ಯಕ್ತಪಡಿಸಿದರು. ...

22 Jan, 2018
ಮೈಸೂರು ಸೋಪ್‌ ಸಂತೆಗೆ ಜನಸಾಗರ!

ವಿಜಯಪುರ
ಮೈಸೂರು ಸೋಪ್‌ ಸಂತೆಗೆ ಜನಸಾಗರ!

20 Jan, 2018

ನಿಡಗುಂದಿ
ಕಲಗುರ್ಕಿಯಲ್ಲಿ ಜನಪದ ಸಂಸ್ಕೃತಿ ಉತ್ಸವ

ರಾಚಯ್ಯ ಸ್ವಾಮಿ ಹಿರೇಮಠ, ಡಾ.ವಿಶ್ವನಾಥ ಮಠ, ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ರೀದೇವಿ ಐಹೊಳ್ಳಿ, ತಾಲ್ಲೂಕು ಪಂಚಾಯ್ತ ಸದಸ್ಯೆ ಲಕ್ಷ್ಮೀಬಾಯಿ ಕಸನಕ್ಕಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ...

20 Jan, 2018

ದೇವರಹಿಪ್ಪರಗಿ
ರಾಣಿ ಚನ್ನಮ್ಮ ಜಯಂತ್ತುತ್ಸವ, ಕಿತ್ತೂರು ವಿಜಯೋತ್ಸವ ಇಂದು

ಸಮೀಪದ ಮುಳಸಾವಳಗಿ ಗ್ರಾಮದಲ್ಲಿ ಜ. 20ರ ಶನಿವಾರ ಪಂಚಮಸಾಲಿ ಸಮಾಜದ ಆಶ್ರಯದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ, 194ನೇ ಕಿತ್ತೂರು ವಿಜಯೋತ್ಸವ ಹಾಗೂ ಸಂಗೊಳ್ಳಿ...

20 Jan, 2018