ರಾಣಿ ಮುಖರ್ಜಿಗೆ ಫ್ಯಾಷನ್‌ ಸೆನ್ಸ್‌ ಇಲ್ವಾ?

ರಾಣಿ ಮುಖರ್ಜಿ ಇತ್ತೀಚೆಗೆ ವೋಗ್‌ ಬಿಎಫ್‌ಎಫ್‌ ರಿಯಾಲಿಟಿ ಷೋದ ಚಿತ್ರೀಕರಣಕ್ಕೆ ತೆರಳುತ್ತಿದ್ದಾಗ ಅವರು ತೊಟ್ಟಿದ್ದ ಪ್ಯಾಂಟ್‌ ಹಾಗೂ ಧರಿಸಿದ್ದ ಚಪ್ಪಲಿಯನ್ನು ಅಭಿಮಾನಿಗಳು ನೋಡಿ ‘ರಾಣಿಗೆ ಫ್ಯಾಷನ್‌ ಸೆನ್ಸ್‌ ಇಲ್ಲ’ ಎಂದು ದೂರಿದ್ದಾರೆ.

ರಾಣಿ ಮುಖರ್ಜಿಗೆ ಫ್ಯಾಷನ್‌ ಸೆನ್ಸ್‌ ಇಲ್ವಾ?

ಮದುವೆಯಾದ ಬಳಿಕ ಬಾಲಿವುಡ್‌ನಿಂದ ದೂರವಾಗಿದ್ದ ನಟಿ ರಾಣಿ ಮುಖರ್ಜಿ‌ ಹೃದಯ ಮಿಡಿಯುವ ಕತೆಯುಳ್ಳ ‘ಹಿಚ್ಕಿ’ ಚಿತ್ರದ ಮೂಲಕ ನಟನೆಗೆ ವಾಪಸಾಗುತ್ತಿದ್ದಾರೆ.

ಸಿನಿಮಾಗಳಲ್ಲಿ ತಮ್ಮ ನಟನಾ ಚಾತುರ್ಯ, ಸೌಂದರ್ಯದಿಂದ ಅಭಿಮಾನಿಗಳ ಹೃದಯ ಗೆದ್ದಾಕೆಗೆ ನಿಜಜೀವನದಲ್ಲಿ ಫ್ಯಾಷನ್‌ ಸೆನ್ಸ್‌ ಇಲ್ಲ ಎಂಬ ಮಾತು ಮುಂಚಿನಿಂದಲೂ ಕೇಳಿಬರುತ್ತಿತ್ತು. ಈಗ ಇಂಥ ಮಾತುಗಳು ಮತ್ತೊಮ್ಮೆ ಹರಿದಾಡುತ್ತಿವೆ.

ರಾಣಿ ಮುಖರ್ಜಿ ಇತ್ತೀಚೆಗೆ ವೋಗ್‌ ಬಿಎಫ್‌ಎಫ್‌ ರಿಯಾಲಿಟಿ ಷೋದ ಚಿತ್ರೀಕರಣಕ್ಕೆ ತೆರಳುತ್ತಿದ್ದಾಗ ಅವರು ತೊಟ್ಟಿದ್ದ ಪ್ಯಾಂಟ್‌ ಹಾಗೂ ಧರಿಸಿದ್ದ ಚಪ್ಪಲಿಯನ್ನು ಅಭಿಮಾನಿಗಳು ನೋಡಿ ‘ರಾಣಿಗೆ ಫ್ಯಾಷನ್‌ ಸೆನ್ಸ್‌ ಇಲ್ಲ’ ಎಂದು ದೂರಿದ್ದಾರೆ.

ಇಟ್ಟಿಗೆ ಬಣ್ಣದ ಹಾಫ್‌ ಶೋಲ್ಡರ್‌ ಟಾಪ್‌ ಹಾಗೂ ಬೂದು ಬಣ್ಣದ ಮುಕ್ಕಾಲು ಪ್ಯಾಂಟ್‌ ತೊಟ್ಟಿದ್ದರು. ಇಳಿ ಬಿದ್ದ ಉದ್ದನೆಯ ಕಿವಿಯೋಲೆ, ಸನ್‌ಗ್ಲಾಸ್‌, ಹೈಹೀಲ್ಡ್‌ ಚಪ್ಪಲಿ ಧರಿಸಿದ್ದರು. ಈ ಬಟ್ಟೆ ಹಾಗೂ ಚಪ್ಪಲಿ ಬಗ್ಗೆ ‘ಒಂದಕ್ಕೊಂದು ಹೊಂದಿಕೆಯಿಲ್ಲ. ನಟಿಯಾಗಿ ಡ್ರೆಸ್‌ಸೆನ್ಸ್‌ ಇಲ್ಲವೇ’ ಎಂದು ಅಭಿಮಾನಿಗಳು ಟೀಕಿಸಿದ್ದರು.

ರಾಣಿ ಧರಿಸಿದ್ದ ಚಪ್ಪಲಿಯ ಬೆಲೆ ₹80 ಸಾವಿರ. ಈ ಚಪ್ಪಲಿಯನ್ನು ವಿನ್ಯಾಸ ಮಾಡಿದ್ದು ಮೊನೊಬ್ಲಹ್ನಿಕ್‌ ಕಂಪೆನಿ. ಈ ಕಂಪೆನಿಯೇ ಹಾಲಿವುಡ್‌ ನಟಿಯರಾದ ಸಾರಾ ಜೆಸ್ಸಿಕಾ ಪಾರ್ಕರ್‌, ಬಿಯಾನ್ಸ್ ಮೊದಲಾದವರಿಗೆ ಚಪ್ಪಲಿ ವಿನ್ಯಾಸ ಮಾಡಿತ್ತು.

‘ರಾಣಿ ಮುಖರ್ಜಿ ಅಷ್ಟೊಂದು ದುಡ್ಡು ಕೊಟ್ಟು ಚಪ್ಪಲಿ ಖರೀದಿಸಿದ್ದಾರೆ. ಆದ್ರೆ ಸ್ವಲ್ಪ ತನ್ನ ಕಾಲಿಗೆ ಅಂದಕಾಣುವ ಚಪ್ಪಲಿ ಆರಿಸಬೇಕಿತ್ತು’ ಎಂಬ ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 

Comments
ಈ ವಿಭಾಗದಿಂದ ಇನ್ನಷ್ಟು
ಹಿಮ್ಮುಖ ಓಟದಿಂದ  ಎಷ್ಟೊಂದು ಲಾಭ

ಗುಲ್‌ಮೊಹರ್
ಹಿಮ್ಮುಖ ಓಟದಿಂದ ಎಷ್ಟೊಂದು ಲಾಭ

23 Jan, 2018
ಮನಸಿನಂತೆ ಕನಸು

ಗುಲ್‌ಮೊಹರ್
ಮನಸಿನಂತೆ ಕನಸು

23 Jan, 2018
ಚೆಲುವೆಯ ಸೌಂದರ್ಯ ಗುಟ್ಟು

ಗುಲ್‌ಮೊಹರ್
ಚೆಲುವೆಯ ಸೌಂದರ್ಯ ಗುಟ್ಟು

23 Jan, 2018
ದೀಪಾವಳಿಗೆ ‘ತಲಪತಿ 62’

ಗುಲ್‌ಮೊಹರ್
ದೀಪಾವಳಿಗೆ ‘ತಲಪತಿ 62’

23 Jan, 2018
ಒರಟು ವ್ಯಕ್ತಿಯ  ಸಂಗೀತ ಶಕ್ತಿ

ಪ್ರೇರಣೆ
ಒರಟು ವ್ಯಕ್ತಿಯ ಸಂಗೀತ ಶಕ್ತಿ

22 Jan, 2018