ಹೊಸ ಸುತ್ತೋಲೆ

ರಿಟರ್ನ್ಸ್‌: ಸಮರ್ಪಕ ಮಾಹಿತಿ ನೀಡಲು ನಿಯಮ ಸಡಿಲು

ಈ ನಿಯಮ ಸಡಿಲಿಕೆಯಿಂದ ವಹಿವಾಟುದಾರರು ದಂಡ ಪಾವತಿಸುವ ಭೀತಿ ಇಲ್ಲದೇ ಸಮರ್ಪಕ ಲೆಕ್ಕಪತ್ರ ವಿವರ ಸಲ್ಲಿಸಲು ಸಾಧ್ಯವಾಗಲಿದೆ. ಜಿಎಸ್‌ಟಿ ಲೆಕ್ಕ ಹಾಕುವಾಗ ಮಾಡಿದ ತಪ್ಪುಗಳನ್ನು ಸರಿಪಡಿಸಿ ತೆರಿಗೆ ಮರುಪಾವತಿಗೆ ಬೇಡಿಕೆಯನ್ನೂ ಸಲ್ಲಿಸಬಹುದಾಗಿದೆ.

ರಿಟರ್ನ್ಸ್‌: ಸಮರ್ಪಕ ಮಾಹಿತಿ ನೀಡಲು ನಿಯಮ ಸಡಿಲು

ನವದೆಹಲಿ: ಉದ್ದಿಮೆ ಸಂಸ್ಥೆಗಳು, ವಹಿವಾಟುದಾರರು ಪ್ರತಿ ತಿಂಗಳೂ ಸಲ್ಲಿಸುವ ‘ಜಿಎಸ್‌ಟಿಆರ್‌–3ಬಿ’ನಲ್ಲಿನ ದೋಷಪೂರಿತ ಮಾಹಿತಿ ಸರಿಪಡಿಸಲು ಹಣಕಾಸು ಸಚಿವಾಲಯವು ಅವಕಾಶ ಮಾಡಿಕೊಟ್ಟಿದೆ.

ಈ ನಿಯಮ ಸಡಿಲಿಕೆಯಿಂದ ವಹಿವಾಟುದಾರರು ದಂಡ ಪಾವತಿಸುವ ಭೀತಿ ಇಲ್ಲದೇ ಸಮರ್ಪಕ ಲೆಕ್ಕಪತ್ರ ವಿವರ ಸಲ್ಲಿಸಲು ಸಾಧ್ಯವಾಗಲಿದೆ. ಜಿಎಸ್‌ಟಿ ಲೆಕ್ಕ ಹಾಕುವಾಗ ಮಾಡಿದ ತಪ್ಪುಗಳನ್ನು ಸರಿಪಡಿಸಿ ತೆರಿಗೆ ಮರುಪಾವತಿಗೆ ಬೇಡಿಕೆಯನ್ನೂ ಸಲ್ಲಿಸಬಹುದಾಗಿದೆ.

ಜಿಎಸ್‌ಟಿ ಜಾರಿಗೆ ಬಂದ ನಂತರ ಹೊಸ ತೆರಿಗೆ ಪಾವತಿಸುವುದನ್ನು ಲೆಕ್ಕ ಹಾಕಲು ವಹಿವಾಟುದಾರರು ಸಾಕಷ್ಟು ತೊಂದರೆ ಎದುರಿಸಿದ್ದರು. ತೆರಿಗೆ ಪಾವತಿಸುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಸಡಿಲುಗೊಳಿಸಲು ಕೈಗಾರಿಕಾ ಸಂಘಟನೆಗಳು ನಿರಂತರವಾಗಿ ಹಕ್ಕೊತ್ತಾಯ ಮಂಡಿಸುತ್ತಲೇ ಬಂದಿದ್ದವು.

ಹಿಂದಿನ ತಿಂಗಳಲ್ಲಿ ಪಾವತಿಸಿದ ತೆರಿಗೆ ವಿವರಗಳನ್ನು ಒಳಗೊಂಡ ‘ಜಿಎಸ್‌ಟಿಆರ್‌–3ಬಿ’ ಅನ್ನು ವರ್ತಕರು ಪ್ರತಿ ತಿಂಗಳ 20ರಂದು ಸಲ್ಲಿಸಬೇಕಾಗುತ್ತಿತ್ತು.

ಹೊಸ ಸುತ್ತೋಲೆ ಪ್ರಕಾರ, ಎಲ್ಲ ಲೆಕ್ಕಪತ್ರ ವಿವರಗಳನ್ನು ಅದೇ ತಿಂಗಳ ‘ಜಿಎಸ್‌ಟಿಆರ್‌–3ಬಿ’ ಮತ್ತು ‘ಜಿಎಸ್‌ಟಿಆರ್‌–1’ ಮೂಲಕ ಸರಿಪಡಿಸಬಹುದಾಗಿದೆ.

ಹಣಕಾಸು ಸಚಿವಾಲಯ ಹೊರಡಿಸಿರುವ ಈ ಸುತ್ತೋಲೆಯು ತಮ್ಮ ಜಿಎಸ್‌ಟಿ ರಿಟರ್ನ್‌ನಲ್ಲಿ ಬದಲಾವಣೆ ತರಲು ಪರಿಶ್ರಮಪಡುತ್ತಿದ್ದ ವಹಿವಾಟುದಾರರಿಗೆ ನೆಮ್ಮದಿ ಮೂಡಿಸಲಿದೆ ಎಂದು ತೆರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ರಿಟರ್ನ್ ಸಲ್ಲಿಕೆ ಅವಧಿಯನ್ನು ಕೇವಲ 10 ದಿನಗಳವರೆಗೆ ವಿಸ್ತರಿಸುವುದರಿಂದ ಹೆಚ್ಚಿನ ಪ್ರಯೋಜನವೇನೂ ಆಗುವುದಿಲ್ಲ. ರಿಟರ್ನ್ ಸಲ್ಲಿಕೆ ಸರಳಗೊಳಿಸುವ ಕೆಲಸ ಆಗಬೇಕು ಎಂದು ವರ್ತಕರು ಒತ್ತಾಯಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಅರ್ನ್ಸ್ಟ್‌ ಆ್ಯಂಡ್‌ ಯಂಗ್‌ ಸಮೀಕ್ಷೆ
ಆದಾಯ ತೆರಿಗೆ ವಿನಾಯ್ತಿ ಸಾಧ್ಯತೆ: ‘ಇವೈ’ ಸಮೀಕ್ಷೆ

2018–19ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ಆದಾಯ ತೆರಿಗೆ ಹಂತ ಮತ್ತು ದರಗಳನ್ನು ಕೇಂದ್ರ ಸರ್ಕಾರವು ತಗ್ಗಿಸುವ ಸಾಧ್ಯತೆ ಇದೆ ಎಂದು ತೆರಿಗೆ ಸಲಹಾ ಸಂಸ್ಥೆ...

22 Jan, 2018
 ಕಾಂತೀಯ ಕ್ಷೇತ್ರ ಬಳಸಿ ನ್ಯಾನೊಕಣ ಚಲನೆ

ವಿಜ್ಞಾನ ಲೋಕದಿಂದ
ಕಾಂತೀಯ ಕ್ಷೇತ್ರ ಬಳಸಿ ನ್ಯಾನೊಕಣ ಚಲನೆ

22 Jan, 2018
ತಯಾರಿಕಾ ಹಂತದಲ್ಲೇ ಸೆಸ್‌?

ತೆರಿಗೆ ತಪ್ಪಿಸುವುದಕ್ಕೆ ಕಡಿವಾಣ: ಜಿಎಸ್‌ಟಿ ಮಂಡಳಿ ಚಿಂತನೆ
ತಯಾರಿಕಾ ಹಂತದಲ್ಲೇ ಸೆಸ್‌?

22 Jan, 2018
ರಾಸುಗಳಿಗೆ ಹೊಸ ವಿಮೆ ಭಾಗ್ಯ

ಹೈನುಗಾರರ ಜೇಬಿಗೆ ಹೊರೆಯಾಗದಂತೆ ಕಂತಿನ ಮೊತ್ತ ಪಾವತಿ ಸೌಲಭ್ಯ
ರಾಸುಗಳಿಗೆ ಹೊಸ ವಿಮೆ ಭಾಗ್ಯ

22 Jan, 2018
ಈರುಳ್ಳಿ ಕನಿಷ್ಠ ರಫ್ತು ಬೆಲೆ ಇಳಿಕೆ

ನವದೆಹಲಿ
ಈರುಳ್ಳಿ ಕನಿಷ್ಠ ರಫ್ತು ಬೆಲೆ ಇಳಿಕೆ

22 Jan, 2018