, ಬ್ರೆಜಿಲ್: ಜೈಲಿನಲ್ಲಿ ಕೈದಿಗಳ ಜಗಳ; 9 ಸಾವು | ಪ್ರಜಾವಾಣಿ
14 ಮಂದಿಗೆ ಗಾಯ

ಬ್ರೆಜಿಲ್: ಜೈಲಿನಲ್ಲಿ ಕೈದಿಗಳ ಜಗಳ; 9 ಸಾವು

ಇಲ್ಲಿನ ಅಪರೆಸಿ ಡಿ ಗೊಯಾನಿಯಾ ಕಾಂಪ್ಲೆಕ್ಸ್ ನಲ್ಲಿರುವ ಕಲೊನಿಯಾ ಅಗ್ರೊಇಂಡಸ್ಟ್ರಿಯಲ್ ಜೈಲಿನಲ್ಲಿ ಕೈದಿಗಳ ನಡುವೆಯುಂಟಾದ ಜಗಳದಲ್ಲಿ 9 ಮಂದಿ ಸಾವಿಗೀಡಾಗಿದ್ದಾರೆ.

ಫೋಟೊ ಕೃಪೆ: ಎಪಿ

ಸವೊ ಪೌಲೊ (ಬ್ರೆಜಿಲ್): ಇಲ್ಲಿನ ಅಪರೆಸಿ ಡಿ ಗೊಯಾನಿಯಾ ಕಾಂಪ್ಲೆಕ್ಸ್ ನಲ್ಲಿರುವ ಕಲೊನಿಯಾ ಅಗ್ರೊಇಂಡಸ್ಟ್ರಿಯಲ್ ಜೈಲಿನಲ್ಲಿ ಕೈದಿಗಳ ನಡುವೆಯುಂಟಾದ ಜಗಳದಲ್ಲಿ 9 ಮಂದಿ ಸಾವಿಗೀಡಾಗಿದ್ದಾರೆ. ಸೋಮವಾರ ತಡರಾತ್ರಿ ನಡೆದ ಈ ಜಗಳದಲ್ಲಿ 14 ಮಂದಿಗೆ ಗಾಯಗಳಾಗಿವೆ ಎಂದು ಬ್ರೆಜಿಲ್ ಸುದ್ದಿ ತಾಣ ಜಿ1 ವರದಿ ಮಾಡಿದೆ.

ಕೈದಿಯೊಬ್ಬ ವಿರುದ್ಧ ಗುಂಪಿನ ಮೂವರು ಕೈದಿಗಳ ಮೇಲೆ ದಾಳಿ ನಡೆಸಿದ್ದೇ ಈ ಜಗಳಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಜಗಳ ತಾರಕಕ್ಕೇರಿದಾಗ ಅಲ್ಲಿರುವ ಹಾಸಿಗೆಗೆ ಬೆಂಕಿ ಹಚ್ಚಲಾಗಿದೆ. ಈ ಬೆಂಕಿ ಪಕ್ಕದ ಸೆಲ್‍ಗೂ ಹರಡಿದ್ದು, ಅಲ್ಲಿರುವ ಕೈದಿಗಳು ಸುಟ್ಟು ಕರಕಲಾಗಿದ್ದಾರೆ. ತಕ್ಷಣವೇ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸಿದೆ.

ಜೈಲಿನಲ್ಲಿ ಸಂಘರ್ಷ ನಡೆಯುತ್ತಿದ್ದ ವೇಳೆ 106 ಕೈದಿಗಳು ಪರಾರಿಯಾಗಲು ಯತ್ನಿಲಿದ್ದು, 29 ಕೈದಿಗಳನ್ನು ಜೈಲು ಅಧಿಕಾರಿಗಳು ಸೆರೆ ಹಿಡಿದಿದ್ದಾರೆ ಎಂದು ಬ್ರೆಜಿಲ್‍ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Comments
ಈ ವಿಭಾಗದಿಂದ ಇನ್ನಷ್ಟು
ಕೆನಡಾ, ಇಂಡೋನೇಷ್ಯಾದಲ್ಲಿ ಭೂಕಂಪ: ಅಲಸ್ಕಾ ಕರಾವಳಿಯಲ್ಲಿ ಸುನಾಮಿ ಭೀತಿ

8.2 ರಷ್ಟು ಭೂಕಂಪ ತೀವ್ರತೆ
ಕೆನಡಾ, ಇಂಡೋನೇಷ್ಯಾದಲ್ಲಿ ಭೂಕಂಪ: ಅಲಸ್ಕಾ ಕರಾವಳಿಯಲ್ಲಿ ಸುನಾಮಿ ಭೀತಿ

23 Jan, 2018
ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ ಭಾಷಣ

‘ವಸುಧೈವ ಕುಟುಂಬಕಂ’ -ಇದುವೇ ಸಮನ್ವಯತೆ ಸೂತ್ರ
ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ ಭಾಷಣ

23 Jan, 2018
ಪ್ರಧಾನಿ ಮೋದಿ ಅವರನ್ನು ಅನುಕರಿಸಿದ ಟ್ರಂಪ್‌

ವರದಿ
ಪ್ರಧಾನಿ ಮೋದಿ ಅವರನ್ನು ಅನುಕರಿಸಿದ ಟ್ರಂಪ್‌

23 Jan, 2018
ದಾವೋಸ್‌ನಲ್ಲಿ ಪ್ರಧಾನಿ ಮೋದಿ

ವಿಶ್ವ ಆರ್ಥಿಕ ವೇದಿಕೆ ಸಮಾವೇಶ
ದಾವೋಸ್‌ನಲ್ಲಿ ಪ್ರಧಾನಿ ಮೋದಿ

23 Jan, 2018

ಕಾಬೂಲ್‌ ದಾಳಿ
ಸಾವಿನ ಸಂಖ್ಯೆ 22ಕ್ಕೆ ಏರಿಕೆ

ತಾಲಿಬಾನ್‌ ಉಗ್ರರು ನಡೆಸಿದ ದಾಳಿಯಲ್ಲಿ 22 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೋಟೆಲಿನ ಒಳಗಿದ್ದವರೇ ಉಗ್ರರಿಗೆ ಸಹಕರಿಸಿರುವ ಬಗ್ಗೆ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ...

23 Jan, 2018