ಮಲೇಬೆನ್ನೂರು

ಮುಖ್ಯನಾಲೆ ಹೂಳೆತ್ತಲು ಆದ್ಯತೆ ನೀಡಿ

‘ಕೊನೆಭಾಗಕ್ಕೆ ನೀರು ತಲುಪಬೇಕೆಂದರೆ ತ್ವರಿತವಾಗಿ ಕಾಮಗಾರಿ ನಡೆಯಬೇಕು. ಆದರೆ, ಗುತ್ತಿಗೆದಾರರು ಕೇವಲ ಒಂದು ಯಂತ್ರವನ್ನು ಮಾತ್ರ ಬಳಸುತ್ತಿದ್ದಾರೆ. ಸರಿಯಾಗಿ ಹೂಳು ಎತ್ತಿಸಿಲ್ಲ

ಮಲೇಬೆನ್ನೂರು: ‘ಬೇಸಿಗೆ ಹಂಗಾಮಿಗೆ ನೀರು ಬಿಡುಗಡೆ ಮಾಡಲು ಕೇವಲ ನಾಲ್ಕು ದಿನಗಳು ಬಾಕಿಯಿದ್ದು, ಮುಖ್ಯ ನಾಲೆ ಹೂಳೆತ್ತುವ ಕೆಲಸ ಆಮೆಗತಿಯಲ್ಲಿ ಸಾಗಿದೆ’ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ವಾಸನದ ಓಂಕಾರಪ್ಪ ಭಾನುವಾರ ಆರೋಪಿಸಿದರು.

‘ಕೊನೆಭಾಗಕ್ಕೆ ನೀರು ತಲುಪಬೇಕೆಂದರೆ ತ್ವರಿತವಾಗಿ ಕಾಮಗಾರಿ ನಡೆಯಬೇಕು. ಆದರೆ, ಗುತ್ತಿಗೆದಾರರು ಕೇವಲ ಒಂದು ಯಂತ್ರವನ್ನು ಮಾತ್ರ ಬಳಸುತ್ತಿದ್ದಾರೆ. ಸರಿಯಾಗಿ ಹೂಳು ಎತ್ತಿಸಿಲ್ಲ. ದಂಡೆ ಮೇಲೆ ಕೆಲವೆಡೆ ಹೂಳನ್ನು ಸಂಗ್ರಹಿಸಿದ್ದು, ಮಳೆ ಬಂದರೆ ಮತ್ತೆ ನಾಲೆಯನ್ನು ಅದು ಸೇರಲಿದೆ’ ಎಂದರು.

ಎಂಜಿನಿಯರ್‌ಗಳು ನಿರ್ಲಕ್ಷ್ಯ ಮಾಡಿದರೆ ಕೊನೆ ಭಾಗಕ್ಕೆ ನೀರು ತಲುಪುವುದಿಲ್ಲ. ಆಂತರಿಕ ಸರದಿ, ವಾರಾಬಂದಿ ವೇಳೆ ಉಪನಾಲೆ ಹೂಳು ಎತ್ತಿ. ಮೊದಲು ಮುಖ್ಯನಾಲೆ ಕಡೆ ಗಮನ ಹರಿಸಿ ಎಂದು ತಾಕೀತು ಮಾಡಿದರು.

ಜ. 5ರಂದು ನಿಯಂತ್ರಣ ಎರಡರಿಂದ ಕೊನೆಭಾಗದ ತನಕ ರೈತ ಸಂಘದ ಪದಾಧಿಕಾರಿಗಳು ಪ್ರವಾಸ ಮಾಡಲಿದ್ದಾರೆ. ನಾಲೆಯಲ್ಲಿ ಹೂಳು ಕಂಡುಬಂದರೆ ಗುತ್ತಿಗೆದಾರರ ಬಿಲ್ ತಡೆಹಿಡಿಯುವಂತೆ ಮನವಿ ಮಾಡಲಾಗುವುದು ಎಂದರು.

ಆಂತರಿಕ ಸರದಿಗೆ ಸಭೆ ಕರೆಯಿರಿ:  ಕರ್ನಾಟಕ ನೀರಾವರಿ ನಿಗಮದ ಮೂರನೇ ವಿಭಾಗದ ಬಸವಾಪಟ್ಟಣ, ಮಲೇಬೆನ್ನೂರು ಹಾಗೂ ಸಾಸ್ವೆಹಳ್ಳಿ ಉಪವಿಭಾಗಗಳ ವ್ಯಾಪ್ತಿಯಲ್ಲಿ ಆಂತರಿಕ ಸರದಿ ರೂಪಿಸುವ ಮುನ್ನ ಜಿಲ್ಲಾಧಿಕಾರಿಗಳು, ಅಧೀಕ್ಷಕ ಎಂಜಿನಿಯರ್, ಕಾಡಾ ಅಧ್ಯಕ್ಷರು, ನೀರು ಬಳಕೆದಾರರು, ರೈತ ಸಂಘದವರನ್ನು ಒಳಗೊಂಡಂತೆ ಪೂರ್ವಭಾವಿ ಸಮಾಲೋಚನಾ ಸಭೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಭದ್ರಾನಾಲೆಗೆ ಆಶ್ರಯ ಕಾಲೊನಿ ಸೇರಿ ಕೆಲವು ಪ್ರದೇಶಗಳ ಚರಂಡಿ ನೀರು ಸೇರಿ ಮಲಿನಗೊಳ್ಳುತ್ತಿದೆ. ನಾಲೆಗೆ ಚರಂಡಿ ಸೇರುವುದನ್ನು ತಡೆಯದೆ ಇದ್ದಲ್ಲಿ ಪುರಸಭೆ ಎದುರು ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ರೈತ ಸಂಘದ ಕೆ.ಎನ್.ಹಳ್ಳಿ ಪ್ರಭುಗೌಡ, ಕಡ್ಲೆಗೊಂದಿ ಬಸಪ್ಪ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ದಾವಣಗೆರೆ
ಪ್ರಚಾರದತ್ತ ಸುಳಿಯದ ಕಾರ್ಮಿಕರು

ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದಿದೆ. ಚುನಾವಣೆ ಪ್ರಚಾರದ ಕಾವು ನಿಧಾನವಾಗಿ ಏರುತ್ತಿದ್ದು, ಕೆಲ ಅಭ್ಯರ್ಥಿಗಳ ಬೆಂಬಲಿಗರು ಈಗಾಗಲೇ ಅವರವರ ನಾಯಕರ ಪರವಾಗಿ ಪ್ರಚಾರ...

26 Apr, 2018
ಜಿಲ್ಲೆಯಲ್ಲಿ 15 ಪಿಂಕ್‌ ಮತಗಟ್ಟೆಗಳು

ದಾವಣಗೆರೆ
ಜಿಲ್ಲೆಯಲ್ಲಿ 15 ಪಿಂಕ್‌ ಮತಗಟ್ಟೆಗಳು

26 Apr, 2018
8 ಕ್ಷೇತ್ರಗಳಲ್ಲಿ 17 ನಾಮಪತ್ರ ತಿರಸ್ಕೃತ

ದಾವಣಗೆರೆ
8 ಕ್ಷೇತ್ರಗಳಲ್ಲಿ 17 ನಾಮಪತ್ರ ತಿರಸ್ಕೃತ

26 Apr, 2018

ದಾವಣಗೆರೆ
‘ಪ್ರತ್ಯೇಕ ಧರ್ಮ: ಆತಂಕ ಬೇಡ’

‘ಪ್ರತ್ಯೇಕ ಧರ್ಮದ ಬಗ್ಗೆ ಯಾರೂ ಆತಂಕ ಪಡುವುದು ಬೇಡ. ವೀರಶೈವರು ಲಿಂಗಾಯತರು ಒಂದೇ ಎಂಬುದನ್ನು ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿರುವ ನಮ್ಮ ಮೇಲೆ ವಿಶ್ವಾಸ ಇಡಬೇಕು....

26 Apr, 2018
ಮೇಯರ್‌ಆಗಿ ಶೋಭಾ ಪಲ್ಲಗಟ್ಟೆ, ಉಪ ಮೇಯರ್‌ಆಗಿ ಚಮನ್‌ ಸಾಬ್‌ ಅವಿರೋಧ ಆಯ್ಕೆ

ದಾವಣಗೆರೆ ಮಹಾನಗರ ಪಾಲಿಕೆ
ಮೇಯರ್‌ಆಗಿ ಶೋಭಾ ಪಲ್ಲಗಟ್ಟೆ, ಉಪ ಮೇಯರ್‌ಆಗಿ ಚಮನ್‌ ಸಾಬ್‌ ಅವಿರೋಧ ಆಯ್ಕೆ

26 Apr, 2018