ಹಾನಗಲ್

ಟಿಕೆಟ್‌ ಆಕಾಂಕ್ಷಿಗಳ ನಡೆಗೆ ಅಸಮಾಧಾನ

‘ಯಾರೇ ಟಿಕೆಟ್‌ ಆಕಾಂಕ್ಷಿಗಳಾಗಿದ್ದರೂ, ಅಂತಿಮವಾಗಿ ಪಕ್ಷದ ವರಿಷ್ಠರ ನಿರ್ಣಯಕ್ಕೆ ಬದ್ಧರಾಗಬೇಕು. ಪಕ್ಷ ಅಭ್ಯರ್ಥಿಯಾಗಿ ನಿರ್ಣಯಿಸಿದವರನ್ನು ಒಮ್ಮತದಿಂದ ಬೆಂಬಲಿಸಿ, ಅವರ ಗೆಲುವಿಗೆ ಶ್ರಮಿಸಬೇಕಿದೆ

ಹಾನಗಲ್: ‘ಹಾನಗಲ್‌ ಕ್ಷೇತ್ರದ ವಿಧಾನಸಭೆ ಚುನಾವಣೆಯ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ಬರುವಂತಹ ಹೇಳಿಕೆಗಳನ್ನು ನೀಡುತ್ತಿರುವುದು ಪಕ್ಷದ ಕಾರ್ಯಕರ್ತರನ್ನು ಮುಜುಗರಕ್ಕೀಡು ಮಾಡಿದೆ’ ಎಂದು ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಕಾಂಗ್ರೆಸ್‌ ಪಕ್ಷ ಸದೃಢವಾಗಿದೆ. ಆದರೆ ಇತ್ತೀಚಿನ ಆಕಾಂಕ್ಷಿಗಳ ನಡೆ, ಮಾಧ್ಯಮಗಳಿಗೆ ನೀಡುತ್ತಿರುವ ಹೇಳಿಕೆಗಳು ಹಾಗೂ ದೋಷಾರೋಪಣೆಗಳಿಂದ ವಾತಾವರಣ ಕಲುಷಿತಗೊಳ್ಳುತ್ತಿದೆ’ ಎಂದು ದೂರಿದರು.

‘ಯಾರೇ ಟಿಕೆಟ್‌ ಆಕಾಂಕ್ಷಿಗಳಾಗಿದ್ದರೂ, ಅಂತಿಮವಾಗಿ ಪಕ್ಷದ ವರಿಷ್ಠರ ನಿರ್ಣಯಕ್ಕೆ ಬದ್ಧರಾಗಬೇಕು. ಪಕ್ಷ ಅಭ್ಯರ್ಥಿಯಾಗಿ ನಿರ್ಣಯಿಸಿದವರನ್ನು ಒಮ್ಮತದಿಂದ ಬೆಂಬಲಿಸಿ, ಅವರ ಗೆಲುವಿಗೆ ಶ್ರಮಿಸಬೇಕಿದೆ. ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂಥ ಹೇಳಿಕೆಗಳನ್ನು ನಿಲ್ಲಿಸಬೇಕು’ ಎಂದು ಅವರು ಮನವಿ ಮಾಡಿಕೊಂಡರು.

ನಾನೂ ಆಕಾಂಕ್ಷಿ: ಹಿಂದಿನ ಎರಡು ವಿಧಾನಸಭಾ ಚುನಾವಣೆಗೆ (2008 ಮತ್ತು 2013) ನಾನು ಪ್ರಬಲ ಆಕಾಂಕ್ಷಿಯಾಗಿದ್ದೆ. ಪಕ್ಷ ತಿರ್ಮಾನಿಸುವ ಅಂತಿಮ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಕೊನೆಯ ಗಳಿಗೆಯಲ್ಲಿ ಟಿಕೆಟ್‌ ವಂಚಿತನಾಗಿದ್ದೇನೆ.

ಸದ್ಯ ಹುಬ್ಬಳ್ಳಿ ಪಶ್ಚಿಮ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಮನೆ–ಮನೆಗೆ ಕಾಂಗ್ರೆಸ್ ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸಿದ್ದೇನೆ. ನಾನು ಹಾನಗಲ್ ಕ್ಷೇತ್ರದ ಪ್ರಬಲ ಮತ್ತು ಹಿರಿಯ ಆಕಾಂಕ್ಷಿ’ ಎಂದು ಸತೀಶ ಅವರು ಪ್ರತಿಪಾದಿಸಿದರು. ಮುಖಂಡರಾದ ಉಮೇಶ ಗೌಳಿ, ಎ.ಎಂ.ಮುಲ್ಲಾ, ಸುರೇಶ ದೊಡ್ಡಕುರುಬರ, ಗಿರೀಶಗೌಡ ಪಾಟೀಲ, ಸಂದೀಪ ಹುಲಗೂರ, ಎಂ.ಎನ್.ಸರಖಾಜಿ, ಬಿ.ಎಸ್.ಮೆಳ್ಳೆಳ್ಳಿ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಬದುಕು ನೀಡಿದ ಬೇರಿಗೆ ನೀರೆರೆಯಲು ಬಂದ ‘ಹಕ್ಕಿ’

ಹಾವೇರಿ
ಬದುಕು ನೀಡಿದ ಬೇರಿಗೆ ನೀರೆರೆಯಲು ಬಂದ ‘ಹಕ್ಕಿ’

20 Jan, 2018
ಕನ್ನಡ ನುಡಿ ಸಂಭ್ರಮಕ್ಕೆ ಅಂತಿಮ ಸಿದ್ಧತೆ

ಅಕ್ಕಿಆಲೂರ
ಕನ್ನಡ ನುಡಿ ಸಂಭ್ರಮಕ್ಕೆ ಅಂತಿಮ ಸಿದ್ಧತೆ

20 Jan, 2018

ಹಿರೇಕೆರೂರ
‘ಗೋವಿನ ಜೋಳ ಖರೀದಿ ಕೇಂದ್ರ ಆರಂಭಿಸಿ’

ಖರೀದಿ ಕೇಂದ್ರ ತೆರೆಯಬೇಕೆಂದು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಹತ್ತು ದಿನದೊಳಗೆ ಖರೀದಿ ಕೇಂದ್ರ ತೆರೆಯಲಾಗುವುದು ಎಂಬ ಭರವಸೆ ನೀಡಿದ್ದರು

20 Jan, 2018
ಭದ್ರಾ ಜಲಾಶಯದಿಂದ 2 ಟಿ.ಎಂ.ಸಿ. ನೀರು

ಹಾವೇರಿ
ಭದ್ರಾ ಜಲಾಶಯದಿಂದ 2 ಟಿ.ಎಂ.ಸಿ. ನೀರು

19 Jan, 2018

ಬ್ಯಾಡಗಿ
ಗೋವಾ ಸಚಿವ ಪಾಲ್ಯೇಕರ್‌ ವಿರುದ್ಧ ಪ್ರತಿಭಟನೆ

ಗೋವಾ ಸರ್ಕಾರದ ಜಲ ಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ್‌ ‘ಕನ್ನಡಿಗರು ಹರಾಮಿಗಳು’ ಎಂದು ನೀಡಿರುವ ಹೇಳಿಕೆಯನ್ನು ಖಂಡಿಸಿ, ಕರ್ನಾಟಕ ವೀರ ಕನ್ನಡಿಗರ ರಕ್ಷಣಾ ವೇದಿಕೆ...

19 Jan, 2018