, ಐಎಸ್‌ ಸಂಘಟನೆಯ 65 ಉಗ್ರರ ಹತ್ಯೆಗೈದ ಅಘ್ಘಾನ್‌ ಸೇನೆ | ಪ್ರಜಾವಾಣಿ
ಕಾರ್ಯಾಚರಣೆ

ಐಎಸ್‌ ಸಂಘಟನೆಯ 65 ಉಗ್ರರ ಹತ್ಯೆಗೈದ ಅಘ್ಘಾನ್‌ ಸೇನೆ

ಅಫ್ಘಾನಿಸ್ತಾನದ ಹಸ್ಕಾ ಮೇನಾ ಜಿಲ್ಲೆಯ ಗೊರ್ಗೋರೆ ಹಾಗೂ ವಂಗೋರಾ ಪ್ರದೇಶಗಳಲ್ಲಿ ಭೂ ಮತ್ತು ವಾಯುಸೇನಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಕಾರ್ಯಾಚರಣೆ ವೇಳೆ ಒಬ್ಬ ನಾಗರಿಕ ಮೃತಪಟ್ಟಿದ್ದು, 13 ಜನರು ಗಾಯಗೊಂಡಿದ್ದಾರೆ

ಐಎಸ್‌ ಸಂಘಟನೆಯ 65 ಉಗ್ರರ ಹತ್ಯೆಗೈದ ಅಘ್ಘಾನ್‌ ಸೇನೆ

ಕಾಬೂಲ್‌: ದೇಶದ ಪೂರ್ವಗಡಿ ಭಾಗದಲ್ಲಿ ಕನಿಷ್ಠ 65 ಮಂದಿ ಐಎಸ್‌ ಉಗ್ರರನ್ನು ಹತ್ಯೆ ಮಾಡಿರುವುದಾಗಿ ಅಫ್ಘಾನಿಸ್ತಾನದ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಇಲ್ಲಿನ ಹಸ್ಕಾ ಮೇನಾ ಜಿಲ್ಲೆಯ ಗೊರ್ಗೋರೆ ಹಾಗೂ ವಂಗೋರಾ ಪ್ರದೇಶಗಳಲ್ಲಿ ಭೂ ಮತ್ತು ವಾಯುಸೇನಾ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಕಾರ್ಯಾಚರಣೆ ವೇಳೆ ಒಬ್ಬ ನಾಗರಿಕ ಮೃತಪಟ್ಟಿದ್ದು, 13 ಜನರು ಗಾಯಗೊಂಡಿದ್ದಾರೆ ಎಂದು ನಂಗರ್ಹಾರ್‌ ಪ್ರಾಂತ್ಯದ ವಕ್ತಾರ ಅತಾವುಲ್ಲಾ ಖೋಗ್ಯಾನಿ ಹೇಳಿದ್ದಾರೆ.

ಆದರೆ, ಈ ಕುರಿತು ಐಎಸ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಐಎಸ್‌ ಉಗ್ರರನ್ನು ಸದೆಬಡಿಯಲು ಅಮೆರಿಕ ಸೇನೆಯೂ ಇತ್ತೀಚೆಗೆ ಡ್ರೋಣ್‌ ದಾಳಿ ಸಂಘಟಿಸಿತ್ತು. ಈ ವೇಳೆ 11 ಉಗ್ರರು ಮೃತಪಟ್ಟಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಟೊರಂಟೊದಲ್ಲಿ ಪಾದಚಾರಿಗಳ ಮೇಲೆ ಚಲಿಸಿದ ವ್ಯಾನ್: 10 ಸಾವು

ಉದ್ದೇಶಪೂರ್ವಕ ದಾಳಿ
ಟೊರಂಟೊದಲ್ಲಿ ಪಾದಚಾರಿಗಳ ಮೇಲೆ ಚಲಿಸಿದ ವ್ಯಾನ್: 10 ಸಾವು

24 Apr, 2018

ಲಂಡನ್‌
ಧ್ವಜ ಹರಿದ ಪ್ರಕರಣ ಕ್ರಮಕ್ಕೆ ಒತ್ತಾಯ

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ಭೇಟಿ ನೀಡಿದ್ದ ವೇಳೆ ಇಲ್ಲಿನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ಭಾರತದ ಧ್ವಜ ಹರಿದು, ಬೆಂಕಿ ಹಚ್ಚಿದವರ ವಿರುದ್ಧ...

23 Apr, 2018
ರಾಜಕೀಯ ಪ್ರಾಮುಖ್ಯತೆ ಇಲ್ಲ: ಚೀನಾ

ಬೀಜಿಂಗ್‌
ರಾಜಕೀಯ ಪ್ರಾಮುಖ್ಯತೆ ಇಲ್ಲ: ಚೀನಾ

23 Apr, 2018
ಕೇಟ್‌ ದಂಪತಿಗೆ ಗಂಡುಮಗು

ರಾಜಮನೆತನಕ್ಕೆ ಮತ್ತೊಂದು ಕುಡಿ
ಕೇಟ್‌ ದಂಪತಿಗೆ ಗಂಡುಮಗು

23 Apr, 2018
ಉಗ್ರನಿಗೆ 20 ವರ್ಷ ಜೈಲು

ಬ್ರಸೆಲ್ಸ್‌
ಉಗ್ರನಿಗೆ 20 ವರ್ಷ ಜೈಲು

23 Apr, 2018