ನವದೆಹಲಿ

ಹೊಸ ವರ್ಷದ ಶುಭಾಶಯಕ್ಕೆ ‘ಶಿವಲಿಂಗದ ಚಿತ್ರ‘ ಪೋಸ್ಟ್‌ ಮಾಡಿ ಟೀಕೆಗೆ ಗುರಿಯಾದ ಕ್ರಿಕೆಟಿಗ ಶಮಿ

ಭಾರತ ಕ್ರಿಕೆಟ್‌ ತಂಡದ ಆಟಗಾರ ಮಹಮ್ಮದ್‌ ಶಮಿ, ಟ್ವಿಟರ್‌ನಲ್ಲಿ ಹೊಸ ವರ್ಷದ ಶುಭಾಶಯಕ್ಕೆ ಶಿವಲಿಂಗದ ಚಿತ್ರ ಪೋಸ್ಟ್‌ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.

ಹೊಸ ವರ್ಷದ ಶುಭಾಶಯಕ್ಕೆ ‘ಶಿವಲಿಂಗದ ಚಿತ್ರ‘ ಪೋಸ್ಟ್‌ ಮಾಡಿ ಟೀಕೆಗೆ ಗುರಿಯಾದ ಕ್ರಿಕೆಟಿಗ ಶಮಿ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆಟಗಾರ ಮಹಮ್ಮದ್‌ ಶಮಿ, ಟ್ವಿಟರ್‌ನಲ್ಲಿ ಹೊಸ ವರ್ಷದ ಶುಭಾಶಯಕ್ಕೆ ಶಿವಲಿಂಗದ ಚಿತ್ರ ಪೋಸ್ಟ್‌ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.

ಶಿವಲಿಂಗದ ಚಿತ್ರ ಇರುವ ಪೋಸ್ಟ್‌ ಹಾಕಿ ಹೊಸ ವರ್ಷದ ಶುಭಾಶಯ ಕೋರಿದ್ದರು. ಈ ಪೋಸ್ಟ್‌ ವಿವಾದಕ್ಕೆ ಕಾರಣವಾಗಿದ್ದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಮಹಮ್ಮದ್‌ ಶಮಿ ನಡೆಯನ್ನು ಟೀಕಿಸಿ ಪೋಸ್ಟ್‌ಗಳನ್ನು ಹಾಕಿದ್ದಾರೆ.

ಹೊಸ ವರ್ಷದ ಮೊದಲ ದಿನವೇ ಶಮಿ ಟೀಕೆಗೆ ಗುರಿಯಾಗಿದ್ದಾರೆ. ಕೆಲ ಮುಸ್ಲಿಂ ಯುವಕರು ಶಮಿ ನಡೆಯನ್ನು ಖಂಡಿಸಿದ್ದಾರೆ. ಶಿವಲಿಂಗದ ಪೋಸ್ಟ್‌ ಹಾಕಿದ್ದು ಸರಿಯಲ್ಲ ಎಂದು ಕೆಲವರು ಟ್ವೀಟ್‌ ಮಾಡಿದ್ದಾರೆ. ಇನ್ನು ಕೆಲವರು ‘ಇದು ಪ್ರಚಾರದ ಗಿಮಿಕ್‌‘ ಎಂದು ಪೋಸ್ಟ್‌ ಮಾಡಿದ್ದಾರೆ.

‘ನೀವು ಟ್ವಿಟರ್‌ನಲ್ಲಿ ಶಿವಲಿಂಗದ ಚಿತ್ರ ಹಾಕಿ ಮುಸ್ಲಿಂ ಸಮುದಾಯಕ್ಕೆ ಅಪಮಾನ ಮಾಡಿದ್ದೀರಿ,  ಅಲ್ಲಾ ನಿಮ್ಮನ್ನು ಕ್ಷಮಿಸುವುದಿಲ್ಲ’ ಎಂದು ಅಭಿಮಾನಿಯೊಬ್ಬ ಟ್ವೀಟ್‌ ಮಾಡಿದ್ದಾನೆ.

ಶಮಿ ಮೂರು ಸಲ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಮಗಳ ಹುಟ್ಟು ಹಬ್ಬದ ದಿನಾಚರಣೆ ಸಂದರ್ಭ ಹಾಗೂ ಪತ್ನಿ ಪಾಶ್ಚಿಮಾತ್ಯ ಉಡುಪು ತೊಟ್ಟಿದ್ದ ಸಂದರ್ಭದಲ್ಲೂ ಟೀಕೆಗಳು ವ್ಯಕ್ತವಾಗಿದ್ದವು.

 

Comments
ಈ ವಿಭಾಗದಿಂದ ಇನ್ನಷ್ಟು
ಹಾಕಿ: ಜಪಾನ್ ವಿರುದ್ಧ ಭಾರತಕ್ಕೆ 6–0ರಲ್ಲಿ ಭರ್ಜರಿ ಜಯ

ಉತ್ತಮ ಆಟ
ಹಾಕಿ: ಜಪಾನ್ ವಿರುದ್ಧ ಭಾರತಕ್ಕೆ 6–0ರಲ್ಲಿ ಭರ್ಜರಿ ಜಯ

17 Jan, 2018
ಭಾರತದ ಎದುರು ದಕ್ಷಿಣ ಆಫ್ರಿಕಾಗೆ 135 ರನ್‌ ಭರ್ಜರಿ ಜಯ

ಎರಡನೇ ಟೆಸ್ಟ್‌ ಪಂದ್ಯ
ಭಾರತದ ಎದುರು ದಕ್ಷಿಣ ಆಫ್ರಿಕಾಗೆ 135 ರನ್‌ ಭರ್ಜರಿ ಜಯ

17 Jan, 2018

ಬೆಂಗಳೂರು
‘ಯುವ ಆಟಗಾರರಿಗೆ ಸಂತೋಷ್‌ ಟ್ರೋಫಿ ಉತ್ತಮ ವೇದಿಕೆ’

‘ತಮ್ಮೊಳಗಿನ ಪ್ರತಿಭೆಯನ್ನು ಸಾಬೀತು ಮಾಡಲು ಯುವ ಆಟಗಾರರಿಗೆ ಸಂತೋಷ್‌ ಟ್ರೋಫಿ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ಉತ್ತಮ ವೇದಿಕೆ’ ಎಂದು ಭಾರತ ತಂಡದ ನಾಯಕ ಸುನಿಲ್‌ ಚೆಟ್ರಿ...

17 Jan, 2018
ಪವನ್, ಸುಜಲ್ ನಾಲ್ಕನೇ ಸುತ್ತಿಗೆ

ಕ್ರೀಡೆ
ಪವನ್, ಸುಜಲ್ ನಾಲ್ಕನೇ ಸುತ್ತಿಗೆ

17 Jan, 2018

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿ
ಫೆಡರರ್‌, ನೊವಾಕ್‌ ಶುಭಾರಂಭ

ಹಾಲಿ ಚಾಂಪಿ ಯನ್‌ ರೋಜರ್‌ ಫೆಡರರ್‌ ಮತ್ತು ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಗೆಲುವಿನ ಮುನ್ನುಡಿ ಬರೆದಿದ್ದಾರೆ.

17 Jan, 2018