ವಾಚಕರ ವಾಣಿ

ಬ್ರಾಹ್ಮಣ ಧರ್ಮವಾಗಲಿ

ವಾಸ್ತವವಾಗಿ ವೇದಗಳನ್ನು ಅನುಸರಿಸುವ ಬ್ರಾಹ್ಮಣರು ಮಾತ್ರ ವೈದಿಕರಾಗಿದ್ದು, ಇತರರು ವೈದಿಕರಲ್ಲ. ಆದ್ದರಿಂದ ವೈದಿಕರಿಗೆ ಪ್ರತ್ಯೇಕ ಧರ್ಮದ ಸ್ಥಾನವನ್ನು ನೀಡಬೇಕು. ಬ್ರಾಹ್ಮಣ ದ್ವೇಷದ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಜನ ಹಿಂದೂಗಳ ನೇತೃತ್ವ ವಹಿಸಿಕೊಳ್ಳಲಿ, ಹಿಂದೂಗಳ ಉದ್ಧಾರ ಮಾಡುವ ಉಸಾಬರಿ ಬ್ರಾಹ್ಮಣರಿಗೆ ಬೇಡ.

ಲಿಂಗಾಯತರಿಗಿಂತ ಮೊದಲು ಬ್ರಾಹ್ಮಣರಿಗೆ ಪ್ರತ್ಯೇಕ ಧರ್ಮದ ಸ್ಥಾನ ನೀಡುವುದು ಸೂಕ್ತ. ಬ್ರಾಹ್ಮಣರು ವೈದಿಕ ಧರ್ಮಾನುಯಾಯಿಗಳಾಗಿದ್ದು, ಅವರು ಹಿಂದೂಗಳಲ್ಲ. ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ವೈದಿಕರು, ಜೈನರು ಹಾಗೂ ಬೌದ್ಧರು ಇದ್ದರು. ಜನಸಾಮಾನ್ಯರು ಬ್ರಾಹ್ಮಣರನ್ನು ಅನುಕರಿಸಿ ನಡೆಯುತ್ತಿದ್ದರು. ಅವರಿಗೆ ಯಾವುದೇ ನಿರ್ದಿಷ್ಟ ಧರ್ಮವಿರಲಿಲ್ಲ. ಚಂದ್ರಗುಪ್ತ ಮೌರ್ಯ ವೈದಿಕ ಧರ್ಮ ಬಿಟ್ಟು ಜೈನಧರ್ಮ ಸ್ವೀಕರಿಸಿದ, ಅವನ ಮಗ ಬಿಂದುಸಾರ ವೈದಿಕ ಧರ್ಮವನ್ನು ಪಾಲಿಸಿದ. ಬಿಂದುಸಾರನ ಮಗ ಅಶೋಕ ಬೌದ್ಧ ಧರ್ಮ ಸ್ವೀಕರಿಸಿದ. ರಾಜನ ಧರ್ಮವನ್ನೇ ಜನಸಾಮಾನ್ಯರು ಅನುಸರಿಸುತ್ತಿದ್ದರು.

ಹಿಂದೆ ಜೈನರ ಆಳ್ವಿಕೆ ಇದ್ದಾಗ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಜೈನರಿದ್ದರು. ಹಿಂದೂ ಎನ್ನುವ ಧರ್ಮವೇ ಇರದಿದ್ದರೂ ಮುಸಲ್ಮಾನರ ಕಾಲದಲ್ಲಿ ಇಲ್ಲಿಯ ಜನರನ್ನು ಹಿಂದೂಗಳೆಂದು ಕರೆಯಲಾಯಿತು. ಬ್ರಿಟಿಷರ ಕಾಲದಲ್ಲಿ ಬೌದ್ಧ, ಜೈನ ಹಾಗೂ ಸಿಖ್ಖರನ್ನು ಪ್ರತ್ಯೇಕಿಸಿ ಉಳಿದವರನ್ನು ಹಿಂದೂಗಳೆಂದು ಕರೆಯಲಾಯಿತು.

ವಾಸ್ತವವಾಗಿ ವೇದಗಳನ್ನು ಅನುಸರಿಸುವ ಬ್ರಾಹ್ಮಣರು ಮಾತ್ರ ವೈದಿಕರಾಗಿದ್ದು, ಇತರರು ವೈದಿಕರಲ್ಲ. ಆದ್ದರಿಂದ ವೈದಿಕರಿಗೆ ಪ್ರತ್ಯೇಕ ಧರ್ಮದ ಸ್ಥಾನವನ್ನು ನೀಡಬೇಕು. ಬ್ರಾಹ್ಮಣ ದ್ವೇಷದ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಜನ ಹಿಂದೂಗಳ ನೇತೃತ್ವ ವಹಿಸಿಕೊಳ್ಳಲಿ, ಹಿಂದೂಗಳ ಉದ್ಧಾರ ಮಾಡುವ ಉಸಾಬರಿ ಬ್ರಾಹ್ಮಣರಿಗೆ ಬೇಡ.

–ಡಾ.ದೇವಿದಾಸ ಪ್ರಭು, ಭಟ್ಕಳ

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಮುಕ್ತ ಲೈಂಗಿಕತೆ ಬೇಡ

ಯಾವುದೋ ಬಡಪಾಯಿ ಹೆಣ್ಣನ್ನು ವೇಶ್ಯಾವೃತ್ತಿಗೆ ತಳ್ಳಿ ತಮ್ಮ ಮನೆಯ ಸಭ್ಯ ಹೆಣ್ಣುಮಕ್ಕಳನ್ನು ರಕ್ಷಿಸಿಕೊಳ್ಳುವ ಇಂತಹ ಪರಿಹಾರೋಪಾಯಗಳು ನಮಗೆ ಖಂಡಿತ ಬೇಡ. ಅಷ್ಟೇ ಅಲ್ಲ, ಇಂತಹ...

26 Apr, 2018

ವಾಚಕರವಾಣಿ
ಸುಖೀ ದೇಶ!

ಸರ್ಕಾರಿ ಬಸ್ಸಿನ ಡ್ರೈವರ್-ಕಂಡಕ್ಟರ್ ಯಾವ ಜಾತಿ-ಧರ್ಮದವರು ಎಂದು ಮೊದಲೇ ಪ್ರಯಾಣಿಕರಿಗೆ ತಿಳಿಸಿ ಅವರ ಅನುಮತಿ ಪಡೆದೇ ಟಿಕೆಟ್ ಬುಕ್ ಮಾಡಬೇಕು ಎಂಬ ಹೊಸ ನಿಯಮ...

26 Apr, 2018

ವಾಚಕರವಾಣಿ
ಡಿ.ಆರ್‌. ಕೃತಿ ಓದಿ

‘ಇಂತೀ ಮೂವರಿಗೆ ಹುಟ್ಟಿದ ಸೂಳೆಯಮಗನ ನಾನೇನೆಂದು ಪೂಜೆಯ ಮಾಡಲಿ’ ಎಂದು ಅಲ್ಲಮನ ವಚನ ಎಂದಿದ್ದೆ. ಇದು ತಪ್ಪು ಉಲ್ಲೇಖ; ಮೂಲದಲ್ಲಿ ‘ಸೂಳೆಯ ಮಗ’ ಎಂಬ...

26 Apr, 2018

ವಾಚಕರವಾಣಿ
ಅಹಂಕಾರದ ಮಾತು

'ಬಸವಣ್ಣನವರನ್ನು ನಾವೂ ಗೌರವಿಸುತ್ತೇವೆ' ಎಂಬ ಇವರ ಮಾತನ್ನು ಬಸವಣ್ಣನವರಿಗೆ ಪಂಚಾಚಾರ್ಯರಿಂದ ಆದ ಅಪಮಾನ ನೋಡುತ್ತಾ ಬಂದ ಯಾರೂ ಒಪ್ಪುವುದಿಲ್ಲ.

26 Apr, 2018

ವಾಚಕರವಾಣಿ
ಅಮೆರಿಕದಲ್ಲಿ ನೌಕರಿ: ಕನಸಿಗೆ ಕತ್ತರಿ

ಎಚ್‌1ಬಿ ವೀಸಾ ನೀಡಿಕೆಯ ಮೇಲಿನ ಕಠಿಣ ನಿರ್ಬಂಧದಿಂದಾಗಿ ಸಹಸ್ರಾರು ಭಾರತೀಯ ಮೂಲದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ

26 Apr, 2018