ಅಧಿಸೂಚನೆ

ತಯಾರಕರ ತೆರಿಗೆ ಕಡಿತ

ನವೆಂಬರ್‌ 1ರಂದು ನಡೆದ ಸಭೆಯಲ್ಲಿ ತೆರಿಗೆಯನ್ನು ಇಳಿಸುವ ನಿರ್ಧಾರಕ್ಕೆ ಬರಲಾಗಿತ್ತು. ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಮಂಗಳವಾರ ಅಧಿಸೂಚನೆ ಹೊರಡಿಸಿದೆ.

ತಯಾರಕರ ತೆರಿಗೆ ಕಡಿತ

ನವದೆಹಲಿ: ಜಿಎಸ್‌ಟಿಯಲ್ಲಿ ಕಂಪೋಸಿಷನ್‌ ಸ್ಕೀಮ್ (ರಾಜಿ ತೆರಿಗೆ) ಆಯ್ಕೆ ಮಾಡಿಕೊಂಡಿರುವ ತಯಾರಕರಿಗೆ ತೆರಿಗೆಯನ್ನು ಈಗಿರುವ ಶೇ 2 ರಿಂದ ಶೇ 1ಕ್ಕೆ  ಇಳಿಸಲಾಗಿದೆ.

ನವೆಂಬರ್‌ 1ರಂದು ನಡೆದ ಸಭೆಯಲ್ಲಿ ತೆರಿಗೆಯನ್ನು ಇಳಿಸುವ ನಿರ್ಧಾರಕ್ಕೆ ಬರಲಾಗಿತ್ತು. ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಮಂಗಳವಾರ ಅಧಿಸೂಚನೆ ಹೊರಡಿಸಿದೆ.

ಕಂಪೋಸಿಷನ್‌ ಸ್ಕೀಮ್‌ ಆಯ್ಕೆ ಮಾಡಿಕೊಂಡಿರುವ ವರ್ತಕರು ಸಹ ತಮ್ಮ ಒಟ್ಟಾರೆ ವಹಿವಾಟಿನಲ್ಲಿ ತೆರಿಗೆಗೆ ಒಳಪಡುವ ಸರಕುಗಳಿಗೆ ಶೇ 1 ರಷ್ಟು ತೆರಿಗೆ ಪಾವತಿಸಬೇಕು. ಈವರೆಗೆ ವರ್ತಕರು ಒಟ್ಟಾರೆ ವಹಿವಾಟಿನ ಮೇಲೆ (ತೆರಿಗೆ ವಿನಾಯ್ತಿಯಲ್ಲಿ ಸೇರಿರುವ  ಹಣ್ಣು, ತರಕಾರಿಗಳನ್ನೂ ಒಳಗೊಂಡು) ತೆರಿಗೆ ಪಾವತಿಸುತ್ತಿದ್ದರು.

ಒಟ್ಟು 15 ಲಕ್ಷ ಉದ್ಯಮಗಳು ಈ ಸ್ಕೀಮ್‌ ಆ‌ಯ್ಕೆಮಾಡಿಕೊಂಡಿವೆ. ವಾರ್ಷಿಕ ವಹಿವಾಟು ₹ 1.5 ಕೋಟಿ ದಾಟದೇ ಇರುವ ವರ್ತಕರು, ತಯಾರಕರು ಮತ್ತು ರೆಸ್ಟೊರಂಟ್‌ಗಳು ಕಂಪೋಸಿಷನ್ ಸ್ಕೀಮ್‌ ಆಯ್ಕೆ ಮಾಡಿಕೊಳ್ಳಬಹುದು.

Comments
ಈ ವಿಭಾಗದಿಂದ ಇನ್ನಷ್ಟು
ಹೂಡಿಕೆದಾರರ ಸಂಪತ್ತು  ₹ 1 ಲಕ್ಷ ಕೋಟಿ ವೃದ್ಧಿ

ಷೇರುಪೇಟೆಯ ಒಟ್ಟು ಬಂಡವಾಳ ಮೌಲ್ಯವೂ ಹೆಚ್ಚಳ
ಹೂಡಿಕೆದಾರರ ಸಂಪತ್ತು ₹ 1 ಲಕ್ಷ ಕೋಟಿ ವೃದ್ಧಿ

24 Jan, 2018
ಟೆಕ್ನೊ ಸ್ಮಾರ್ಟ್‌ಫೋನ್ ಬಿಡುಗಡೆ

ಟ್ರಾನ್ಸಿಷನ್ ಇಂಡಿಯಾದ ಪ್ರೀಮಿಯಂ ಸ್ಮಾರ್ಟ್‌ಫೋನ್
ಟೆಕ್ನೊ ಸ್ಮಾರ್ಟ್‌ಫೋನ್ ಬಿಡುಗಡೆ

24 Jan, 2018

ನವದೆಹಲಿ
ಷೇರು ಮಾರಾಟಕ್ಕೆ ಸರ್ಕಾರ ಒಪ್ಪಿಗೆ

ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್‌ಜಿಸಿ) ಇಂಡಿಯನ್ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಮತ್ತು ಗೇಲ್‌ ಇಂಡಿಯಾದಲ್ಲಿ ಹೊಂದಿರುವ ಷೇರುಗಳನ್ನು ಮಾರಾಟ...

24 Jan, 2018
ಪೆಟ್ರೋಲ್‌, ಡೀಸೆಲ್‌ ಬೆಲೆ 4 ವರ್ಷದಲ್ಲೇ ಗರಿಷ್ಠ ಏರಿಕೆ

ಅಬಕಾರಿ ಸುಂಕ ಇಳಿಸಲು ಪೆಟ್ರೋಲಿಯಂ ಸಚಿವಾಲಯ ಮನವಿ
ಪೆಟ್ರೋಲ್‌, ಡೀಸೆಲ್‌ ಬೆಲೆ 4 ವರ್ಷದಲ್ಲೇ ಗರಿಷ್ಠ ಏರಿಕೆ

24 Jan, 2018
ತೈಲ ದರ ಆಧರಿಸದ ಇಂಧನ ಬೆಲೆ

ದರ ಇಳಿಕೆ ಕಂಡಿದ್ದಾಗಲೂ ಅಬಕಾರಿ ಸುಂಕ ಏರಿಕೆ
ತೈಲ ದರ ಆಧರಿಸದ ಇಂಧನ ಬೆಲೆ

24 Jan, 2018