ಶಿಶು ಮಾರಾಟ ಪ್ರಕರಣ

ಮಾರಾಟವಾಗಿದ್ದ ಶಿಶು ತಾಯಿ ಮಡಿಲಿಗೆ ವಾಪಸ್

ಬರೇಲಿ ಜಿಲ್ಲೆಯ ಢಕಿಯಾ ಖೋಹ ಗ್ರಾಮದಲ್ಲಿ ವರದಿಯಾದ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಜಿಲ್ಲಾಡಳಿತ ಸಂಜು ದೇವಿಯ ಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯಕೀಯ ವೆಚ್ಚ ಭರಿಸುವುದಾಗಿ ಭರವಸೆ ನೀಡಿದೆ.

ಲಖನೌ: ‍ಪತಿಯ ಚಿಕಿತ್ಸೆಯ ವೆಚ್ಚ ಭರಿಸಲು ಹಣ ಇಲ್ಲದೆ ಮಹಿಳೆ ₹42 ಸಾವಿರಕ್ಕೆ ತನ್ನ ನವಜಾತ ಶಿಶುವನ್ನು ಮಾರಿದ್ದ ಪ್ರಕರಣದಲ್ಲಿ ವಿವಿಧೆಡೆಯಿಂದ ಸಹಾಯಹಸ್ತ ಬಂದ ನಂತರ, ಶಿಶು ಮತ್ತೆ ತಾಯಿಯ ಮಡಿಲು ಸೇರಿದೆ.

ಬರೇಲಿ ಜಿಲ್ಲೆಯ ಢಕಿಯಾ ಖೋಹ ಗ್ರಾಮದಲ್ಲಿ ವರದಿಯಾದ ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ಜಿಲ್ಲಾಡಳಿತ ಸಂಜು ದೇವಿಯ ಪತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯಕೀಯ ವೆಚ್ಚ ಭರಿಸುವುದಾಗಿ ಭರವಸೆ ನೀಡಿದೆ.

ಸಂಜು ದೇವಿ ತನ್ನ ಪತಿ ಹರ್‌ಸ್ವರೂಪ್ ಮೌರ್ಯ ಚಿಕಿತ್ಸೆಯ ವೆಚ್ಚ ಭರಿಸಲು ಸಾಲ ಮಾಡಿದ್ದರು. ಸಾಲ ಪಾವತಿಸಲು ಸಾಧ್ಯವಾಗದೆ 15 ದಿನದ ನವಜಾತ ಶಿಶುವನ್ನು ಪಕ್ಕದ ಗ್ರಾಮದ ದಂಪತಿಗೆ ಮಾರಾಟ ಮಾಡಿದ್ದರು.

ಕುಟುಂಬಕ್ಕೆ ಅಗತ್ಯ ನೆರವು ನೀಡದೆ ಇದ್ದ ಕುರಿತು ವಿವರಣೆ ನೀಡುವಂತೆ ಕಂದಾಯ ಇಲಾಖೆಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ನವದೆಹಲಿ
ರೈಲ್ವೆ: ಮುಂಗಡ ಟಿಕೆಟ್ ಕಾಯ್ದಿರಿಸಿದರೆ ರಿಯಾಯಿತಿ?

ಪ್ರಯಾಣದ ಯೋಜನೆಗಳನ್ನು ಬೇಗನೆ ಪಕ್ಕಾ ಮಾಡಿಕೊಂಡರೆ ಕಡಿಮೆ ದರದಲ್ಲೇ ರೈಲಿನಲ್ಲಿ ಸಂಚಾರ ಮಾಡುವ ಸಾಧ್ಯತೆ ದೂರವಿಲ್ಲ.

19 Jan, 2018
ಗುಜರಾತ್: ಹಡಗಿಗೆ ಬೆಂಕಿ–ಸಿಬ್ಬಂದಿ ರಕ್ಷಣೆ

ಅಹಮದಾಬಾದ್
ಗುಜರಾತ್: ಹಡಗಿಗೆ ಬೆಂಕಿ–ಸಿಬ್ಬಂದಿ ರಕ್ಷಣೆ

19 Jan, 2018

ಸಮನ್ವಯ ಸಭೆ
‘ಮದರಸಾ ಮುಚ್ಚುವುದು ಪರಿಹಾರವಲ್ಲ’

ಸ್ಪರ್ಧೆಯನ್ನು ಎದುರಿಸುವ ಸಲುವಾಗಿ ಮದರಸಾಗಳು ಹಾಗೂ ಸಂಸ್ಕೃತ ಶಾಲೆಗಳಲ್ಲಿ ಆಧುನಿಕ ಪದ್ಧತಿಯ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ...

19 Jan, 2018

ನವದೆಹಲಿ
‘ಖಾಸಗಿ ಮಾಹಿತಿ ನೀಡಲು ಜನರ ಮೇಲೆ ಒತ್ತಡ’

ವೈಯಕ್ತಿಕ ವಿವರಗಳನ್ನು ಖಾಸಗಿ ನಿರ್ವಾಹಕರಿಗೆ ನೀಡುವಂತೆ ಜನರ ಮೇಲೆ ಒತ್ತಡ ಹೇರಲಾಗಿದೆ. ಹೀಗೆ ನೀಡಲಾದ ಮಾಹಿತಿಗೆ ಯಾವುದೇ ಸುರಕ್ಷತೆ ಇಲ್ಲ. ಜನರ ಖಾಸಗಿತನದ ಹಕ್ಕನ್ನು...

19 Jan, 2018

ನವದೆಹಲಿ
‘ಸುಪ್ರೀಂ’ ನ್ಯಾಯಮೂರ್ತಿಗಳ ಸಭೆ

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್‌ ಮಿಶ್ರಾ ಅವರನ್ನು ನಾಲ್ವರು ಹಿರಿಯ ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್‌, ರಂಜನ್‌ ಗೊಗೋಯ್‌, ಮದನ್‌ ಬಿ. ಲೋಕೂರ್‌...

19 Jan, 2018