ಕೇಂದ್ರದ ಕ್ರಮ

ಮಹಿಳೆಯರ ಸುರಕ್ಷತೆ: ತುರ್ತು ಸಹಾಯಕ್ಕೆ ಮೊಬೈಲ್‌ನಲ್ಲಿ ಬಟನ್‌

ಮೊಬೈಲ್‌ ದೂರವಾಣಿಗಳಲ್ಲಿನ ತುರ್ತು ಕರೆಯ ಈ ಬಟನ್‌ 5 ಅಥವಾ 9ರ ಸಂಖ್ಯೆ ಹೊಂದಿರಬೇಕು. ತುರ್ತು ಕರೆ ಮಾಡುವ ವ್ಯವಸ್ಥೆ ಇಲ್ಲದಿರುವ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಇದೇ ಸಂಖ್ಯೆಗಳಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.

ಮಹಿಳೆಯರ ಸುರಕ್ಷತೆ: ತುರ್ತು ಸಹಾಯಕ್ಕೆ ಮೊಬೈಲ್‌ನಲ್ಲಿ ಬಟನ್‌

ನವದೆಹಲಿ: ಮಹಿಳೆಯರ ಸುರಕ್ಷತೆಗಾಗಿ ಮೊಬೈಲ್‌ ದೂರವಾಣಿಗಳಲ್ಲಿ ತುರ್ತು ಸಹಾಯಕ್ಕೆ ಅಳವಡಿಸುವ ಬಟನ್‌ ಉತ್ತರ ಪ್ರದೇಶದಲ್ಲಿ ಜನವರಿ 26ರಿಂದ ಪ್ರಾಯೋಗಿಕವಾಗಿ ಆರಂಭವಾಗಲಿದೆ.

ಮೊಬೈಲ್‌ ದೂರವಾಣಿ ತಯಾರಕರು 2017ರ ಜನವರಿ ಒಳಗೆ ಕಡ್ಡಾಯವಾಗಿ ತುರ್ತು ಸಹಾಯಕ್ಕೆ ಬಟನ್‌ ಅಳವಡಿಸಬೇಕು ಎಂದು 2016ರ ಏಪ್ರಿಲ್‌ನಲ್ಲಿ ದೂರಸಂಪರ್ಕ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಆದರೆ, ವಿವಿಧ ಕಾರಣಗಳಿಂದ ಈ ವ್ಯವಸ್ಥೆ ಜಾರಿಯಾಗಿರಲಿಲ್ಲ.

ಮೊಬೈಲ್‌ ದೂರವಾಣಿಗಳಲ್ಲಿನ ತುರ್ತು ಕರೆಯ ಈ ಬಟನ್‌ 5 ಅಥವಾ 9ರ ಸಂಖ್ಯೆ ಹೊಂದಿರಬೇಕು. ತುರ್ತು ಕರೆ ಮಾಡುವ ವ್ಯವಸ್ಥೆ ಇಲ್ಲದಿರುವ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಇದೇ ಸಂಖ್ಯೆಗಳಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.

‘ತುರ್ತು ಸಹಾಯಕ್ಕೆ ಬಟನ್‌ ಅಳವಡಿಸುವ ಕಾರ್ಯ ಉತ್ತರಪ್ರದೇಶದಲ್ಲಿ ಯಶಸ್ವಿಯಾದರೆ ದೇಶದ ಎಲ್ಲೆಡೆಯೂ ಉತ್ತಮ ಫಲಿತಾಂಶ ದೊರೆಯ
ಲಿದೆ. ಈ ಬಟನ್‌ ಒತ್ತಿದರೆ ಪೊಲೀಸರ ಜತೆ ತಕ್ಷಣವೇ ಸಂಪರ್ಕ ದೊರೆಯಲಿದೆ’ ಎಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ.

‘ಈ ಮೊದಲು ಪ್ರಾಯೋಗಿಕವಾಗಿ ಈ ಯೋಜನೆ ಕೈಗೊಂಡಾಗ ಬಹುತೇಕ ಕರೆಗಳು ಹುಸಿಯಾಗಿದ್ದವು. ಹೀಗಾಗಿ, ಈ ಯೋಜನೆ ವಿಳಂಬವಾಯಿತು’ ಎಂದು ತಿಳಿಸಿದ್ದಾರೆ.

‘ದೇಶದಲ್ಲಿ ಇನ್ನು ಮುಂದೆ ಹೊಸ ಮೊಬೈಲ್ ದೂರವಾಣಿಗಳಲ್ಲಿ ತುರ್ತು ಸಹಾಯಕ್ಕೆ ಅಳವಡಿಸುವ ಬಟನ್‌ ಇರಲಿದೆ. ಆದರೆ, ಸ್ಮಾರ್ಟ್‌ಫೋನ್‌ಗಳ ಬಳಕೆದಾರರು ಮೊಬೈಲ್‌ ಅಪ್ಲಿಕೇಷನ್‌ ಡೌನ್‌ಲೌಡ್‌ ಮಾಡಿಕೊಳ್ಳಬೇಕು. ಇದರಲ್ಲಿ ತುರ್ತು ಸಹಾಯಕ್ಕಾಗಿ ಇರುವ ಬಟನ್‌ ಒತ್ತಿದರೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಚೇತನ್‌ ಸಾಂಘಿ ತಿಳಿಸಿದ್ದಾರೆ.

‘ತುರ್ತು ಸಹಾಯಕ್ಕಾಗಿನ ಬಟನ್‌ಗೆ ಯಾವ ಸಂಖ್ಯೆ ನಮೂದಿಸಬೇಕು ಎನ್ನುವ ಬಗ್ಗೆ ಸರ್ಕಾರ ಇದುವರೆಗೆ ನಿರ್ಧಾರ ಕೈಗೊಂಡಿಲ್ಲ’ ಎಂದು
ಸಾಂಘಿ ತಿಳಿಸಿದ್ದಾರೆ.

ಕಾರ್ಯನಿರ್ವಹಣೆಗೆ ಹೇಗೆ?
ತುರ್ತು ಸಹಾಯಕ್ಕಾಗಿನ ಬಟನ್‌ ಒತ್ತಿದರೆ ತುರ್ತು ಸಂಖ್ಯೆ 112ಕ್ಕೆ ಐದು ಕರೆಗಳು ಹೋಗುತ್ತವೆ. ಬಳಿಕ, ಐದು ಎಸ್‌ಎಂಎಸ್‌ಗಳು ಪೊಲೀಸ್‌ ಅಧಿಕಾರಿಗಳಿಗೆ ರವಾನೆಯಾಗುತ್ತವೆ. ಇದೇ ಸಂದರ್ಭದಲ್ಲಿ ಮೂರು ಅಥವಾ ಐದು ಎಸ್‌ಎಂಎಸ್‌ಗಳು ಸಂಕಷ್ಟದಲ್ಲಿ ಸಿಲುಕಿದ ಮಹಿಳೆಯ ಕುಟುಂಬದ ಸದಸ್ಯರ ಮೊಬೈಲ್‌ಗೆ ರವಾನೆಯಾಗುತ್ತವೆ ಎಂದು ಚೇತನ್‌ ಸಾಂಘಿ ತಿಳಿಸಿದ್ದಾರೆ.

ಘಟನೆ ನಡೆದ ಪ್ರದೇಶದಲ್ಲಿರುವ 25ರಿಂದ 30 ಸ್ವಯಂಸೇವಾ ಕಾರ್ಯಕರ್ತರಿಗೂ ಎಚ್ಚರಿಕೆ ಸಂದೇಶಗಳು ಸಹ ರವಾನೆಯಾಗುತ್ತದೆ. ಈ ಕಾರ್ಯಕರ್ತರನ್ನು ಇಲಾಖೆಯ ಅಧಿಕಾರಿಗಳು ಆಯ್ಕೆ ಮಾಡಿ ತರಬೇತಿ ನೀಡುತ್ತಾರೆ ಎಂದು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಅತ್ಯಾಚಾರಕ್ಕೆ ಒಳಗಾದ ಯುವತಿಯಿಂದ ಪ್ರಧಾನಿಗೆ ರಕ್ತದಲ್ಲಿ ಪತ್ರ: ನ್ಯಾಯ ಒದಗಿಸುವಂತೆ ಮನವಿ

ರಾಯಬರೇಲಿ
ಅತ್ಯಾಚಾರಕ್ಕೆ ಒಳಗಾದ ಯುವತಿಯಿಂದ ಪ್ರಧಾನಿಗೆ ರಕ್ತದಲ್ಲಿ ಪತ್ರ: ನ್ಯಾಯ ಒದಗಿಸುವಂತೆ ಮನವಿ

23 Jan, 2018
ಪತಿಯ ಎದುರೇ ಪತ್ನಿ ಮೇಲೆ ಅತ್ಯಾಚಾರ, ನಾಲ್ವರ ಬಂಧನ

ಗುರುಗ್ರಾಮ
ಪತಿಯ ಎದುರೇ ಪತ್ನಿ ಮೇಲೆ ಅತ್ಯಾಚಾರ, ನಾಲ್ವರ ಬಂಧನ

23 Jan, 2018
ಮಿಗ್‌–21 ಯುದ್ಧವಿಮಾನ ಹಾರಿಸಲಿದ್ದಾರೆ ವನಿತೆಯರು

ನವದೆಹಲಿ
ಮಿಗ್‌–21 ಯುದ್ಧವಿಮಾನ ಹಾರಿಸಲಿದ್ದಾರೆ ವನಿತೆಯರು

23 Jan, 2018
ಪತ್ನಿಯ ಸ್ಮರಣಾರ್ಥ ಶ್ವಾನ ಆಸ್ಪತ್ರೆ ತೆರೆಯಲು ನಿರ್ಧರಿಸಿದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ

ಶ್ವಾನ ಪ್ರಿಯರು
ಪತ್ನಿಯ ಸ್ಮರಣಾರ್ಥ ಶ್ವಾನ ಆಸ್ಪತ್ರೆ ತೆರೆಯಲು ನಿರ್ಧರಿಸಿದ ಶಿಕ್ಷಣ ಸಚಿವ ಪಾರ್ಥ ಚಟರ್ಜಿ

23 Jan, 2018
ದಲಿತ ಯುವತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಅಪ್ಪ–ಮಗ

ರಾಷ್ಟ್ರೀಯ
ದಲಿತ ಯುವತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಅಪ್ಪ–ಮಗ

23 Jan, 2018