ಇಲ್ಲದ ಪರವಾನಗಿ

ಆಟಿಕಾ ಬಾರ್‌ಗೆ ₹5 ಲಕ್ಷ ದಂಡ

ಈ ವೇಳೆ ಆಟಿಕಾ ಬಾರ್‌ನಲ್ಲಿ ಹುಕ್ಕಾ ಸೇವನೆ ಮಾಡುತ್ತಿದ್ದುದು ಕಂಡುಬಂತು. ಇದಕ್ಕೆ ಪರವಾನಗಿಯೂ ಇರಲಿಲ್ಲ. ಕಸವೂ ಇತ್ತು. ಅಲ್ಲದೆ, ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಇದನ್ನು ಗಮನಿಸಿದ ಮೇಯರ್‌, ದಂಡ ವಿಧಿಸಿದರು.

ಆಟಿಕಾ ಬಾರ್‌ಗೆ ₹5 ಲಕ್ಷ ದಂಡ

ಬೆಂಗಳೂರು: ಅನಧಿಕೃತ ರೂಫ್‌ಟಾಪ್‌ ಬಾರ್‌ಗಳ ವಿರುದ್ಧ ಸಮರ ಸಾರಿರುವ ಬಿಬಿಎಂಪಿ, ಲ್ಯಾವೆಲ್ಲೆ ರಸ್ತೆಯಲ್ಲಿ ‘ಆಟಿಕಾ’ ಬಾರ್ ಅನ್ನು ಮುಚ್ಚುವಂತೆ ಸೂಚಿಸಿದೆ. ಜತೆಗೆ ₹5 ಲಕ್ಷ ದಂಡವನ್ನೂ ವಿಧಿಸಿದೆ.

ಮೇಯರ್‌ ಆರ್‌.ಸಂಪತ್‌ ರಾಜ್‌ ಅವರು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರೊಂದಿಗೆ ಮಂಗಳವಾರ ತಪಾಸಣೆ ನಡೆಸಿದರು.

ಈ ವೇಳೆ ಆಟಿಕಾ ಬಾರ್‌ನಲ್ಲಿ ಹುಕ್ಕಾ ಸೇವನೆ ಮಾಡುತ್ತಿದ್ದುದು ಕಂಡುಬಂತು. ಇದಕ್ಕೆ ಪರವಾನಗಿಯೂ ಇರಲಿಲ್ಲ. ಕಸವೂ ಇತ್ತು. ಅಲ್ಲದೆ, ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು. ಇದನ್ನು ಗಮನಿಸಿದ ಮೇಯರ್‌, ದಂಡ ವಿಧಿಸಿದರು.

ಇದೇ ರಸ್ತೆಯಲ್ಲಿರುವ ‘ಲೇಡಿ ಬಾಗಾ’ ಬಾರ್‌ ಅನ್ನು ಮೊದಲ ಹಾಗೂ ಎರಡನೇ ಮಹಡಿಯಲ್ಲಿ ನಡೆಸಲಾಗುತ್ತಿದೆ. ಎರಡನೇ ಮಹಡಿಗೆ ಆರೋಗ್ಯಾಧಿಕಾರಿ ಅಕ್ರಮವಾಗಿ ಪರವಾನಗಿ ನೀಡಿರುವುದು ಕಂಡುಬಂತು. ಅವರ ವಿರುದ್ಧ ದೂರು ದಾಖಲಿಸಲು ಮೇಯರ್‌ ಸೂಚನೆ ನೀಡಿದರು. 

ಈ ಪರವಾನಗಿಯನ್ನು ವಾಪಸ್‌ ಪಡೆದ ಬಳಿಕ ಬಾರ್‌ ಮುಚ್ಚಿಸುವುದಾಗಿ ಸಂಪತ್‌ರಾಜ್‌ ತಿಳಿಸಿದರು. ಪಾಲಿಕೆಯ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌, ಪೂರ್ವ ವಲಯದ ಜಂಟಿ ಆಯುಕ್ತ ಡಾ.ಅಶೋಕ್‌ ಇದ್ದರು.

Comments
ಈ ವಿಭಾಗದಿಂದ ಇನ್ನಷ್ಟು

ಬೆಂಗಳೂರು
ಬಜೆಟ್‌ವರೆಗೆ ಕಾವೇರಿಗೆ ಸಾರ್ವಜನಿಕರ ಭೇಟಿ ನಿಷೇಧ

2018–19 ನೇ ಸಾಲಿನ ರಾಜ್ಯ ಬಜೆಟ್‌ (ಫೆ.16) ಮಂಡನೆಯವರೆಗೂ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಗೆ ಸಾರ್ವಜನಿಕರ ಭೇಟಿ ನಿಷೇಧಿಸಲಾಗಿದೆ.

22 Jan, 2018
ಹೊಗೆಯಾಡುತ್ತಲೇ ಇದೆ ಬೆಳ್ಳಂದೂರು ಕೆರೆ: ಇನ್ನೂ ದೂರವಾಗಿಲ್ಲ ಆತಂಕ

ದಂಡೆಯಲ್ಲಿ ಕಸದ ರಾಶಿಗೆ ಕಿಡಿಗೇಡಿಗಳಿಂದ ಬೆಂಕಿ
ಹೊಗೆಯಾಡುತ್ತಲೇ ಇದೆ ಬೆಳ್ಳಂದೂರು ಕೆರೆ: ಇನ್ನೂ ದೂರವಾಗಿಲ್ಲ ಆತಂಕ

22 Jan, 2018
ಜನಪ್ರತಿನಿಧಿಗಳ ಗೈರು: ಅಸಮಾಧಾನ

ಅಂಬಿಗರ ಚೌಡಯ್ಯ ಜಯಂತಿ
ಜನಪ್ರತಿನಿಧಿಗಳ ಗೈರು: ಅಸಮಾಧಾನ

22 Jan, 2018
 ಧಾರಾವಾಹಿ ನಿರ್ಮಾಪಕ ಸೇರಿ ಐವರ ಸೆರೆ

ಟಿಆರ್‌ಪಿ ತಿರುಚಿದ ಆರೋಪ: ಸಿಸಿಬಿ ಕಾರ್ಯಾಚರಣೆ
ಧಾರಾವಾಹಿ ನಿರ್ಮಾಪಕ ಸೇರಿ ಐವರ ಸೆರೆ

22 Jan, 2018
ಮಹರ್ಷಿ ವಾಲ್ಮೀಕಿ ಭವನ ಉದ್ಘಾಟನೆ

ಬೆಂಗಳೂರು
ಮಹರ್ಷಿ ವಾಲ್ಮೀಕಿ ಭವನ ಉದ್ಘಾಟನೆ

22 Jan, 2018