ಅಂತರ್ಜಲ ಮಟ್ಟ ಕುಸಿತ

ಸನಿಹದಲ್ಲಿದೆ ಅಪಾಯ?

ಬರುವ ಬೇಸಿಗೆ ಮತ್ತಷ್ಟು ಭೀಕರವಾಗಲಿದೆ ಮತ್ತು ‘ಕೊಳವೆಬಾವಿ ಯಂತ್ರಗಳ ಆರ್ಥಿಕತೆ’ ಇನ್ನೂ ವಿಸ್ತಾರವಾಗಲಿದೆ! ಊರೂರಿನಲ್ಲೂ ನೀರು ಬಾರದ ಕೊಳವೆಬಾವಿಗಳು ಜನರ ಹಣ ಹಾಗೂ ಭವಿಷ್ಯವನ್ನು ನುಂಗಿಹಾಕಲಿವೆ. ಚುನಾವಣೆ ಘೋಷಣೆಗಿಂತ ಮೊದಲೇ ಪ್ರಚಾರದಲ್ಲಿ ಮುಳುಗಿಬಿಟ್ಟಿರುವ ರಾಜಕೀಯ ಪಕ್ಷಗಳು ಮತ್ತು ನೇತಾರರು ಈ ವಿಷಯ ಎಲ್ಲಕ್ಕಿಂತ ಜರೂರಾದದ್ದು ಎಂದು ಅರಿತಾರೇ?

‘ಅಂತರ್ಜಲ ಮಟ್ಟ ಕುಸಿತ, ಎಚ್ಚೆತ್ತುಕೊಳ್ಳದಿದ್ದರೆ ಕಷ್ಟ’ ಸಂಪಾದಕೀಯ (ಪ್ರ.ವಾ., ಡಿ.27) ಕಣ್ಣು ತೆರೆಸುವಂಥದ್ದು. ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಕುರಿತ ಸಂಗತಿಗಳು ಇನ್ನಾದರೂ ರಾಜ್ಯದ ನೀತಿ ನಿರೂಪಣೆ ಮತ್ತು ಸಾರ್ವಜನಿಕ ಚರ್ಚೆಯ ಆದ್ಯತಾ ವಿಷಯಗಳಾಗುವವೇ?

ಮೂರು ವರ್ಷಗಳ ಸತತ ಬರಗಾಲದಿಂದ ರಾಜ್ಯ ಬಸವಳಿದಿದೆ. ಹೊಳೆ- ಝರಿ, ಕೆರೆ-ಬಾವಿಗಳ ಮೇಲ್ಮೈ ನೀರನ್ನು ನಂಬಿ ಪರಂಪರಾನುಗತವಾಗಿ ಕೃಷಿ ಮಾಡಿಕೊಂಡಿದ್ದ ಮಲೆನಾಡೂ ಇದಕ್ಕೆ ಹೊರತಲ್ಲ. ಕಳೆದ ಬೇಸಿಗೆಯಲ್ಲಂತೂ ಮಣ್ಣಿನ ತೇವಾಂಶ ಕನಿಷ್ಠ ಮಟ್ಟಕ್ಕಿಳಿದು ಇಲ್ಲಿನ ಗದ್ದೆ-ತೋಟಗಳು ಒಣಗಿಹೋದವು. ಆಗಲೂ ಹೊಲದಲ್ಲಿ ಅಷ್ಟಿಟ್ಟು ಹಸಿರು ಉಳಿಸಿಕೊಂಡವರೆಂದರೆ ನೂರಾರು ಅಡಿ ಆಳದ ಕೊಳವೆಬಾವಿಯಿಂದ ನೀರನ್ನೆತ್ತಿ ಬಳಸಿದವರು!

ಹೀಗಾಗಿ, ಕೊಳವೆಬಾವಿ ತೋಡಿ ಅಂತರ್ಜಲ ದಕ್ಕಿದರೆ ಮಾತ್ರ ಕೃಷಿ ಸಾಧ್ಯವಾದೀತು ಎಂಬ ತೀರ್ಮಾನಕ್ಕೆ ಇಡೀ ಕೃಷಿ ಸಮುದಾಯ ಬರುತ್ತಿದೆ! ಈಗಿನ್ನೂ ಹೇಮಂತ; ವರ್ಷಋತು ಬರಲು ಇನ್ನೂ ಅರು ತಿಂಗಳಿವೆ. ಆದರೆ, ಸಹ್ಯಾದ್ರಿಯ ಜಿಲ್ಲೆಗಳಲ್ಲಿ ಈಗಲೇ ನೀರಿನ ಕೊರತೆ ಕಾಣಿಸುತ್ತಿದೆ. ಸಾಲ ಮಾಡಿಯಾದರೂ ಕೊಳವೆಬಾವಿ ತೋಡುವ ಕಾರ್ಯ ಈಗಾಗಲೇ ಎಲ್ಲೆಡೆ ಆರಂಭವಾಗಿದೆ!

ಇಷ್ಟಂತೂ ನಿಜ. ಬರುವ ಬೇಸಿಗೆ ಮತ್ತಷ್ಟು ಭೀಕರವಾಗಲಿದೆ ಮತ್ತು ‘ಕೊಳವೆಬಾವಿ ಯಂತ್ರಗಳ ಆರ್ಥಿಕತೆ’ ಇನ್ನೂ ವಿಸ್ತಾರವಾಗಲಿದೆ! ಊರೂರಿನಲ್ಲೂ ನೀರು ಬಾರದ ಕೊಳವೆಬಾವಿಗಳು ಜನರ ಹಣ ಹಾಗೂ ಭವಿಷ್ಯವನ್ನು ನುಂಗಿಹಾಕಲಿವೆ. ಚುನಾವಣೆ ಘೋಷಣೆಗಿಂತ ಮೊದಲೇ ಪ್ರಚಾರದಲ್ಲಿ ಮುಳುಗಿಬಿಟ್ಟಿರುವ ರಾಜಕೀಯ ಪಕ್ಷಗಳು ಮತ್ತು ನೇತಾರರು ಈ ವಿಷಯ ಎಲ್ಲಕ್ಕಿಂತ ಜರೂರಾದದ್ದು ಎಂದು ಅರಿತಾರೇ?

–ಕೇಶವ ಎಚ್. ಕೊರ್ಸೆ, ಶಿರಸಿ

 

Comments
ಈ ವಿಭಾಗದಿಂದ ಇನ್ನಷ್ಟು

ವಾಚಕರವಾಣಿ
ಗೆಲುವು – ಗೊಂದಲ!

ಬರಲಿಹ ಬೃಹತ್ ಚುನಾವಣೆಯಲಿ, ಯಾವ ತಾವರೆ ಗೆಲುವುದು;

22 Apr, 2018

ವಾಚಕರವಾಣಿ
ಹಣ ಸದ್ಬಳಕೆಯಾಗಲಿ

ವಿಶ್ವ ಪುಸ್ತಕ ದಿನದಂದು (ಏ. 23) ಉಚಿತವಾಗಿ ಒಂದಿಷ್ಟು ಪುಸ್ತಕಗಳನ್ನು ಮಹಿಳಾ ಸಂಘಗಳಿಗೆ, ಶಾಲಾ- ಕಾಲೇಜುಗಳಿಗೆ, ಇತರೆ ಸಂಘ- ಸಂಸ್ಥೆಗಳಿಗೆ ವಿತರಿಸಿದರೆ ‘ವಿಶ್ವ ಪುಸ್ತಕ...

22 Apr, 2018

ವಾಚಕರವಾಣಿ
ಇದೊಂದು ಪರಿಹಾರ

ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯು ಒಂದರಲ್ಲಿ ಗೆದ್ದು ಇನ್ನೊಂದರಲ್ಲಿ ಸೋತರೆ ಅಥವಾ ಎರಡೂ ಕ್ಷೇತ್ರಗಳಲ್ಲಿ ಸೋತರೆ ಹಾನಿ ಏನೂ ಇಲ್ಲ.

22 Apr, 2018

ವಾಚಕರವಾಣಿ
ಸಿನಿಮಾದವರ ಪ್ರಚಾರ

ಮತದಾನ ಮಾಡುವಂತೆ ಜನರನ್ನು ಪ್ರೇರೇಪಿಸಲು ಖ್ಯಾತ ಚಿತ್ರ ನಿರ್ದೇಶಕ, ಗೀತ ರಚನಕಾರ ಯೋಗರಾಜ ಭಟ್ಟರು ‘ಮಾಡಿ ಮಾಡಿ ಮಾಡಿ ಮತದಾನ’ ಎಂಬ ಧ್ಯೇಯ ಗೀತೆಯನ್ನು...

22 Apr, 2018

ವಾಚಕರವಾಣಿ
ಅವರವರ ಭಕುತಿಗೆ

‘ಆತ್ಮವೇ ಇಲ್ಲದವರ ಛದ್ಮವೇಷಗಳ ವಂಚನೆಯ ಆಟ’ (ಪ್ರ.ವಾ., ಏ. 17) ಲೇಖನದ ಬಗ್ಗೆ ಈ ಪ್ರತಿಕ್ರಿಯೆ.

22 Apr, 2018