ದೂರು ದಾಖಲು

ಬಂಟ್ವಾಳ: ಉದ್ಯಮಿಗಳಿಗೆ ಬೆದರಿಕೆ ಕರೆ

‘ಬಂಟ್ವಾಳ ಪೇಟೆ ನಿವಾಸಿ ಇಲ್ಲಿನ ವಿಎನ್ಆರ್  ಚಿನ್ನಾಭರಣ ಮಳಿಗೆ ಮಾಲೀಕ ನಾಗೇಂದ್ರ ಬಿ.ಬಾಳಿಗಾ ಮತ್ತು ಕೇಲ್ದೋಡಿ ನಿವಾಸಿ, ಬಂಟ್ವಾಳ ಪೇಟೆಯ ಅಂಚನ್ ಗಾರ್ಮೆಂಟ್ಸ್ ಮಳಿಗೆ ಮಾಲೀಕ ಪ್ರಕಾಶ ಅಂಚನ್ ಎಂಬುವರಿಗೆ ಮಂಗಳವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ವಿದೇಶದಿಂದ ಹಫ್ತಾಕ್ಕಾಗಿ ಕರೆ ಬಂದಿದೆ’

ಸಾಂದರ್ಭಿಕ ಚಿತ್ರ

ಬಂಟ್ವಾಳ: ಬಂಟ್ವಾಳ ಪೇಟೆಯ ಸ್ವರ್ಣ ಉದ್ಯಮಿ ಮತ್ತು  ಜವಳಿ ಉದ್ಯಮಿಯೊಬ್ಬರಿಗೆ ವಿದೇಶದಿಂದ ಹಫ್ತಾ ಬೆದರಿಕೆ ಕರೆ ಬಂದಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.

‘ಬಂಟ್ವಾಳ ಪೇಟೆ ನಿವಾಸಿ ಇಲ್ಲಿನ ವಿಎನ್ಆರ್  ಚಿನ್ನಾಭರಣ ಮಳಿಗೆ ಮಾಲೀಕ ನಾಗೇಂದ್ರ ಬಿ.ಬಾಳಿಗಾ ಮತ್ತು ಕೇಲ್ದೋಡಿ ನಿವಾಸಿ, ಬಂಟ್ವಾಳ ಪೇಟೆಯ ಅಂಚನ್ ಗಾರ್ಮೆಂಟ್ಸ್ ಮಳಿಗೆ ಮಾಲೀಕ ಪ್ರಕಾಶ ಅಂಚನ್ ಎಂಬುವರಿಗೆ ಮಂಗಳವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ವಿದೇಶದಿಂದ ಹಫ್ತಾಕ್ಕಾಗಿ ಕರೆ ಬಂದಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಾಗೇಂದ್ರ ಬಿ.ಬಾಳಿಗಾ ಇವರ ಮೊಬೈಲ್‌ಗೆ ಇಂಟರ್ನೆಟ್ ಕರೆ ಬಂದಿದ್ದು, 'ನಾನು ಕಲಿ ಯೋಗೀಶ ಮಾತನಾಡುತ್ತಿದ್ದೇನೆ. ಮುಂದಿನ ಎರಡು ದಿನಗಳೊಳಗೆ ₹50 ಲಕ್ಷ ನೀಡಬೇಕು. ಇಲ್ಲದಿದ್ದಲ್ಲಿ ಪರಿಸ್ಥಿತಿ ನೆಟ್ಟಗಿರದು' ಎಂದು ಎಚ್ಚರಿಸಲಾಗಿದೆ.

ಪ್ರಕಾಶ ಅಂಚನ್ ಇವರ ಅಂಗಡಿ ಸ್ಥಿರ ದೂರವಾಣಿಗೆ ಕರೆ ಮಾಡಿ ‘10 ದಿನಗಳ ಒಳಗೆ ₹25 ಲಕ್ಷ ನೀಡಬೇಕು. ಇಲ್ಲದಿದ್ದಲ್ಲಿ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಈ ಹಿಂದೆ ಬಂದಿರುವ ಗತಿ ನಿಮಗೂ ಬರಲಿದೆ’ ಎಂದು ಅದೇ ಹೆಸರಿನ ವ್ಯಕ್ತಿ ಎಚ್ಚರಿಸಿದ್ದು, ಈ ಕರೆಗಳ ಬಗ್ಗೆ ಪರಾಮರ್ಶಿಸಿದ ಬಳಿಕ ಮಂಗಳವಾರ ರಾತ್ರಿ ನಗರ ಠಾಣೆ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ’ ಎಂದು ತಿಳಿಸಲಾಗಿದೆ.

ಪೊಲೀಸ್ ರಕ್ಷಣೆ ಭರವಸೆ: ಈ ಬಗ್ಗೆ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಅವರು ಇಬ್ಬರು ಉದ್ಯಮಿಗಳನ್ನು ಕೂಡಾ ಬುಧವಾರ ಮಂಗಳೂರಿಗೆ ಕರೆಸಿಕೊಂಡು ಸೂಕ್ತ ಪೊಲೀಸ್ ರಕ್ಷಣೆ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಹಿಟ್ ಅಂಡ್ ರನ್ ನಾನಲ್ಲ, ಸಿದ್ದರಾಮಯ್ಯ: ಎಚ್.ಡಿ.ಕುಮಾರಸ್ವಾಮಿ

ಕೊಪ್ಪಳ
ಹಿಟ್ ಅಂಡ್ ರನ್ ನಾನಲ್ಲ, ಸಿದ್ದರಾಮಯ್ಯ: ಎಚ್.ಡಿ.ಕುಮಾರಸ್ವಾಮಿ

21 Jan, 2018
ಆಕಸ್ಮಿಕ ಬೆಂಕಿ; ಅನಿಲ ಸ್ಫೋಟ, ಹಾನಿ

ರಾಜ್ಯ
ಆಕಸ್ಮಿಕ ಬೆಂಕಿ; ಅನಿಲ ಸ್ಫೋಟ, ಹಾನಿ

21 Jan, 2018
ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

ಭೂಮಿಪೂಜೆ ಕಾರ್ಯಕ್ರಮ
ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ

21 Jan, 2018
ಚಾಮುಂಡಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ: ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ
ಚಾಮುಂಡಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ: ಸಿದ್ದರಾಮಯ್ಯ

21 Jan, 2018
ಪದೇ ಪದೆ ಬಂದ್ ಮಾಡುವುದರಿಂದ ಜನರಿಗೆ ತೊಂದರೆ, ಯಾರನ್ನು ಕೇಳಿ ಬಂದ್ ಕರೆ ನೀಡಿದ್ದೀರಿ? ವಾಟಾಳ್‌ಗೆ ಹೋರಾಟಗಾರರ ಪ್ರಶ್ನೆ!

ಕಳಸ ಬಂಡೂರಿ
ಪದೇ ಪದೆ ಬಂದ್ ಮಾಡುವುದರಿಂದ ಜನರಿಗೆ ತೊಂದರೆ, ಯಾರನ್ನು ಕೇಳಿ ಬಂದ್ ಕರೆ ನೀಡಿದ್ದೀರಿ? ವಾಟಾಳ್‌ಗೆ ಹೋರಾಟಗಾರರ ಪ್ರಶ್ನೆ!

21 Jan, 2018