ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್

ಚಾಂಪಿಯನ್ನರಿಗೆ ಆಘಾತ

ಮೊದಲ ಪಂದ್ಯದಲ್ಲಿ ಸಿಕ್ಕಿ ರೆಡ್ಡಿ–ವೈ ಲೀ ಜೋಡಿ 15–13, 15–11ರಲ್ಲಿ ಇವಾನೊವ್ ಮತ್ತು ಸೊಜೊನೊವ್ ಜೋಡಿಯನ್ನು ಸೋಲಿಸಿ ಚೆನ್ನೈಗೆ ಮುನ್ನಡೆ ಗಳಿಸಿಕೊಟ್ಟರು. ಆದರೆ ನಂತರದ ಪಂದ್ಯದಲ್ಲಿ ಕೆ.ವಿನ್ಸಂಟ್‌ 15–10, 15–13ರಲ್ಲಿ ಲೆವರ್ಡೆಜ್‌ ವಿರುದ್ಧ ಗೆದ್ದು ತಿರುಗೇಟು ನೀಡಿದರು.

ಮಿಶ್ರ ಡಬಲ್ಸ್‌ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ವ್ಲಾಡಿಮಿರ್ ಇವಾನೊವ್‌ ಅವರ ಆಟದ ಭಂಗಿ

ಲಖನೌ: ಕೊನೆಯ ಪಂದ್ಯದಲ್ಲಿ ಅಮೋಘ ಆಟ ಆಡಿದ ಡೆಲ್ಲಿ ಡ್ಯಾಷರ್ಸ್ ತಂಡದವರು ಪ್ರೀಮಿಯರ್‌ ಬ್ಯಾಡ್ಮಿಂಟನ್ ಲೀಗ್‌ನ ಬುಧವಾರದ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸ್ಮಾಷರ್ಸ್‌ ತಂಡವನ್ನು ಮಣಿಸಿದರು. ಗ್ಯಾಬ್ರಿಯೆಲ್‌ ಅಡ್‌ಕಾಕ್ ಹಿಂಗಾಲಿನ ಗಾಯಕ್ಕೆ ಒಳಗಾದ ಕಾರಣ ಚೆನ್ನೈ ತಂಡ ಸೋಲೊಪ್ಪಿಕೊಳ್ಳಬೇಕಾಯಿತು.

ಮೊದಲ ಪಂದ್ಯದಲ್ಲಿ ಸಿಕ್ಕಿ ರೆಡ್ಡಿ–ವೈ ಲೀ ಜೋಡಿ 15–13, 15–11ರಲ್ಲಿ ಇವಾನೊವ್ ಮತ್ತು ಸೊಜೊನೊವ್ ಜೋಡಿಯನ್ನು ಸೋಲಿಸಿ ಚೆನ್ನೈಗೆ ಮುನ್ನಡೆ ಗಳಿಸಿಕೊಟ್ಟರು. ಆದರೆ ನಂತರದ ಪಂದ್ಯದಲ್ಲಿ ಕೆ.ವಿನ್ಸಂಟ್‌ 15–10, 15–13ರಲ್ಲಿ ಲೆವರ್ಡೆಜ್‌ ವಿರುದ್ಧ ಗೆದ್ದು ತಿರುಗೇಟು ನೀಡಿದರು.

ಮೂರನೇ ಪಂದ್ಯದಲ್ಲೂ ಡೆಲ್ಲಿ ಪಾರಮ್ಯ ಮೆರೆಯಿತು. ಟಿ ಹವೊಯ್‌ 15–10, 15–14ರಲ್ಲಿ ಸೈನ್ಸೊಂಬೊನ್ಸುಕ್‌ ಎದುರು ಗೆದ್ದರು. ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು ಕೂಡ ಸೋಲುವುದರೊಂದಿಗೆ ಚೆನ್ನೈಆಸೆ ಕಮರಿತು. ಕೊರಿಯಾದ ಸಂಗ್ ಜಿ ಹ್ಯೂನ್‌ 11–15, 15–13, 15–14ರಿಂದ ಸಿಂಧು ಅವರನ್ನು ಮಣಿಸಿ ಡೆಲ್ಲಿ ಡ್ಯಾಷರ್ಸ್‌ ಜಯ ಖಚಿತಪಡಿಸಿದರು.

ಟ್ರಂಪ್ ಪಂದ್ಯದಲ್ಲಿ ಅಡ್‌ಕಾಕ್ ದಂಪತಿ ಗ್ಯಾಬ್ರಿಯೆಲ್‌ ಮತ್ತು ಕ್ರಿಸ್‌ ವಿರುದ್ಧ ಅಶ್ವಿನಿ ‍ಪೊನ್ನಪ್ಪ ಮತ್ತು ಇವಾನೊವ್‌ ಗೆದ್ದು ತಂಡದಲ್ಲಿ ಸಂಭ್ರಮ ಮೂಡಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಹಾಕಿ ಶಿಬಿರಕ್ಕೆ 61 ಮಂದಿ ಆಟಗಾರ್ತಿಯರು

ನವದೆಹಲಿ
ಹಾಕಿ ಶಿಬಿರಕ್ಕೆ 61 ಮಂದಿ ಆಟಗಾರ್ತಿಯರು

22 Apr, 2018
ರ‍್ಯಾಲಿ: ಸಂತೋಷ್‌ಗೆ 19ನೇ ಸ್ಥಾನ

ಬೈಕ್‌ ರ‍್ಯಾಲಿ
ರ‍್ಯಾಲಿ: ಸಂತೋಷ್‌ಗೆ 19ನೇ ಸ್ಥಾನ

22 Apr, 2018
ಕಿರಿಯರಿಗೆ ಗೋಪಿಚಂದ್‌ ತರಬೇತಿ

ಬ್ಯಾಡ್ಮಿಂಟನ್‌
ಕಿರಿಯರಿಗೆ ಗೋಪಿಚಂದ್‌ ತರಬೇತಿ

22 Apr, 2018
ಈಡನ್‌ ಅಂಗಳದಲ್ಲಿ ರಾಹುಲ್‌–ಗೇಲ್ ಗರ್ಜನೆ

ಐಪಿಎಲ್‌ ಕ್ರಿಕೆಟ್‌ ಟೂರ್ನಿ
ಈಡನ್‌ ಅಂಗಳದಲ್ಲಿ ರಾಹುಲ್‌–ಗೇಲ್ ಗರ್ಜನೆ

22 Apr, 2018

ಹಾಕಿ ಟೂರ್ನಿ
ವಾಟೇರಿರ, ಬೊಪ್ಪಂಡ ತಂಡಕ್ಕೆ ಗೆಲುವು

ಕೊಡವ ಕುಟುಂಬಗಳ ಕುಲ್ಲೇಟಿರ ಹಾಕಿ ಟೂರ್ನಿಯಲ್ಲಿ ಶನಿವಾರ ವಾಟೇರಿರ ಮತ್ತು ನಾಟೋಳಂಡ ತಂಡಗಳು ನಿಗದಿತ ಸಮಯದಲ್ಲಿ 2–2 ಗೋಲು ದಾಖಲಿಸಿ ಸಮಬಲದ ಹೋರಾಟ ನಡೆಸಿದವು....

22 Apr, 2018