, ದಲಿತರ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಮೋದಿ ಮೌನ ಮುರಿಯಲಿ: ಜಿಗ್ನೇಶ್ ಮೆವಾನಿ | ಪ್ರಜಾವಾಣಿ
ಬಿಜೆಪಿಗೆ ನನ್ನನ್ನು ಕಂಡರೆ ಭಯ

ದಲಿತರ ಮೇಲೆ ನಡೆಯುವ ದೌರ್ಜನ್ಯದ ಬಗ್ಗೆ ಮೋದಿ ಮೌನ ಮುರಿಯಲಿ: ಜಿಗ್ನೇಶ್ ಮೆವಾನಿ

ಬಿಜೆಪಿಗೆ ನನ್ನನ್ನು ಕಂಡರೆ ಭಯ. ಗುಜರಾತ್ ಚುನಾವಣೆಯ ನಂತರ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾವು ಜಾತಿಗಳು ಇಲ್ಲದೇ ಇರುವ ಭಾರತವನ್ನು ಭಯಸುತ್ತೇವೆ. ಶಾಂತಿಯುತವಾಗಿ ರ‍್ಯಾಲಿ ನಡೆಸಲು ದಲಿತರಿಗೆ ಹಕ್ಕು ಇಲ್ಲವೇ?

ಜಿಗ್ನೇಶ್ ಮೆವಾನಿ

ನವದೆಹಲಿ: ಮುಂಬೈನಲ್ಲಿ ರ‍್ಯಾಲಿ ನಡೆಸಲು ಅನುಮತಿ ನಿರಾಕರಿಸಿದ ಬೆನ್ನಲ್ಲೇ ಗುಜರಾತಿನ ಶಾಸಕ ಜಿಗ್ನೇಶ್ ಮೆವಾನಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ಕೇಂದ್ರ ಸರ್ಕಾರ ತನ್ನ ಮೇಲೆ ಹಗೆ ಸಾಧಿಸುತ್ತಿದೆ ಎಂದು ಆರೋಪಿಸಿದ ಮೆವಾನಿ ಮಹಾರಾಷ್ಟ್ರದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ಮೋದಿ ಮೌನ ಮುರಿಯಬೇಕು ಎಂದಿದ್ದಾರೆ.

ಭೀಮಾ–ಕೋರೆಗಾಂವ್‌ ಸಮರದ 200ನೇ ವಾರ್ಷಿಕೋತ್ಸವದ ಪ್ರಯುಕ್ತ ಪುಣೆಯ ಶನಿವಾರ್‌ವಾಡಾದಲ್ಲಿ ಕಳೆದ ಡಿ. 31ರಂದು ಏರ್ಪಡಿಸಿದ್ದ ‘ಎಲ್ಗರ್‌ ಪರಿಷತ್‌’ ಕಾರ್ಯಕ್ರಮದಲ್ಲಿ  ‘ಪ್ರಚೋದನಕಾರಿ’ ಭಾಷಣ ಮಾಡಿದ್ದಾರೆ ಎಂಬ ಆರೋಪದಡಿಯಲ್ಲಿ ಮೆವಾನಿ ವಿರುದ್ಧ ಪುಣೆ  ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮೆವಾನಿ ತಮ್ಮ ಭಾಷಣದಲ್ಲಿ ಒಂದೇ ಒಂದು ಪ್ರಚೋದನಾಕಾರಿ ಪದವಿರಲಿಲ್ಲ ಎಂದಿದ್ದಾರೆ.

ಬಿಜೆಪಿಗೆ ನನ್ನನ್ನು ಕಂಡರೆ ಭಯ. ಗುಜರಾತ್ ಚುನಾವಣೆಯ ನಂತರ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನಾವು ಜಾತಿಗಳು ಇಲ್ಲದೇ ಇರುವ ಭಾರತವನ್ನು ಭಯಸುತ್ತೇವೆ. ಭೀಮಾ–ಕೋರೆಗಾಂವ್‌ ಸಮರದ 200ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶಾಂತಿಯುತವಾಗಿ ರ‍್ಯಾಲಿ ನಡೆಸಲು ದಲಿತರಿಗೆ ಹಕ್ಕು ಇಲ್ಲವೇ? ದೇಶದಲ್ಲಿ ದಲಿತ ಮತ್ತು ಇತರ ಅಲ್ಪ ಸಂಖ್ಯಾತ ಸಮುದಾಯದವರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಖಂಡಿಸಿ ಜನವರಿ 9ರಂದು ನವದೆಹಲಿಯಲ್ಲಿ ಯುವ ಅಹಂಕಾರ್ (ಯುವಜನರ ಹೆಮ್ಮೆ)  ರ‍್ಯಾಲಿಯನ್ನು ಆಯೋಜಿಸಲಿದ್ದೇವೆ ಎಂದಿದ್ದಾರೆ ಮೆವಾನಿ.

Comments
ಈ ವಿಭಾಗದಿಂದ ಇನ್ನಷ್ಟು
ಹಜ್ ಯಾತ್ರೆಗೆ ಸಹಾಯಧನ ಇಲ್ಲ

ಮುಕ್ತಾರ್ ಅಬ್ಬಾಸ್ ನಖ್ವಿ
ಹಜ್ ಯಾತ್ರೆಗೆ ಸಹಾಯಧನ ಇಲ್ಲ

17 Jan, 2018
ಸಾಕ್ಷಿಯನ್ನು ಖರೀದಿಸಿಲ್ಲ

ಗೋವಾ ಆರೋಪಕ್ಕೆ ಕರ್ನಾಟಕ ತಿರುಗೇಟು
ಸಾಕ್ಷಿಯನ್ನು ಖರೀದಿಸಿಲ್ಲ

17 Jan, 2018
ಹತ್ಯೆಗೆ ಸಂಚು: ತೊಗಾಡಿಯಾ

ಸ್ವತಂತ್ರ ತನಿಖೆಗೆ ಕಾಂಗ್ರೆಸ್‌ ಆಗ್ರಹ
ಹತ್ಯೆಗೆ ಸಂಚು: ತೊಗಾಡಿಯಾ

17 Jan, 2018
ಶಮನವಾಗದ ಬಿಕ್ಕಟ್ಟು

ಸುಪ್ರೀಂ ಕೋರ್ಟ್‌
ಶಮನವಾಗದ ಬಿಕ್ಕಟ್ಟು

17 Jan, 2018

ಚಂಡಿಗಡ
ಹರಿಯಾಣ: ‘ಪದ್ಮಾವತ್’ಗೆ ನಿಷೇಧ

ವಿರೋಧಕ್ಕೆ ಗುರಿಯಾದ, ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರವನ್ನು ಹರಿಯಾಣದಲ್ಲಿ ಪ್ರದರ್ಶಿಸುವುದಕ್ಕೆ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ನೇತೃತ್ವದ ಸರ್ಕಾರ ತಡೆ ನೀಡಿದೆ.

17 Jan, 2018