ಹೈದರಾಬಾದ್‌

ಈಜಲು ತೆರಳಿದ ನಾಲ್ವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ನೀರುಪಾಲು

ವಿದ್ಯಾರ್ಥಿಗಳು ಪಶ್ಚಿಮ ಗೋದಾವರಿ ಜಿಲ್ಲೆಯ ವಟ್ಲೂರು ಸಮೀಪದ ರಾಮಚಂದ್ರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶನಿವಾರ ಕಾಲೇಜಿಗೆ ರಜೆ ಹಾಕಿ ಭೋಗಪುರದ ನೀರಾವರಿ ಟ್ಯಾಂಕ್‌ನಲ್ಲಿ ಈಜಲು ಹೋಗಿದ್ದರು.

ಈಜಲು ತೆರಳಿದ ನಾಲ್ವರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ನೀರುಪಾಲು

ಹೈದರಾಬಾದ್‌: ಈಜಲು ಹೋಗಿ ನಾಲ್ಕು ಮಂದಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಭಾನುವಾರ ಸಂಜೆ ವೇಳೆಗೆ ನಾಲ್ಕು ಮಂದಿ ಮೃತದೇಹಗಳನ್ನು ಪೊಲೀಸರು ಹೊರತೆಗೆದಿದ್ದಾರೆ.

ವಿದ್ಯಾರ್ಥಿಗಳು ಪಶ್ಚಿಮ ಗೋದಾವರಿ ಜಿಲ್ಲೆಯ ವಟ್ಲೂರು ಸಮೀಪದ ರಾಮಚಂದ್ರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಶನಿವಾರ ಕಾಲೇಜಿಗೆ ರಜೆ ಹಾಕಿ ಭೋಗಪುರದ ನೀರಾವರಿ ಟ್ಯಾಂಕ್‌ನಲ್ಲಿ ಈಜಲು ಹೋಗಿದ್ದರು.

ಮೃತರನ್ನು ಗುಮ್ಮಿ ವಿಜಯಶಂಕರ್(22), ಕಾಳಿದಿಡಿ ಹರಿಕೃಷ್ಣರಾಜು(22), ಅಂಕಾಲಾ ಸಾಯಿ ಕಿರಣ ಪರಶುರಾಮ(22), ಕೋಟಾ ಸಾಯಿ(20) ಎಂದು ಗುರುತಿಸಲಾಗಿದೆ.

ವಿದ್ಯಾರ್ಥಿಗಳು ಶನಿವಾರ ತರಗತಿಗೆ ಹಾಜರಾಗಿರಲಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಹಜ್ ಯಾತ್ರೆಗೆ ಸಹಾಯಧನ ಇಲ್ಲ

ಮುಕ್ತಾರ್ ಅಬ್ಬಾಸ್ ನಖ್ವಿ
ಹಜ್ ಯಾತ್ರೆಗೆ ಸಹಾಯಧನ ಇಲ್ಲ

17 Jan, 2018
ಸಾಕ್ಷಿಯನ್ನು ಖರೀದಿಸಿಲ್ಲ

ಗೋವಾ ಆರೋಪಕ್ಕೆ ಕರ್ನಾಟಕ ತಿರುಗೇಟು
ಸಾಕ್ಷಿಯನ್ನು ಖರೀದಿಸಿಲ್ಲ

17 Jan, 2018
ಹತ್ಯೆಗೆ ಸಂಚು: ತೊಗಾಡಿಯಾ

ಸ್ವತಂತ್ರ ತನಿಖೆಗೆ ಕಾಂಗ್ರೆಸ್‌ ಆಗ್ರಹ
ಹತ್ಯೆಗೆ ಸಂಚು: ತೊಗಾಡಿಯಾ

17 Jan, 2018
ಶಮನವಾಗದ ಬಿಕ್ಕಟ್ಟು

ಸುಪ್ರೀಂ ಕೋರ್ಟ್‌
ಶಮನವಾಗದ ಬಿಕ್ಕಟ್ಟು

17 Jan, 2018

ಚಂಡಿಗಡ
ಹರಿಯಾಣ: ‘ಪದ್ಮಾವತ್’ಗೆ ನಿಷೇಧ

ವಿರೋಧಕ್ಕೆ ಗುರಿಯಾದ, ಸಂಜಯ್‌ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತ್’ ಚಿತ್ರವನ್ನು ಹರಿಯಾಣದಲ್ಲಿ ಪ್ರದರ್ಶಿಸುವುದಕ್ಕೆ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ನೇತೃತ್ವದ ಸರ್ಕಾರ ತಡೆ ನೀಡಿದೆ.

17 Jan, 2018