ಬಸವನಬಾಗೇವಾಡಿ

ಆಕರ್ಷಕ ಆರ್‌ಎಸ್‌ಎಸ್‌ ಪಥಸಂಚಲನ

ಸಮಾವೇಶದ ಅಂಗವಾಗಿ ಬಸವೇಶ್ವರ ವೃತ್ತವನ್ನು ಕೇಸರಿ ಬಟ್ಟೆ ಹಾಗೂ ಪರಪರಿಯಿಂದ ಅಲಂಕರಿಸಲಾಗಿತ್ತು. ಪಥಸಂಚಲನ ಸಾಗಿದ ಮಾರ್ಗದ ರಸ್ತೆಯ ಅಲ್ಲಲ್ಲಿ ರಂಗವಲ್ಲಿ ಚಿತ್ತಾರ ಬಿಡಿಸಲಾಗಿತ್ತು.

ಬಸವನಬಾಗೇವಾಡಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲ್ಲೂಕು ಸಮಾವೇಶದ ಅಂಗವಾಗಿ ಭಾನುವಾರ ಗಣವೇಷಧಾರಿ ಸ್ವಯಂಸೇವಕರಿಂದ ಆಕರ್ಷಕ ಪಥ ಸಂಚಲನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು.

ಸ್ಥಳೀಯ ನಿಯೋಜಿತ ಮೆಗಾ ಮಾರುಕಟ್ಟೆ ಆವರಣದಲ್ಲಿ ಬಸವನಬಾಗೇವಾಡಿ ಹಾಗೂ ತಾಳಿಕೋಟೆಯ ಸ್ವಯಂ ಸೇವಕರ ಘೋಷವಾದ್ಯ ತಂಡಗಳೊಂದಿಗೆ 300ಕ್ಕೂ ಹೆಚ್ಚು ಗಣವೇಶಧಾರಿ ಸ್ವಯಂಸೇವಕರೊಂದಿಗೆ ಆರಂಭವಾದ ಪಥ ಸಂಚಲನವು ಪ್ರಮುಖ ರಸ್ತೆಗಳಲ್ಲಿ ಸಾಗಿ ವಿಜಯಪುರ ರಸ್ತೆ ಮಾರ್ಗವಾಗಿ ಬಸವೇಶ್ವರ ಪದವಿ ಪೂರ್ವ ಕಾಲೇಜು ಆವರಣದ ಸಮಾವೇಶದ ಮುಖ್ಯ ವೇದಿಕೆಗೆ ತಲುಪಿತು.

ಸಮಾವೇಶದ ಅಂಗವಾಗಿ ಬಸವೇಶ್ವರ ವೃತ್ತವನ್ನು ಕೇಸರಿ ಬಟ್ಟೆ ಹಾಗೂ ಪರಪರಿಯಿಂದ ಅಲಂಕರಿಸಲಾಗಿತ್ತು. ಪಥಸಂಚಲನ ಸಾಗಿದ ಮಾರ್ಗದ ರಸ್ತೆಯ ಅಲ್ಲಲ್ಲಿ ರಂಗವಲ್ಲಿ ಚಿತ್ತಾರ ಬಿಡಿಸಲಾಗಿತ್ತು. ಸ್ವಾಗತ ಕಮಾನುಗಳು, ಮಾರ್ಗ ಮಧ್ಯೆ ಭಾರತ ಮಾತೆ, ಛತ್ರಪತಿ ಶಿವಾಜಿ, ಸ್ವಾಮಿ ವಿವೇಕಾನಂದರ ಮೂರ್ತಿ ಹಾಗೂ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಗಿತ್ತು.

ಪಥ ಸಂಚಲನದಲ್ಲಿ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ಜಿಲ್ಲಾ ಪಂಚಾಯ್ತಿ ಸದಸ್ಯ ಸಂತೋಷ ನಾಯಕ, ಮಾಜಿ ಸದಸ್ಯ ಶಿವಾನಂದ ಅವಟಿ, ಸಿದ್ದು ಪಟ್ಟಣಶೆಟ್ಟಿ, ಸಂಗನಗೌಡ ಚಿಕ್ಕೊಂಡ, ಜಗದೀಶ ಕೊಟ್ರಶೆಟ್ಟಿ, ರವಿ ಪಡಶೆಟ್ಟಿ, ಡಾ.ಕರುಣಾಕರ ಚೌಧರಿ, ಸತೀಶ ಕ್ವಾಟಿ, ತಮ್ಮಣ್ಣ ಬಡಿಗೇರ, ರಾಜುಗೌಡ ಚಿಕ್ಕೊಂಡ, ರಾಚಯ್ಯ ಗಣಕುಮಾರ, ಪ್ರವೀಣ ಪವಾರ, ಸುನೀಲ ಜಮಖಂಡಿ, ಶಂಕರ ಹದಿಮೂರ, ಬಸವರಾಜ ಕೂಡಗಿ, ಮಹಾಂತೇಶ ಮನಗೂಳಿ ಪಾಲ್ಗೊಂಡಿದ್ದರು.

Comments
ಈ ವಿಭಾಗದಿಂದ ಇನ್ನಷ್ಟು
ಆಲಮಟ್ಟಿ ಉದ್ಯಾನಕ್ಕೆ ಪ್ರವಾಸಿಗರ ಲಗ್ಗೆ

ಆಲಮಟ್ಟಿ
ಆಲಮಟ್ಟಿ ಉದ್ಯಾನಕ್ಕೆ ಪ್ರವಾಸಿಗರ ಲಗ್ಗೆ

16 Jan, 2018
ನೀರಾವರಿಗೆ ₹ 13 ಸಾವಿರ ಕೋಟಿ ಖರ್ಚು

ವಿಜಯಪುರ
ನೀರಾವರಿಗೆ ₹ 13 ಸಾವಿರ ಕೋಟಿ ಖರ್ಚು

15 Jan, 2018

ಸಿಂದಗಿ
ಇಷ್ಟಲಿಂಗ ದೇವರಲ್ಲ, ಮಹತ್ವದ್ದೂ ಅಲ್ಲ

‘ಸಿದ್ಧರಾಮೇಶ್ವರರು ವಡ್ಡರ ಸಮುದಾಯಕ್ಕೆ ಸೇರಿದವರು ಎಂಬು ದನ್ನು ಸೊಲ್ಲಾಪುರ, ವಿಜಯಪುರದ ಭಕ್ತರು ಈಗಲೂ ಒಪ್ಪುವುದಿಲ್ಲ ಎಂಬುದು ವಿಷಾದಕರ ಸಂಗತಿ’ ಎಂದರು. ‘ಭೋವಿ ಸಮುದಾಯದ ಜನತೆ...

15 Jan, 2018
ಬಿಎಲ್‌ಡಿಇಗೆ ಡೆಪ್ಯೂಟಿ ಹೈಕಮಿಷನರ್‌ ಭೇಟಿ

ವಿಜಯಪುರ
ಬಿಎಲ್‌ಡಿಇಗೆ ಡೆಪ್ಯೂಟಿ ಹೈಕಮಿಷನರ್‌ ಭೇಟಿ

14 Jan, 2018

ಸಿಂದಗಿ
₹ 2.59 ಕೋಟಿ ವೆಚ್ಚದ ಸಿ.ಸಿ ರಸ್ತೆಗಳಿಗೆ ಚಾಲನೆ

ಹೀಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಜೊತೆಗೆ ಡಾ.ಅಂಬೇಡ್ಕರ್ ಭವನ ಮತ್ತು ಡಾ.ಬಾಬು ಜಗಜೀವನರಾಂ ಭವನಗಳು ಕೂಡ...

14 Jan, 2018